Mar 25, 2026 Languages : ಕನ್ನಡ | English

"ನಮಗೆ ನಾಚಿಕೆ ಇರಬೇಕಲ್ಲವೇ?"! ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ನಟ ಕಿಶೋರ್ ಪ್ರಶ್ನೆಗಳ ಸುರಿಮಳೆ!!


ಚಿತ್ರರಂಗ ಮತ್ತು ರಾಜಕೀಯ ಎರಡು ವಿಭಿನ್ನ ಕ್ಷೇತ್ರಗಳಾದರೂ, ಅವುಗಳ ನಡುವೆ ಹಳೆಯದಾದ ಸಂಬಂಧ ಇದೆ. ಈ ಎರಡು ಕ್ಷೇತ್ರಗಳಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ಆದರೆ ಪ್ರತಿಯೊಬ್ಬರೂ ರಾಜಕೀಯಕ್ಕೆ ನೇರವಾಗಿ ಪ್ರವೇಶಿಸುವುದಿಲ್ಲ.

ಮೋದಿ ಹೇಳಿಕೆಗೆ ಕಿಶೋರ್ ತೀವ್ರ ಪ್ರತಿಕ್ರಿಯೆ! | Photo Credit: p/DWSt9SsD832/?igsh=MWszNDhmZDVhMzNpNw== | MYFILMYDUNIYAACTINGACADEMY/posts/happy-birthday-kishore-kumar-my-filmy-duniyahelp-line-no-08866681188-2288-3388-4/432794027314867
ಮೋದಿ ಹೇಳಿಕೆಗೆ ಕಿಶೋರ್ ತೀವ್ರ ಪ್ರತಿಕ್ರಿಯೆ! | Photo Credit: p/DWSt9SsD832/?igsh=MWszNDhmZDVhMzNpNw== | MYFILMYDUNIYAACTINGACADEMY/posts/happy-birthday-kishore-kumar-my-filmy-duniyahelp-line-no-08866681188-2288-3388-4/432794027314867

ಕೆಲವರು ರಾಜಕೀಯದ ಹೊರಗೇ ಇದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಸಮಾಜದಲ್ಲಿ ನಡೆಯುವ ಘಟನೆಗಳು, ಸರ್ಕಾರದ ನಿರ್ಧಾರಗಳು, ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಈ ಸಾಲಿನಲ್ಲಿ ಕಿಶೋರ್ ಹೆಸರು ವಿಶೇಷವಾಗಿ ಕೇಳಿಬರುತ್ತದೆ.

ಚಿತ್ರರಂಗದಲ್ಲಿ ಹಲವರು ತಮ್ಮ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರೆ, ಕಿಶೋರ್ ಮಾತ್ರ ಸಮಾಜದ ವಿಷಯಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸುವುದಿಲ್ಲ. ಅನ್ಯಾಯ, ಅಕ್ರಮ, ಭ್ರಷ್ಟಾಚಾರ ಕಂಡಾಗ ಅವರು ನೇರವಾಗಿ ಪ್ರಶ್ನೆ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಟೀಕೆಗೂ ಗುರಿಯಾಗುತ್ತಾರೆ.

ಇತ್ತೀಚೆಗೆ ಮಧ್ಯಪ್ರಾಚ್ಯದ ಪರಿಸ್ಥಿತಿಯಿಂದ ಭಾರತಕ್ಕೂ ಪರಿಣಾಮ ಉಂಟಾಗಿದೆ. ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆ ಸಮಸ್ಯೆ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ಜನರು ಒಟ್ಟಾಗಿ ಸವಾಲನ್ನು ಎದುರಿಸಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಈ ಮಾತಿಗೆ ಕಿಶೋರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಜವಾಬ್ದಾರಿಯನ್ನು ನೆನಪಿಸಿಕೊಂಡು, ಜನರ ಮೇಲೆ ಮಾತ್ರ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ. “ಜನರು ಯಾವಾಗಲೂ ಹೊಂದಿಕೊಳ್ಳಬೇಕು ಅಂತ ಹೇಳೋದು ಸುಲಭ, ಆದರೆ ಸಮಸ್ಯೆ ಬಾರದಂತೆ ನೋಡಿಕೊಳ್ಳೋದು ಸರ್ಕಾರದ ಕೆಲಸ” ಎಂಬ ಅರ್ಥದ ಮಾತುಗಳನ್ನು ಹೇಳಿದ್ದಾರೆ.

ಕಿಶೋರ್ ಅಭಿಪ್ರಾಯದಲ್ಲಿ, ಸಂಕಷ್ಟ ಬಂದಾಗ ಜನರನ್ನು ಕೇವಲ ಸಹನೆಗೆ ಕರೆಸುವುದಕ್ಕಿಂತ, ಸರ್ಕಾರವೇ ಮುಂಚಿತವಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ.

ಒಟ್ಟಿನಲ್ಲಿ, ಕಿಶೋರ್ ಮತ್ತೆ ತಮ್ಮ ನೇರ ಹಾಗೂ ಸರಳ ಮಾತುಗಳಿಂದ ಗಮನ ಸೆಳೆದಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಸಮಾಜದ ವಿಚಾರಗಳಲ್ಲೂ ತಮ್ಮ ನಿಲುವು ಹೇಳುವ ನಟರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಕಿಶೋರ್ ಅವರು ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಹಾಕಿರುವ ಲೈನ್ಸ್ ಹೀಗಿವೆ.

ಒಟ್ಟಿಗೆ!!!! ಒಂದು ರಾಷ್ಟ್ರದಂತೆ!!!!??? ನಮ್ಮನ್ನು ದ್ವೇಷದ ವಿಷ ಕಾರಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ?? ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ???

ಇಲ್ಲ! ನಾವು ಭಾರತದ ಜನ ತಯಾರಿಲ್ಲ... ನಿಮ್ಮ ರಾಜಿ, ಶರಣಾಗತಿಯಿಂದಾಗಿ ನಾವು ಇನ್ನೂ ಎಷ್ಟು ಸವಾಲುಗಳನ್ನು ಎದುರಿಸಬೇಕು??? ನಿಮ್ಮ ತಪ್ಪುಗಳು, ರಹಸ್ಯಗಳನ್ನು ಮುಚ್ಚಿಡಲು ನಾವಿನ್ನೆಷ್ಟು ಬೆಲೆ ತೆರಬೇಕು??? ಸಾಮೂಹಿಕ ಕೊಲೆಗಾರರು ಮತ್ತು ಶಿಶುಕಾಮಿಗಳನ್ನು ಅಪ್ಪಿಕೊಂಡು "ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ" ಎಂದು ಘೋಷಿಸುವ ಮೊದಲು ನೀವು ನಮ್ಮನ್ನು ಕೇಳಿದ್ದಿರಾ???

ರಫೇಲ್‌ನಿಂದ ಎಪ್ಸ್ಟೀನ್‌ವರೆಗೆ, ನೋಟು ರದ್ದತಿಯಿಂದ ಕೊರೊನಾ ಲಾಕ್‌ಡೌನ್‌ವರೆಗೆ, ಕೃಷಿ ಕಾನೂನುಗಳಿಂದ ಅಗ್ನಿವೀರ್‌ವರೆಗೆ, ಮಣಿಪುರದಿಂದ ಕಾಶ್ಮೀರ, ಲಡಾಖ್‌ ನವರೆಗೆ ನಿಮ್ಮ ಯಾವುದೇ ಉನ್ಮಾದ ಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಮ್ಮನ್ನೋ ಅಥವಾ ವಿರೋಧ ಪಕ್ಷದ ನಮ್ಮ ಪ್ರತಿನಿಧಿಗಳನ್ನೋ ಅಥವಾ ನಮ್ಮ ತೆರಿಗೆಯಿಂದ ನಾವು ಸಂಬಳ ಕೊಟ್ಟಿಟ್ಟಿರುವ ನಿಮ್ಮ ಸ್ವಂತ ಅಧಿಕಾರಿಗಳನ್ನೋ ಕೇಳಿದ್ದಿರಾ??

ನಿಮ್ಮ ರಾಜಿ, ಸರೆಂಡರ್ ಮತ್ತು ಮೂರ್ಖತನದ ಪರಿಣಾಮವಾಗಿ ಬಂದ ಸವಾಲುಗಳನ್ನು ಎದುರಿಸಲು ಈಗ ನಮ್ಮನ್ನು ಕೇಳಲು ನಿಮಗೆ ಯಾವ ಹಕ್ಕಿದೆ???.

ಇನ್ನು ಸಾಕು.. ಕೊರೊನಾ ಸಮಯದಲ್ಲಿ ಮಾಡಿದ ರೀತಿ ಕುರಿಗಳ ಹಿಂಡಿನಂತೆ ಸಾಯಲು ನಾವು ಸಿದ್ಧರಿಲ್ಲ. ಸತ್ತ 50 ಲಕ್ಷ ಜನರನ್ನು ನಿಮ್ಮ ಕಡತಗಳಲ್ಲಿ ಸತ್ತವರೆಂದು ಪರಿಗಣಿಸಲೂ ಯೋಗ್ಯರಲ್ಲದಂತೆ ಮಾಡಿದಿರಲ್ಲ..ದೇಶದ ಅತ್ಯುನ್ನತ ಸ್ಥಾನವನ್ನು ನಗೆಪಾಟಲಾಗಿಸಿದ. ಸರ್ವಾಧಿಕಾರದ ಮತ್ತಿನ ನಿಮ್ಮ ನಾನ್-ಬಯಲಾಜಿಕಲ್ ಹುಚ್ಚುತನಕ್ಕೆ ಪದವಿ ಬಿಟ್ಟು ಹೊರಡುವ ಸಮಯ ಬಂದಿದೆ..

ಎಂದಿನಂತೆ ಕಿಶೋರ್ ಅವರ ಈ ಅಭಿಪ್ರಾಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಕಿಶೋರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ಧಾರೆ. ಇನ್ನು ಕೆಲವರು ಕಿಶೋರ್ ಅವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.