Apr 25, 2026 Languages : ಕನ್ನಡ | English

ಮಡಿಕೇರಿ ಬೆಟ್ಟಗಳಲ್ಲಿ ಸಿಂಡ್ರೆಲ್ಲಾ ಸಂಭ್ರಮ - ಮಕ್ಕಳ ಜೊತೆ ರಾಧಿಕಾ ಪಂಡಿತ್ ಸಮ್ಮರ್ ವೆಕೇಶನ್ ಫೋಟೋಸ್ ವೈರಲ್!!

ಬೇಸಿಗೆ ಬಂತು ಅಂದ್ರೆ ಸಾಕು, ಎಲ್ಲರೂ ಫ್ಯಾನ್ ಕೆಳಗೆ ಕೂತು ಸುಸ್ತಾಗಿರ್ತೀವಿ. ಆದ್ರೆ ನಮ್ಮ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮಾತ್ರ ಕೂಲ್ ಆಗಿರೋಕೆ ಒಂದು ಸಖತ್ ಜಾಗ ಹುಡುಕಿಕೊಂಡಿದ್ದಾರೆ. ಈ ಬಾರಿ ಸಮ್ಮರ್ ವೆಕೇಶನ್‌ಗಾಗಿ ಅವರು ಹೋಗಿರೋದು ನಮ್ಮ ಹೆಮ್ಮೆಯ ಮಲೆನಾಡು, ಕೊಡಗಿನ ಮಡಿಕೇರಿಗೆ ಹಸಿರು ಬೆಟ್ಟಗಳು, ತಂಪಾದ ಗಾಳಿಯ ನಡುವೆ ಮಕ್ಕಳ ಜೊತೆ ಅವರು ಸಖತ್ ಎಂಜಾಯ್ ಮಾಡ್ತಿದ್ದಾರೆ.

ಮಡಿಕೇರಿ ಪ್ರವಾಸದಲ್ಲಿ ರಾಧಿಕಾ ಪಂಡಿತ್ ಲುಕ್ ನೋಡಿ ಫ್ಯಾನ್ಸ್ ಫಿದಾ | Photo Credit: https://www.instagram.com/iamradhikapandit/
ಮಡಿಕೇರಿ ಪ್ರವಾಸದಲ್ಲಿ ರಾಧಿಕಾ ಪಂಡಿತ್ ಲುಕ್ ನೋಡಿ ಫ್ಯಾನ್ಸ್ ಫಿದಾ | Photo Credit: https://www.instagram.com/iamradhikapandit/

ಮಕ್ಕಳ ಜೊತೆ ಅಮ್ಮನ ಟೈಮ್

ರಾಧಿಕಾ ಪಂಡಿತ್ ಈಗ ಕೇವಲ ನಟಿಯಲ್ಲ, ಆಯ್ರಾ ಮತ್ತು ಯಥರ್ವ್‌ಗೆ ಮುದ್ದಾದ ಅಮ್ಮ. ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ತಮ್ಮ ಸಿನಿಮಾ ಶೂಟಿಂಗ್‌ಗಳಲ್ಲಿ ಫುಲ್ ಬ್ಯುಸಿ ಇದ್ದಾರೆ. ಹಾಗಾಗಿ, ಮಕ್ಕಳ ಸಮ್ಮರ್ ರಜೆಯನ್ನ ಮಿಸ್ ಮಾಡಬಾರದು ಅಂತ ಅಮ್ಮ ರಾಧಿಕಾ ಅವರೇ ಮಕ್ಕಳನ್ನ ಕರ್ಕೊಂಡು ಕೂರ್ಗ್‌ಗೆ ಪ್ಲಾನ್ ಮಾಡಿದ್ದಾರೆ. ಕಳೆದ ವರ್ಷ ಬೀಚ್‌ನಲ್ಲಿ ಎಂಜಾಯ್ ಮಾಡಿದ್ದ ಈ ಪುಟ್ಟ ಫ್ಯಾಮಿಲಿ, ಈ ಬಾರಿ ಕಾಫಿ ತೋಟಗಳ ನಾಡಿಗೆ ಎಂಟ್ರಿ ಕೊಟ್ಟಿದೆ.

View this post on Instagram

A post shared by Radhika Pandit (@iamradhikapandit)

'ಕೂರ್ಗ್ ಯು ಬ್ಯೂಟಿ' ಎಂದ ನಟಿ

ಮಡಿಕೇರಿಯ ಸುಂದರ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರೋ ರಾಧಿಕಾ, ಅಲ್ಲಿನ ಸುಂದರ ದೃಶ್ಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "Coorg, You beauty" ಅಂತ ಕ್ಯಾಪ್ಶನ್ ಕೊಟ್ಟು, ಹಸಿರು ಬೆಟ್ಟಗಳು ಮತ್ತು ಸುಂದರವಾದ ಲೇಕ್ ಪಕ್ಕದಲ್ಲಿ ಮಕ್ಕಳ ಕೈ ಹಿಡಿದು ನಡೀತಾ ಇರೋ ಫೋಟೋಗಳನ್ನು ಹಾಕಿದ್ದಾರೆ. ಪ್ರಕೃತಿಯ ನಡುವೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೆ ಪರಿಸರದ ಬಗ್ಗೆ ತಿಳಿಸಿಕೊಡ್ತಿರೋ ರಾಧಿಕಾ ಅವರ ಸ್ಟೈಲ್ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿದೆ.

42ರಲ್ಲೂ 24ರ ಹರೆಯದಂತೆ ಕಾಣುವ ಸುಂದರಿ

ಈ ಫೋಟೋಗಳಲ್ಲಿ ಎಲ್ಲರ ಕಣ್ಣು ಬಿದ್ದಿರೋದು ರಾಧಿಕಾ ಪಂಡಿತ್ ಅವರ ಲುಕ್ ಮೇಲೆ. ಸಿಂಪಲ್ ಆಗಿ ಶಾರ್ಟ್ಸ್ ಮತ್ತು ಟೀ-ಶರ್ಟ್ ಧರಿಸಿರೋ ರಾಧಿಕಾ ಅವರು 42ನೇ ವಯಸ್ಸಿನಲ್ಲೂ ಇಪ್ಪತ್ತರ ಹರೆಯದ ಹುಡುಗಿಯಂತೆ ಕಾಣ್ತಿದ್ದಾರೆ. "ಇವರ ವಯಸ್ಸು ಮುಂದಕ್ಕೆ ಹೋಗ್ತಾ ಇದೆಯೋ ಅಥವಾ ಹಿಂದಕ್ಕೆ ಹೋಗ್ತಾ ಇದೆಯೋ?" ಅಂತ ಫ್ಯಾನ್ಸ್ ಅಚ್ಚರಿ ಪಡ್ತಿದ್ದಾರೆ.

ರಾಧಿಕಾ ಅವರ ಈ ಸಿಂಪ್ಲಿಸಿಟಿ ಮತ್ತು ಎಫರ್ಟ್‌ಲೆಸ್ ಬ್ಯೂಟಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಮಳೆ ಹರಿಯುತ್ತಿದೆ. "ರಾಕಿಂಗ್ ಕ್ವೀನ್ ಅಂದ್ರೆ ಇವರೇ", "ನಿಮ್ಮ ಸಿಂಪ್ಲಿಸಿಟಿಯೇ ನಿಮ್ಮ ನಿಜವಾದ ಸೌಂದರ್ಯ" ಅಂತ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಪ್ರಕೃತಿಯೇ ಬೆಸ್ಟ್ ವೆಕೇಶನ್ ತಾಣ
ಇವತ್ತಿನ ದಿನಗಳಲ್ಲಿ ಮಕ್ಕಳನ್ನ ಮೊಬೈಲ್, ಗೇಮ್ಸ್‌ನಿಂದ ದೂರ ಇಟ್ಟು ಈ ರೀತಿ ಪ್ರಕೃತಿಯ ಮಡಿಲಿಗೆ ಕರೆದುಕೊಂಡು ಹೋಗೋದು ನಿಜಕ್ಕೂ ಒಳ್ಳೆ ವಿಷಯ. ರಾಧಿಕಾ ಪಂಡಿತ್ ಅವರು ಹಂಚಿಕೊಂಡಿರೋ ಈ ಫೋಟೋಗಳು ನಮಗೂ ಒಂದು ಸಲ ಮಡಿಕೇರಿಗೆ ಹೋಗಿ ಬರಬೇಕು ಅನ್ನೋ ಆಸೆ ಮೂಡಿಸೋದಂತೂ ಗ್ಯಾರಂಟಿ.

Latest News