ಜೂನ್ 1ಕ್ಕೆ ಮರಿಲಿನ್ ಮನ್ರೋ 100ನೇ ಜನ್ಮದಿನದ ಶತಮಾನೋತ್ಸವ - ಸುಂದರಿಯ ಕಣ್ಣೀರಿನ ಇತಿಹಾಸ!!

ನೀವು ಸೋಶಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿದ್ರೆ ಸಾಕು, ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಹಿಡಿದು ಜಗತ್ತಿನ ಟಾಪ್ ಫ್ಯಾಷನ್ ಬ್ರ್ಯಾಂಡ್‌ಗಳ ಜಾಹೀರಾತುಗಳವರೆಗೆ ಇಂದಿಗೂ ಒಬ್ಬಳೇ ಒಬ್ಬಳು ಲೇಡಿ ಸೂಪರ್ ಸ್ಟಾರ್ ಫುಲ್ ಟ್ರೆಂಡಿಂಗ್‌ನಲ್ಲಿರ್ತಾಳೆ. ಅವಳೇ ಹಾಲಿವುಡ್‌ನ ಸಾರ್ವಕಾಲಿಕ ಗ್ಲಾಮರ್ ಕ್ವೀನ್ ಮರಿಲಿನ್ ಮನ್ರೋ (Marilyn Monroe). ಅವಳು ಜಗತ್ತನ್ನು ಬಿಟ್ಟು ಹೋಗಿ ಬರೋಬ್ಬರಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಇಂದಿಗೂ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಡುವ ರಹಸ್ಯ ಸುಂದರಿ ಈಕೆ.

ಇಡೀ ವಿಶ್ವದ ನಿದ್ದೆ ಗೆಡಿಸಿದ ಹಾಲಿವುಡ್ ರಾಣಿಯಾದ ರೋಚಕ ಕಥೆ
ಇಡೀ ವಿಶ್ವದ ನಿದ್ದೆ ಗೆಡಿಸಿದ ಹಾಲಿವುಡ್ ರಾಣಿಯಾದ ರೋಚಕ ಕಥೆ

ಮುಂಬರುವ ಜೂನ್ 1ಕ್ಕೆ ಮರಿಲಿನ್ ಮನ್ರೋ ಅವರ 100ನೇ ಜನ್ಮದಿನದ ಶತಮಾನೋತ್ಸವದ ನೆನಪು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಕಡು ಬಡತನ, ಅನಾಥ ಪ್ರಜ್ಞೆಯನ್ನು ಮೆಟ್ಟಿ ನಿಂತು ಇಡೀ ವಿಶ್ವವನ್ನೇ ತನ್ನ ಕಾಲಬಳಿಗೆ ಬರುವಂತೆ ಮಾಡಿಕೊಂಡ ಆಕೆಯ ಕಣ್ಣೀರಿನ ಇತಿಹಾಸ ಇಂದಿನ ಪೀಳಿಗೆಗೆ ನಿಜಕ್ಕೂ ಒಂದು ರೋಚಕ ಕಥೆ.

ಅನಾಥಾಶ್ರಮವೇ ಮೊದಲ ಮನೆ; ಬೇಡದ ಮಗುವಾಗಿ ಕಳೆದ ಬಾಲ್ಯ!

1926ರ ಜೂನ್ 1ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಾರ್ಮಾ ಜೀನ್ ಮಾರ್ಟೆನ್ಸನ್ ಎಂಬ ಹೆಸರಿನಲ್ಲಿ ಮರಿಲಿನ್ ಜನಿಸಿದರು. ಆದರೆ ಹುಟ್ಟುತ್ತಲೇ ಆಕೆಗೆ ವಿಧಿ ದೊಡ್ಡ ಕಷ್ಟವನ್ನೇ ಉಡುಗೊರೆಯಾಗಿ ಕೊಟ್ಟಿತ್ತು. ಆಕೆಯ ತಾಯಿಗೆ ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ, ಮಗಳನ್ನು ಸಾಕಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಮರಿಲಿನ್ ತನ್ನ ಬಾಲ್ಯದ ಬಹುಪಾಲು ದಿನಗಳನ್ನು ಕಡು ಕತ್ತಲೆಯ ಅನಾಥಾಶ್ರಮಗಳು ಮತ್ತು ಬೇರೆಯವರ ಮನೆಗಳಲ್ಲಿ (ಫೋಸ್ಟರ್ ಕೇರ್) ಕಳೆಯಬೇಕಾಯಿತು.

ಮತ್ತೆ ಅನಾಥಾಶ್ರಮದ ನರಕಕ್ಕೆ ಹೋಗುವುದು ಬೇಡ ಎಂಬ ಒಂದೇ ಒಂದು ಕಾರಣಕ್ಕಾಗಿ, ಕೇವಲ 16 ವರ್ಷದ ಚಿಕ್ಕ ವಯಸ್ಸಿನಲ್ಲೇ ಮರಿಲಿನ್ ಜೇಮ್ಸ್ ಡೋಹರ್ಟಿ ಎಂಬ ಫ್ಯಾಕ್ಟರಿ ಕಾರ್ಮಿಕನನ್ನು ಮದುವೆಯಾದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಆಕೆಯನ್ನು ಕೇವಲ ಫ್ಯಾಕ್ಟರಿ ಗೃಹಿಣಿಯಾಗಿ ಇಡಲು ಅದಕ್ಕೆ ಇಷ್ಟವಿರಲಿಲ್ಲ.

ಫ್ಯಾಕ್ಟರಿ ಕೆಲಸದಿಂದ ಫೋಟೋ ಶೂಟ್ ರೇಸ್‌ಗೆ ದಿಢೀರ್ ಎಂಟ್ರಿ!

ಎರಡನೇ ಮಹಾಯುದ್ಧ ನಡೆಯುತ್ತಿದ್ದ ಆ ದಿನಗಳಲ್ಲಿ ಮರಿಲಿನ್ ಕೂಡ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಆಕಸ್ಮಿಕವಾಗಿ ಅಲ್ಲಿಗೆ ಬಂದ ಆರ್ಮಿ ಫೋಟೋಗ್ರಾಫರ್ ಒಬ್ಬರ ಕಣ್ಣು ಮರಿಲಿನ್ ಮೇಲೆ ಬಿತ್ತು. ಆಕೆಯ ಮುಖದಲ್ಲಿದ್ದ ಅಪೂರ್ವ ಕಳೆ ಮತ್ತು ಆಕರ್ಷಕ ಹಾವಭಾವಗಳನ್ನು ನೋಡಿ ಆತ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ. ಆ ಒಂದು ಫೋಟೋ ಶೂಟ್ ಮರಿಲಿನ್ ಬದುಕನ್ನೇ ಉಲ್ಟಾ-ಪಲ್ಟಾ ಮಾಡಿತು!

ಮೋಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಆಕೆಗೆ ಶೀಘ್ರದಲ್ಲೇ ಹಾಲಿವುಡ್ ಸಿನಿಮಾ ಬಿಗ್ ಆಫರ್‌ಗಳು ಹುಡುಕಿಕೊಂಡು ಬಂದವು. 1946ರಲ್ಲಿ ತನ್ನ ಮೊದಲ ಸಿನಿಮಾ ಕಾಂಟ್ರಾಕ್ಟ್‌ಗೆ ಸೈನ್ ಮಾಡಿದ ನಾರ್ಮಾ ಜೀನ್, ತನ್ನ ಹೆಸರನ್ನು ಕಂಪ್ಲೀಟ್ ಆಗಿ ಬದಲಾಯಿಸಿಕೊಂಡು ಜಗತ್ತಿಗೆ “ಮರಿಲಿನ್ ಮನ್ರೋ” ಆಗಿ ಪರಿಚಯವಾದರು.

ಹಾಲಿವುಡ್ ರಾಣಿಯ ಗ್ಲಾಮರ್ ಹಿಂದೆ ಅಡಗಿದ್ದ ಕಣ್ಣೀರಿನ ಕಡಲು!

'Gentlemen Prefer Blondes', 'How to Marry a Millionaire' ಮತ್ತು 'Some Like It Hot' ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಮರಿಲಿನ್ ಮನ್ರೋ ಜಾಗತಿಕ ಮಟ್ಟದ ಸೆನ್ಸೇಷನ್ ಆದರು. ಆಕೆಯ ಸಿಗ್ನೇಚರ್ ಸ್ಟೈಲ್, ಆ ಬಿಳಿ ಡ್ರೆಸ್ ಹಾರುವ ಪೋಸ್ಟರ್ ಇಡೀ ವಿಶ್ವದ ಯುವಕರ ನಿದ್ದೆ ಗೆಡಿಸಿತ್ತು. ಆದರೆ, ಇಡೀ ಜಗತ್ತನ್ನೇ ತನ್ನ ನಗುವಿನಿಂದ ಮಂತ್ರಮುಗ್ಧಗೊಳಿಸುತ್ತಿದ್ದ ಆ ನಟಿಯ ತೆರೆಹಿಂದಿನ ಜೀವನ ಮಾತ್ರ ತೀವ್ರ ಏಕಾಂತ, ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ (Depression) ಕೂಡಿತ್ತು.

ಜಗತ್ತಿನ ಪ್ರಸಿದ್ಧ ಬೇಸ್‌ಬಾಲ್ ಆಟಗಾರ ಜೋ ಡಿ ಮ್ಯಾಜಿಯೋ ಮತ್ತು ಖ್ಯಾತ ಬರಹಗಾರ ಆರ್ಥರ್ ಮಿಲ್ಲರ್ ಅವರೊಂದಿಗಿನ ಆಕೆಯ ಮದುವೆಗಳು ವಿಶ್ವದಾದ್ಯಂತ ದೊಡ್ಡ ಸುದ್ದಿಯಾದವು. ಆದರೆ ಆಕೆಯ ಎಲ್ಲಾ ಪ್ರೇಮ ಸಂಬಂಧಗಳು ಒಂದಾದ ಮೇಲೊಂದರಂತೆ ವಿಫಲವಾದವು. ಪ್ರೀತಿಗಾಗಿ ಹಂಬಲಿಸುತ್ತಿದ್ದ ಮರಿಲಿನ್‌ಗೆ ಕೊನೆಯವರೆಗೂ ನಿಜವಾದ ಪ್ರೀತಿ ಸಿಗಲೇ ಇಲ್ಲ.

ಹುಡುಗಿಯರ ಹಕ್ಕುಗಳಿಗಾಗಿ ಹೋರಾಡಿದ ಮೊದಲ 'ಫೈಟರ್'

ಮರಿಲಿನ್ ಕೇವಲ ಬಣ್ಣದ ಲೋಕದ ಗ್ಲಾಮರ್ ಗೊಂಬೆಯಾಗಿ ಇರಲಿಲ್ಲ. ಪುರುಷ ಪ್ರಧಾನವಾಗಿದ್ದ ಹಾಲಿವುಡ್‌ನಲ್ಲಿ ಮಹಿಳಾ ನಟಿಯರಿಗೆ ಸಮಾನ ಗೌರವ ಮತ್ತು ಹೆಚ್ಚಿನ ಸಂಭಾವನೆ ಸಿಗಬೇಕು ಎಂದು ಧ್ವನಿ ಎತ್ತಿದ ಮೊದಲ ನಟಿ ಆಕೆ. ಸ್ಟುಡಿಯೋಗಳ ದಬ್ಬಾಳಿಕೆಯನ್ನು ವಿರೋಧಿಸಿ ಆಕೆ ತನ್ನದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ ಆರಂಭಿಸಿದರು. ಆಕೆಯ ಈ ಧೈರ್ಯದ ನಡೆ ಇಂದಿನ ಅದೆಷ್ಟೋ ಮಹಿಳಾ ಉದ್ಯಮಿಗಳಿಗೆ ಇಂದಿಗೂ ಬಿಗ್ ಇನ್ಸ್‌ಪಿರೇಷನ್.

36ನೇ ವಯಸ್ಸಿಗೆ ನಿಗೂಢ ಸಾವು; ಇಂದಿಗೂ ಮುಚ್ಚದ ರಹಸ್ಯ!

ಯಶಸ್ಸಿನ ಶಿಖರದಲ್ಲಿದ್ದಾಗಲೇ 1962ರ ಆಗಸ್ಟ್ 5ರಂದು, ಕೇವಲ 36ರ ಹರೆಯದ ಮರಿಲಿನ್ ಮನ್ರೋ ಲಾಸ್ ಏಂಜಲೀಸ್‌ನ ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾದರು. ಆಕೆಯ ಈ ದಿಢೀರ್ ಸಾವು ಇಡೀ ಜಗತ್ತನ್ನೇ ನಡುಗಿಸಿತು. ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಗೂಢ ರಹಸ್ಯ ಇಂದಿಗೂ ಕದಡದ ಕನ್ನಡಿಯಾಗಿಯೇ ಉಳಿದಿದೆ. ಆಕೆಯ ಸಾವಿನ ಹಿಂದೆ ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಕೆನಡಿ ಕುಟುಂಬದ ಕೈವಾಡವಿತ್ತು ಎಂಬ ನೂರಾರು ಕಾನ್ಸ್ ಪಿರಸಿ ಥಿಯರಿಗಳು ಇಂದಿಗೂ ಇಂಟರ್ನೆಟ್‌ನಲ್ಲಿ ಮಿಲಿಯನ್‌ಗಟ್ಟಲೆ ಚರ್ಚೆಯಾಗುತ್ತಲೇ ಇವೆ.

ಸಾವಿನ 60 ವರ್ಷಗಳ ನಂತರವೂ ಮರಿಲಿನ್ ಮನ್ರೋ ಎಂದರೆ ಅದೊಂದು ಮುಗಿಯದ ಆಕರ್ಷಣೆ. ನೋವು, ಮಹತ್ವಾಕಾಂಕ್ಷೆ ಮತ್ತು ಸೌಂದರ್ಯದ ಅಪೂರ್ವ ಸಮ್ಮಿಶ್ರಣವಾಗಿರುವ ಈಕೆಯ ಕಥೆ ಇಂಟರ್ನೆಟ್ ಇರುವವರೆಗೂ ಜಗತ್ತನ್ನು ಕಾಡುತ್ತಲೇ ಇರುತ್ತದೆ.

Latest News