ಫ್ಯಾಮಿಲಿ ಜೊತೆಗೂಡಿ ಹೊಸ ಮಹೀಂದ್ರಾ ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ!!

ಕಿರುತೆರೆಯ ಪಾಲಿನ ಎವರ್‌ಗ್ರೀನ್ 'ಪಾರು', ಬಿಗ್ ಬಾಸ್ ಮನೆಯ ಮೋಕ್ಷಿತಾ ಪೈ ಈಗ ಫುಲ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಲೇಟೆಸ್ಟ್ ಅಚೀವ್ಮೆಂಟ್ ಹೌದು, ಕಷ್ಟಪಟ್ಟು ದುಡಿದ ಹಣದಲ್ಲಿ ತಮಗೊಂದು ಭರ್ಜರಿ ಗಿಫ್ಟ್ ಕೊಟ್ಟುಕೊಂಡಿದ್ದಾರೆ ಮೋಕ್ಷಿ.

ಮೋಕ್ಷಿತಾ ಪೈ ಖರೀದಿಸಿದ ಎಲೆಕ್ಟ್ರಿಕ್ ಕಾರ್ | Photo Credit: mokshitha22
ಮೋಕ್ಷಿತಾ ಪೈ ಖರೀದಿಸಿದ ಎಲೆಕ್ಟ್ರಿಕ್ ಕಾರ್ | Photo Credit: mokshitha22

ಹೊಸ ಕಾರ್, ಹೊಸ ಹವಾ

ಮೋಕ್ಷಿತಾ ಪೈ ಅಂದ್ರೆ ಸೌಮ್ಯ ಸ್ವಭಾವದ ಪಾರು ಅಷ್ಟೇ ಅಲ್ಲ, ತಪ್ಪು ಕಂಡಲ್ಲಿ ಧ್ವನಿ ಎತ್ತುವ ಕೆಚ್ಚೆದೆಯ ಹುಡುಗಿ ಅಂತ ಬಿಗ್ ಬಾಸ್‌ನಲ್ಲೇ ಪ್ರೂವ್ ಆಗಿತ್ತು. ಈಗ ಅದೇ 'ಜಗದ್ಧಾತ್ರಿ' ಲೇಡಿ ಹೊಸ ಎಲೆಕ್ಟ್ರಿಕ್ ಕಾರಿನ ಒಡತಿಯಾಗಿದ್ದಾರೆ. ಅವರ ಮನೆಗೆ ಬಂದಿರೋದು ಸುಂದರವಾದ ಕೆಂಪು ಬಣ್ಣದ Mahindra XUV400 EV.

ಈ ಕಾರಿನ ಸ್ಪೆಷಾಲಿಟಿ ಅಂದ್ರೆ ಇದು ಕೇವಲ ಸ್ಟೈಲಿಶ್ ಮಾತ್ರವಲ್ಲ, ಅಪ್ಪಟ ಪರಿಸರ ಸ್ನೇಹಿ ಕೂಡ ಹೌದು. ಇತ್ತೀಚೆಗೆ ಶೋರೂಮ್‌ನಲ್ಲಿ ಫ್ಯಾಮಿಲಿ ಜೊತೆಗೂಡಿ ಕೇಕ್ ಕಟ್ ಮಾಡಿ, ಸಖತ್ ಆಗಿ ಪೋಸ್ ಕೊಟ್ಟು ಈ ಕಾರನ್ನು ಬರಮಾಡಿಕೊಂಡಿದ್ದಾರೆ.

ಏನಿದೆ ಈ ರೆಡ್ ಬ್ಯೂಟಿಯಲ್ಲಿ?

ನಟಿ ಮೋಕ್ಷಿತಾ ಅವರ ಈ ಚಾಯ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೀತಿದೆ. ಈ ಕಾರಿನ ಹೈಲೈಟ್ಸ್ ಇಲ್ಲಿದೆ ನೋಡಿ!

ಲುಕ್ ಅಂಡ್ ಸ್ಟೈಲ್ - ಕಾರಿನ ಕೆಂಪು ಬಣ್ಣ ರಸ್ತೆಯಲ್ಲಿ ಸಾಗುವಾಗ ಎಲ್ಲರೂ ತಿರುಗಿ ನೋಡುವಂತಿದೆ.

ಎಲೆಕ್ಟ್ರಿಕ್ ಪವರ್ - ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸಾಕು, ಶೂಟಿಂಗ್ ಸೆಟ್‌ಗೆ ಹೋಗಿ ಬರಲು ಯಾವುದೇ ಟೆನ್ಶನ್ ಇಲ್ಲ ಪೆಟ್ರೋಲ್ ಬೆಲೆ ಏರಿಕೆಯ ಚಿಂತೆಯೂ ಇಲ್ಲ.

ಬೆಲೆ - ಸರಿಸುಮಾರು 17 ರಿಂದ 20 ಲಕ್ಷ ರೂಪಾಯಿ ಬೆಲೆಯ ಈ ಕಾರು, ಕಿರುತೆರೆಯ ನಟಿಯೊಬ್ಬರ ದೊಡ್ಡ ಸಾಧನೆ ಎಂದೇ ಹೇಳಬಹುದು.

'ಜಗದ್ಧಾತ್ರಿ' ಟು 'ಜೆಟ್ ಸ್ಪೀಡ್'

ಬಿಗ್ ಬಾಸ್‌ನಿಂದ ಆಚೆ ಬಂದ ಮೇಲೆ ಮೋಕ್ಷಿತಾ ಅವರ ಕ್ರೇಜ್ ಬೆಟ್ಟದಷ್ಟು ಬೆಳೆದಿದೆ. ಈಗ ಅವರು 'ಜಗದ್ಧಾತ್ರಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಆ ಪ್ರಾಜೆಕ್ಟ್ ಆರಂಭವಾದ ಬೆನ್ನಲ್ಲೇ ಈ ಕಾರು ಬಂದಿರುವುದು ಅವರಿಗೆ ಲಕ್ಕಿ ಎಂದೇ ಭಾವಿಸಲಾಗಿದೆ.

"ಸ್ವಂತ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ಪಾರು ಧಾರಾವಾಹಿಯಿಂದ ಶುರುವಾದ ಈ ಪಯಣ ಈಗ ಹೊಸ ಕಾರಿನವರೆಗೂ ಬಂದಿದೆ. ಸಿನಿರಂಗದಲ್ಲಿ ಗಾಡ್ ಫಾದರ್ ಇಲ್ಲದಿದ್ದರೂ, ಇಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸುವುದು ಸುಲಭದ ಮಾತಲ್ಲ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಹಾರೈಕೆಗಳ ಮಹಾಪೂರ

ಮೋಕ್ಷಿತಾ ಕಾರು ಖರೀದಿಸಿದ ವಿಡಿಯೋ ಅಪ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್‌ಗಳು ಹರಿದುಬಂದಿವೆ. ಸಹ ಕಲಾವಿದರು ಕೂಡ "ಪಾರ್ಟಿ ಯಾವಾಗ?" ಎಂದು ಕಾಲೆಳೆಯುತ್ತಲೇ ವಿಶ್ ಮಾಡಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಎಲೆಕ್ಟ್ರಿಕ್ ಕಾರನ್ನು ಆಯ್ಕೆ ಮಾಡಿಕೊಂಡ ಮೋಕ್ಷಿತಾ ಅವರ ನಿರ್ಧಾರ ಮೆಚ್ಚುವಂತದ್ದು.  

Latest News