ಕನ್ನಡ ಚಿತ್ರರಂಗದಲ್ಲಿ ‘ಪುಷ್ಪವತಿ’ ಎಂದು ಜನಪ್ರಿಯತೆ ಪಡೆದಿರುವ ನಿಮಿತ ನಿಮಿಕಾ ರತ್ನಾಕರ್ ಈಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಿದ್ಧರಾಗಿದ್ದಾರೆ. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ಸಿನಿಮಾಗಳಲ್ಲಿ ಗಮನಸೆಳೆದಿರುವ ಅವರು ಈಗ ಮದುವೆಯ ಬಂಧಕ್ಕೆ ಒಳಗಾಗಲಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ತುಂಬಾ ಸಂತೋಷ ತಂದಿದೆ.
ನಿಮಿಕಾ ಅವರು ಮುಂಬೈ ಮೂಲದ ಒಬ್ಬ ಉದ್ಯಮಿಯನ್ನು ವರಿಸಲಿದ್ದಾರೆ. ಇವರ ವಿವಾಹದ ಬಗ್ಗೆ ಕಳೆದ ಕೆಲವು ದಿನಗಳಿಂದ ಹಲವಾರು ಮಾತುಗಳು ಕೇಳಿಬರುತ್ತಿದ್ದವು. ಬರುವ ಏಪ್ರಿಲ್ 6ರಂದು ಅವರು ಮದುವೆ ಡೇಟ್ ಫಿಕ್ಸ್ ಆಗಿದೆ ಎಂಬ ಮಾತುಗಳು ಎಲ್ಲೆಡೆ ಸದ್ದು ಮಾಡುತ್ತಿದ್ದು, ಮದುವೆ ಯಾವ ಸ್ಥಳದಲ್ಲಿ ನಡೆಯಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ನಿಮಿಕಾ ರತ್ನಾಕರ್ ಅವರ ಈ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಂತರ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. ರಾಮಧಾನ್ಯ ಚಿತ್ರದ ಮೂಲಕ ಅವರು ನಾಯಕಿಯಾಗಿ ಕನ್ನಡ ಸಿನಿಮಾಗೆ ಕಾಲಿಟ್ಟರು. ಈ ಚಿತ್ರ ಅವರಿಗೊಂದು ಉತ್ತಮ ಆರಂಭವನ್ನು ಕೊಟ್ಟಿತ್ತು.
ಆದರೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟದ್ದು ಕ್ರಾಂತಿ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡು. ಈ ಹಾಡಿನಲ್ಲಿ ಅವರ ನೃತ್ಯ ಮತ್ತು ಅಭಿನಯ ಜನರಿಗೆ ತುಂಬಾ ಇಷ್ಟವಾಯಿತು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ತುಂಬಾ ವೈರಲ್ ಆಯಿತು. ಈ ಚಿತ್ರದ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದರು. ಈ ಹಾಡಿನ ನಂತರ ನಿಮಿಕಾ ಹೆಚ್ಚು ಜನಪ್ರಿಯರಾದರು.
ಇದೀಗ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೈಲ್ಡ್ ಟೈಗರ್ ಸಫಾರಿ ಸೇರಿದಂತೆ ಹಲವು ಹೊಸ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಕೆಲವು ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿದ್ದು, ಅಭಿಮಾನಿಗಳು ಅದನ್ನು ಕಾತರದಿಂದ ಕಾಯುತ್ತಿದ್ದಾರೆ.
ನಿಮಿಕಾ ಅವರ ಬಗ್ಗೆ ಮತ್ತೊಂದು ವಿಶೇಷ ಅಂಶವೆಂದರೆ, ಅವರು ಯಾವುದೇ ವಿವಾದಗಳಿಗೆ ಒಳಗಾಗಿಲ್ಲ. ಅವರು ತಮ್ಮ ಕೆಲಸದ ಮೂಲಕವೇ ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಒಳ್ಳೆಯ ಅಭಿಮಾನಿ ಬಳಗವಿದೆ. ಈಗ ಅವರು ಮದುವೆಯಾಗುತ್ತಿರುವುದರಿಂದ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಮದುವೆಯ ನಂತರ ಅವರು ಮುಂಬೈನಲ್ಲಿ ವಾಸಿಸುತ್ತಾರೆಯೇ ಅಥವಾ ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಅವರು ಯಾವ ನಿರ್ಧಾರ ತೆಗೆದುಕೊಂಡರೂ ಅಭಿಮಾನಿಗಳು ಬೆಂಬಲ ನೀಡುವರು ಎಂಬುದು ನಿಶ್ಚಿತ.
ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ವದ ಕ್ಷಣ. ನಿಮಿಕಾ ಅವರು ಕೂಡ ತಮ್ಮ ಜೀವನದ ಈ ಹೊಸ ಹಂತಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.
ನಟ ದರ್ಶನ್ ಅವರ ಮೇಲೆ ಬಹಳ ಗೌರವವಿದೆ. ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಮದುವೆ ಬಗ್ಗೆ ತಿಳಿಸಿ ಆಶೀರ್ವಾದ ಪಡೆಯುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. ಏನೇ ಇರಲಿ ಏಪ್ರಿಲ್ 6ರಂದು ನಡೆಯಲಿರುವ ಈ ಮದುವೆ ನಿಮಿಕಾ ಅವರ ಜೀವನದಲ್ಲಿ ಒಂದು ವಿಶೇಷ ದಿನವಾಗಲಿದೆ. ಅವರ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ ಎಂಬುದು ಎಲ್ಲರ ಹಾರೈಕೆ.