ಸಿನಿಮಾ ಗೆದ್ದ ಖುಷಿಯಲ್ಲಿ ಸಾರಾ ಅರ್ಜುನ್ ಭಾವುಕ - ಅವರು ಆಡಿದ ಮಾತುಗಳು ಈಗ ಸಖತ್ ವೈರಲ್!!

ಸಿನಿಮಾ ಅಂದಮೇಲೆ ನಮಗೆ ಪರದೆಯ ಮೇಲೆ ಕಾಣುವ ಹೀರೋ, ಹಿರೋಯಿನ್ ಮಾತ್ರ ನೆನಪಿರುತ್ತಾರೆ. ಆದರೆ ಒಂದು ಸಿನಿಮಾ ಸೂಪರ್ ಹಿಟ್ ಆಯ್ತು ಅಂದ್ರೆ ಅದರ ಹಿಂದೆ ನೂರಾರು ಜನರ ಬೆವರಿನ ಹನಿ ಇರುತ್ತೆ. ಇದನ್ನೇ ಈಗ ನಟಿ ಸಾರಾ ಅರ್ಜುನ್ ಬಹಳ ಸುಂದರವಾಗಿ ನೆನಪಿಸಿಕೊಂಡಿದ್ದಾರೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರೋ 'ಧುರಂಧರ್ 2' ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಾರಾ ಒಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಅವಾರ್ಡ್ ಫಂಕ್ಷನ್‌ನಲ್ಲಿ ಸಿಗದ ಗೌರವ ಸೋಷಿಯಲ್ ಮೀಡಿಯಾದಲ್ಲಿ ಸಿಕ್ತು
ಅವಾರ್ಡ್ ಫಂಕ್ಷನ್‌ನಲ್ಲಿ ಸಿಗದ ಗೌರವ ಸೋಷಿಯಲ್ ಮೀಡಿಯಾದಲ್ಲಿ ಸಿಕ್ತು

ಸಾರಾ ಅರ್ಜುನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೂಟಿಂಗ್ ಸಮಯದ ಕೆಲವು ಮಸ್ತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರ ಜೊತೆಗೆ ನಿರ್ದೇಶಕ ಆದಿತ್ಯ ಧರ್ ಅವರ ಬಗ್ಗೆ ಮನದಾಳದ ಮಾತುಗಳನ್ನು ಬರೆದಿದ್ದಾರೆ. "ನಾನು ಮೊದಲ ಬಾರಿಗೆ ಆದಿತ್ಯ ಸರ್ ಅವರನ್ನು ಭೇಟಿಯಾದಾಗ ಅವರ ಕಣ್ಣುಗಳಲ್ಲಿ ಒಂದು ಸ್ಪಾರ್ಕ್ ಇತ್ತು. ಇವರು ಸಿನಿಮಾ ರಂಗದಲ್ಲಿ ಏನೋ ದೊಡ್ಡ ಮ್ಯಾಜಿಕ್ ಮಾಡ್ತಾರೆ ಅಂತ ನನಗೆ ಆಗಲೇ ಅನ್ನಿಸಿತ್ತು," ಅಂತ ಸಾರಾ ನೆನಪಿಸಿಕೊಂಡಿದ್ದಾರೆ. ಇಂದು ಆ ನಂಬಿಕೆ ನಿಜವಾಗಿದೆ ಅನ್ನೋದು ಇಡೀ ಚಿತ್ರತಂಡದ ಖುಷಿಗೆ ಕಾರಣ.

View this post on Instagram

A post shared by Sara Arjun (@saraarjunn)

ಸಾಮಾನ್ಯವಾಗಿ ಅವಾರ್ಡ್ ಫಂಕ್ಷನ್‌ಗಳಲ್ಲಿ ಮಾತ್ರ ನೆನಪಿಸಿಕೊಳ್ಳುವ ಟೆಕ್ನಿಷಿಯನ್‌ಗಳ ಬಗ್ಗೆ ಸಾರಾ ವಿಶೇಷವಾಗಿ ಬರೆದಿದ್ದಾರೆ. "ಕ್ಯಾಮೆರಾ ಮುಂದೆ ನಾವು ಆಕ್ಟ್ ಮಾಡ್ತೀವಿ ಸರಿ, ಆದರೆ ಫ್ರೇಮ್‌ನ ಆಚೆ ನಿಂತು ಕೆಲಸ ಮಾಡುವ ಜನರ ಒಂದು ದೊಡ್ಡ ಸೈನ್ಯವೇ ಇರುತ್ತೆ. ಕಾಸ್ಟ್ಯೂಮ್ ಡಿಸೈನರ್ಸ್ ಇರಲಿ, ಮ್ಯೂಸಿಕ್ ಟೀಮ್ ಇರಲಿ ಅಥವಾ ಆ ಸಣ್ಣ ಸಣ್ಣ ಡೀಟೇಲಿಂಗ್ ಗಮನಿಸುವ ಪ್ರತಿಯೊಬ್ಬರಿಗೂ ಈ ಗೆಲುವು ಸಲ್ಲಬೇಕು," ಅಂತ ಸಾರಾ ಹೇಳಿದ್ದಾರೆ. ಅವರನ್ನು ಸಾರಾ 'Real Heroes Behind the Camera' ಅಂತ ಕರೆದಿದ್ದಾರೆ.

ನಿರ್ದೇಶನ, ಪ್ರೊಡಕ್ಷನ್, ವಿಎಫ್‌ಎಕ್ಸ್, ಸಂಕಲನ ಹೀಗೆ ಪ್ರತಿಯೊಂದು ವಿಭಾಗಕ್ಕೂ ಧನ್ಯವಾದ ಹೇಳುವ ಮೂಲಕ ಸಾರಾ ದೊಡ್ಡ ಗುಣ ತೋರಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್' ಅಬ್ಬರ!

ಮಾರ್ಚ್ 19 ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಂದಾದ ಮೇಲೊಂದರಂತೆ ದಾಖಲೆಗಳನ್ನು ಪುಡಿಪುಡಿ ಮಾಡ್ತಿದೆ. ರಣವೀರ್ ಸಿಂಗ್ ಅವರ ಪವರ್‌ಫುಲ್ ಪರ್ಫಾರ್ಮೆನ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದು ಮೊದಲ ಭಾಗದ ಸೀಕ್ವೆಲ್ ಆಗಿದ್ದು, ಸಂಜಯ್ ದತ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ದೊಡ್ಡ ತಾರಾಗಣವಿದ್ದರೂ ಕೂಡ ಕಥೆ ಮತ್ತು ಮೇಕಿಂಗ್‌ನಲ್ಲಿ ಆದಿತ್ಯ ಧರ್ ತೋರಿಸಿರೋ ಜಾಣ್ಮೆ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿದೆ. ಸಾರಾ ಅರ್ಜುನ್ ಕೂಡ ತಮ್ಮ ಪಾತ್ರದ ಮೂಲಕ ಜನರ ಮನ ಗೆದ್ದಿದ್ದಾರೆ.

ಒಂದು ಸಿನಿಮಾ ಗೆದ್ದಾಗ ಕೇವಲ ನಟರು ಮಾತ್ರ ಸಂಭ್ರಮಿಸದೆ, ಲೈಟ್ ಮ್ಯಾನ್‌ನಿಂದ ಹಿಡಿದು ಎಡಿಟರ್‌ವರೆಗೆ ಎಲ್ಲರನ್ನೂ ನೆನೆಯೋದು ಇದೆಯಲ್ಲ, ಅದು ನಿಜವಾದ ಗೆಲುವು. ಸಾರಾ ಅರ್ಜುನ್ ಅವರ ಈ ಪೋಸ್ಟ್ ನೋಡಿ ನೆಟ್ಟಿಗರು "ನಿಮ್ಮ ಈ ಸರಳತೆ ಮತ್ತು ಎಲ್ಲರನ್ನೂ ಗೌರವಿಸುವ ರೀತಿ ಇಷ್ಟ ಆಯ್ತು" ಅಂತ ಕಾಮೆಂಟ್ ಮಾಡ್ತಿದ್ದಾರೆ.

Latest News