May 7, 2026 Languages : ಕನ್ನಡ | English

ಕರ್ಣ ಧಾರಾವಾಹಿ: ನಿಧಿ-ಅರ್ಜುನ್ ಮದುವೆ ಸಂಭ್ರಮದ ನಡುವೆ ಕರ್ಣನ ರೋಚಕ ಟ್ವಿಸ್ಟ್ - ಗುಟ್ಟು ರಟ್ಟಾಗುತ್ತಾ?

ವೀಕ್ಷಕರ ನೆಚ್ಚಿನ 'ಕರ್ಣ' ಧಾರಾವಾಹಿಯಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ನಡೀತಿದೆ. ನಿಧಿ ಮತ್ತು ಅರ್ಜುನ್ ಮದುವೆ ತಯಾರಿ ಸಖತ್ ಜೋರಾಗಿದ್ರೂ, ಅಸಲಿ ಆಟ ಶುರು ಮಾಡಿರೋದು ನಮ್ಮ ಕರ್ಣ! ತನ್ನ ಪ್ರೀತಿಯನ್ನು ಉಳಿಸಿಕೊಳ್ಳೋಕೆ ಕರ್ಣ ಮಾಡ್ತಿರೋ ಒಂದೊಂದು ಪ್ಲಾನ್ ವೀಕ್ಷಕರಲ್ಲಿ ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.

ಕರ್ಣ ಧಾರಾವಾಹಿಯಲ್ಲಿ ಮೆಹಂದಿ ಸಂಭ್ರಮ – ಹೊಸ ಟ್ವಿಸ್ಟ್!! | Photo Credit: https://www.instagram.com/zeekannada/?hl=en#
ಕರ್ಣ ಧಾರಾವಾಹಿಯಲ್ಲಿ ಮೆಹಂದಿ ಸಂಭ್ರಮ – ಹೊಸ ಟ್ವಿಸ್ಟ್!! | Photo Credit: https://www.instagram.com/zeekannada/?hl=en#

'ಕರ್ಣ' ಧಾರಾವಾಹಿಯಲ್ಲಿ ಈಗ ಪ್ರೀತಿ ಮತ್ತು ಸಂಚಿನ ನಡುವೆ ದೊಡ್ಡ ಯುದ್ಧವೇ ನಡೆಯುತ್ತಿದೆ. ನಿಧಿ ಮತ್ತು ಅರ್ಜುನ್ ಮದುವೆಯನ್ನು ಹೇಗಾದರೂ ಮಾಡಿ ನೆರವೇರಿಸಲೇಬೇಕು ಎಂದು ರಮೇಶ್ ಪಣತೊಟ್ಟಿದ್ದು, ಒಂದಾದ ಮೇಲೆ ಒಂದರಂತೆ ಮಾಸ್ಟರ್ ಪ್ಲಾನ್‌ಗಳನ್ನು ರೂಪಿಸುತ್ತಿದ್ದಾರೆ. ಆದರೆ ಕರ್ಣ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅಷ್ಟೇ ಚಾಣಾಕ್ಷತನದಿಂದ ಪ್ರತಿತಂತ್ರ ಹೂಡುತ್ತಿದ್ದಾನೆ. ಈ ಹಿಂದೆ ಮಧ್ಯರಾತ್ರಿಯೇ ನಿಧಿಗೆ ಉಂಗುರ ತೊಡಿಸಿ ರಮೇಶ್ ಅವರ ನಿಶ್ಚಿತಾರ್ಥದ ಯೋಜನೆಯನ್ನು ತಲೆಕೆಳಗಾಗಿಸಿದ್ದ ಕರ್ಣ, ಈಗ ಮೆಹಂದಿ ಶಾಸ್ತ್ರದಲ್ಲೂ ತನ್ನ ಆಟ ಶುರು ಮಾಡಿದ್ದಾನೆ.

ಇಂದಿನ ಸಂಚಿಕೆಯಲ್ಲಿ ಶಾಂತಿ ಅವರು ಅರ್ಜುನ್‌ನಿಗೆ ನಿಧಿಯ ಕೈಗೆ ಮೆಹಂದಿ ಹಚ್ಚಲು ಹೇಳಿದಾಗ, ಕರ್ಣನಿಗೆ ತೀವ್ರ ಕೋಪ ಉಂಟಾಗುತ್ತದೆ. ಇದನ್ನು ಸಹಿಸದ ಕರ್ಣ, ಅರ್ಜುನ್ ನಿಧಿಗೆ ಮೆಹಂದಿ ಹಚ್ಚದಂತೆ ತಡೆಯಲು ತನ್ನದೇ ಶೈಲಿಯಲ್ಲಿ ಅಡ್ಡಿಪಡಿಸುತ್ತಾನೆ. ಕರ್ಣನ ಈ ಎಲ್ಲಾ ನಡವಳಿಕೆಗಳನ್ನು ಮನೆಯವರು ಈಗ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಕೇವಲ ಮದುವೆಯ ಸಿದ್ಧತೆಯಲ್ಲ, ಬದಲಾಗಿ ಕರ್ಣ ಮತ್ತು ನಿಧಿಯ ಗುಪ್ತ ಪ್ರೀತಿ ಮನೆಯವರ ಮುಂದೆ ಬಹಿರಂಗವಾಗುವ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದಿನ ಮೆಹಂದಿ ಸಂಭ್ರಮದಲ್ಲಿ ಈ ಪ್ರೇಮ ಕಥೆಗೆ ಹೊಸ ತಿರುವು ಸಿಗಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. 

ನಿಶ್ಚಿತಾರ್ಥದಲ್ಲಿ ಕೊಟ್ಟಿದ್ದ ಶಾಕ್ ನೆನಪಿದೆಯೇ?

ನಿಧಿ ಮತ್ತು ಅರ್ಜುನ್‌ಗೆ ನಿಶ್ಚಿತಾರ್ಥ ಮಾಡ್ಲೇಬೇಕು ಅಂತ ರಮೇಶ್ ಮಾಸ್ಟರ್ ಪ್ಲಾನ್ ಮಾಡಿದ್ರು. ಆದ್ರೆ ಕರ್ಣ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ರಮೇಶ್ ಹಾಕಿದ್ದ ಪ್ಲಾನ್ ಅನ್ನೇ ಉಲ್ಟಾ ಮಾಡಿದ್ದ. ಮಧ್ಯರಾತ್ರಿಯೇ ಯಾರಿಗೂ ಗೊತ್ತಿಲ್ಲದಂತೆ ನಿಧಿಗೆ ಉಂಗುರ ತೊಡಿಸಿ ರಮೇಶ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದ.

ಮೆಹಂದಿ ಶಾಸ್ತ್ರದಲ್ಲೂ ಕರ್ಣನದ್ದೇ ಹವಾ!

ಇಂದಿನ ಸಂಚಿಕೆಯಲ್ಲಿ ಮೆಹಂದಿ ಸಂಭ್ರಮ ಮನೆ ಮಾಡಿದೆ. ಹೇಗಾದ್ರೂ ಮಾಡಿ ಅರ್ಜುನ್ ಜೊತೆ ನಿಧಿ ಮದುವೆ ಮಾಡಿಸಲೇಬೇಕು ಅಂತ ರಮೇಶ್ ಆತುರದಿಂದ ತಯಾರಿ ಮಾಡ್ತಿದ್ದಾರೆ. ಆದ್ರೆ ನಮ್ಮ ಕರ್ಣ ಸುಮ್ಮನೆ ಕೂರೋ ಮಗ ಅಲ್ಲವೇ ಅಲ್ಲ! ಎಂಗೇಜ್‌ಮೆಂಟ್‌ನಲ್ಲಿ ಟ್ವಿಸ್ಟ್ ಕೊಟ್ಟ ಹಾಗೆಯೇ ಇಲ್ಲೂ ತನ್ನದೇ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟಿದ್ದಾನೆ.

ಶಾಂತಿ ಅವರು ನಿಧಿಗೆ ಮೆಹಂದಿ ಹಚ್ಚುವಂತೆ ಅರ್ಜುನ್‌ಗೆ ಹೇಳ್ತಾರೆ. ಇದನ್ನ ಕೇಳಿ ಕರ್ಣನಿಗೆ ಎಲ್ಲಿಲ್ಲದ ಕೋಪ ಬರುತ್ತೆ. ಅರ್ಜುನ್ ಏನಾದ್ರೂ ಮಾಡಿ ನಿಧಿಗೆ ಮೆಹಂದಿ ಹಚ್ಚಬಾರದು ಅಂತ ಕರ್ಣ ಮತ್ತೊಂದು ಮಾಸ್ಟರ್ ಪ್ಲಾನ್ ಮೂಲಕ ಅಡ್ಡಗಾಲು ಹಾಕಿದ್ದಾನೆ.

ಮನೆಯವರ ಎದುರು ಬಯಲಾಗುತ್ತಾ ಪ್ರೀತಿ?

ಈಗ ಈ ಧಾರಾವಾಹಿಯಲ್ಲಿ ರೋಚಕ ಘಟ್ಟ ಎದುರಾಗಿದೆ. ಕರ್ಣ ಮಾಡ್ತಿರೋ ಒಂದೊಂದು ಕೆಲಸವನ್ನ ಮನೆಯವರೆಲ್ಲಾ ತುಂಬಾ ಸೂಕ್ಷ್ಮವಾಗಿ ಗಮನಿಸ್ತಿದ್ದಾರೆ. ಕರ್ಣ ಮತ್ತು ನಿಧಿ ಮಧ್ಯೆ ಏನೋ ನಡೀತಿದೆ ಅನ್ನೋ ಅನುಮಾನ ಈಗ ಮನೆಯವ್ರಿಗೆ ಕಾಡಲು ಶುರುವಾಗಿದೆ.

ಅಂತೂ ಇಂತೂ ಈ ಮೆಹಂದಿ ಸಂಭ್ರಮದಲ್ಲಿ ಕರ್ಣ-ನಿಧಿ ಪ್ರೀತಿಯ ವಿಚಾರ ಮನೆಯವರ ಎದುರು ಓಪನ್ ಆಗುತ್ತಾ? ಕರ್ಣ ತನ್ನ ಪ್ರೀತಿಯನ್ನ ಗೆಲ್ತಾನಾ ಅಥವಾ ರಮೇಶ್ ಮಸಲತ್ತೇ ಗೆಲ್ಲುತ್ತಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ. ನಿಧಿ-ಕರ್ಣ ಜೋಡಿ ಒಂದಾಗಲಿ ಅನ್ನೋದು ವೀಕ್ಷಕರ ಆಸೆ, ಆದ್ರೆ ಈ ಟ್ವಿಸ್ಟ್‌ಗಳು ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದೇ ಈಗಿರೋ ಕುತೂಹಲ! 

Latest News