"Toxic: A Fairy Tale for Grown-Ups" ಎಂಬ ಚಿತ್ರವು 2026ರ ಮಾರ್ಚ್ 19ರಂದು ವಿಶ್ವದಾದ್ಯಾಂತ ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯ ಮಾಡುತ್ತಿರುವ ಈ ಚಿತ್ರವು ಪಿರಿಯಡ್ ಗ್ಯಾಂಗ್‌ಸ್ಟರ್ ಥ್ರಿಲ್ಲರ್ ಶೈಲಿಯಲ್ಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ಗೋವಾ ಹಿನ್ನೆಲೆಯ ಕಥಾವಸ್ತು ಹೊಂದಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ.
ಈ ಚಿತ್ರದಲ್ಲಿ ಯಶ್ ನಾಯಕನಾಗಿ, ಕಿಯಾರ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಯನತಾರ, ತಾರಾ ಸುತಾರಿಯ, ಹೂಮಾ ಖುರೇಷಿ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ವೆಂಕಟ್ ಕೆ ನಾರಾಯಣ (KVN Productions) ಮತ್ತು ಯಶ್ (Monster Mind Creations) ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಚಿತ್ರದ ಒಟ್ಟು ಬಜೆಟ್ ₹600 ಕೋಟಿ ಎಂದು ವರದಿಯಾಗಿದ್ದು, ಯಶ್ ಅವರ ಸಂಬಳ ₹50-₹70 ಕೋಟಿ ನಡುವೆ ಇರಬಹುದು ಎಂಬ ಊಹೆಗಳು ಕೇಳಿಬರುತ್ತಿವೆ. ಕಿಯಾರ ಅಡ್ವಾಣಿ ಈ ಚಿತ್ರಕ್ಕಾಗಿ ₹15 ಕೋಟಿ ಸಂಬಳ ಪಡೆದಿದ್ದು, ಇದು ಅವರ ವೃತ್ತಿಜೀವನದ ಅತ್ಯುನ್ನತ ಪಾವತಿ ಎಂದು ಹೇಳಲಾಗಿದೆ. ಈ ಚಿತ್ರವು ತಂತ್ರಜ್ಞಾನ, ಬಜೆಟ್ ಮತ್ತು ತಾರಾಗಣದಿಂದಾಗಿ ಬಹು ನಿರೀಕ್ಷಿತ ಚಿತ್ರವಾಗಿದೆ.
ಕೆಜಿಎಫ್ ಸರಣಿಯ ನಂತರ ಯಶ್ ಮತ್ತೆ ದೊಡ್ಡ ಮಟ್ಟದ ಚಿತ್ರವೊಂದರೊಂದಿಗೆ ಬರುತ್ತಿದ್ದಾರೆ. “ಟಾಕ್ಸಿಕ್: ಎ ಫೇರಿ ಟೆಲ್ ಫಾರ್ ಗ್ರೋನ್-ಅಪ್ಸ್” ಎಂಬ ಶೀರ್ಷಿಕೆಯ ಈ ಸಿನಿಮಾ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಗೀತು ಮೋಹಂದಾಸ್ ನಿರ್ದೇಶಿಸಿದ್ದಾರೆ ಮತ್ತು ಕಥೆಯನ್ನು ಯಶ್ ಅವರೊಂದಿಗೆ ಸಹ ಬರೆಯಲಾಗಿದೆ.
ಚಿತ್ರದ ಕಥೆ ಗೋವಾಯಲ್ಲಿ ನಡೆಯುತ್ತದೆ. ಸುಂದರ ಕಡಲತೀರಗಳ ಹಿಂದೆ ಅಡಗಿರುವ ಡ್ರಗ್ ಕಾರ್ಟೆಲ್ ಮತ್ತು ಅದರ ಸುತ್ತಮುತ್ತ ನಡೆಯುವ ಗ್ಯಾಂಗ್‌ಸ್ಟರ್ ಜಗತ್ತನ್ನು ಚಿತ್ರವು ಅನಾವರಣಗೊಳಿಸುತ್ತದೆ. “ಫೇರಿ ಟೆಲ್ ಫಾರ್ ಗ್ರೋನ್-ಅಪ್ಸ್” ಎಂಬ ಟ್ಯಾಗ್ ಲೈನ್‌ನಂತೆ, ಇದು ಕೇವಲ ಕ್ರೈಂ ಡ್ರಾಮಾ ಅಲ್ಲ, ಭಾವನಾತ್ಮಕ, ಕತ್ತಲೆಯ, ಮತ್ತು ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ವಿಶಿಷ್ಟ ಕಥೆಯಾಗಿದೆ. ಈ ಸಿನಿಮಾದ ವಿಶೇಷತೆ ಅಂದ್ರೆ ಅದು ನಟ ಯಶ್ ಅವರ ಕೆಜಿಎಫ್ ನಂತರದ ಕಮ್‌ಬ್ಯಾಕ್ ಹೇಗಿರಲಿದೆ ಎಂದು ಅವರ ಅಭಿಮಾನಿಗಳು ಕಾತುರದಿಂದ ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.
ಹಲವು ಪ್ರಮುಖ ನಟಿಯರು ಮತ್ತು ಅನುಭವೀ ನಟರು ಈ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದು, ಹೈ ಪ್ರೊಡಕ್ಷನ್ ವ್ಯಾಲ್ಯೂ ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಹಣ, ಸಂಗೀತ ಸಹ ಇರಲಿದೆ. ಜೊತೆಗೆ ದೊಡ್ಡ ಬಜೆಟ್ ಸಿನಿಮಾ ಕೂಡ ಆಗಿದೆ. ಇದು ಗ್ಯಾಂಗ್‌ಸ್ಟರ್ ಕಥೆಯೊಂದಿಗೆ “ಡಾರ್ಕ್ ಫೇರಿ ಟೆಲ್” ಶೈಲಿ ಎನ್ನಲಾಗಿದೆ. ಜೊತೆಗೆ ನಿರೀಕ್ಷೆ ವಿಚಾರಕ್ಕೆ ಬರುವುದಾದರೆ 2026ರ ಅತ್ಯಂತ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಟಾಕ್ಸಿಕ್ ಚಿತ್ರವನ್ನು ಪರಿಗಣಿಸಲಾಗುತ್ತಿದೆ. ಯಶ್ ಅವರ ಅಭಿಮಾನಿಗಳು ಮಾತ್ರವಲ್ಲ, ಭಾರತೀಯ ಸಿನಿಪ್ರೇಮಿಗಳು ಈ ಚಿತ್ರವನ್ನು ಕಾತರದಿಂದ ಕಾಯುತ್ತಿದ್ದಾರೆ. ಟಾಕ್ಸಿಕ್ ಒಂದು ಪ್ರೀಮಿಯಂ ಗ್ಯಾಂಗ್‌ಸ್ಟರ್ ಡ್ರಾಮಾ, ಗೋವಾದಲ್ಲಿ ನಡೆಯುವ ಡ್ರಗ್ ಕಾರ್ಟೆಲ್ ಕಥೆಯನ್ನು ಆಧರಿಸಿದೆ. ಯಶ್ ಅವರ ನಾಯಕತ್ವ, ಗೀತು ಮೋಹಂದಾಸ್ ಅವರ ನಿರ್ದೇಶನ, ಅನಿರುದ್ಧ್ ಅವರ ಸಂಗೀತ ಮತ್ತು ರಾಜೀವ್ ರವಿ ಅವರ ಛಾಯಾಗ್ರಹಣ ಹೇಗಿರಲಿದೆ ಎಂದು ಕಾದು ನೋಡಬೇಕು ಅಷ್ಟೆ.