ಟಾಲಿವುಡ್‌ನ ‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್‌ಟಿಆರ್ (Jr NTR) ತಮ್ಮ ಹೆಸರಿಗೆ ತಕ್ಕ ಹಾಗೆ ರಿಯಲ್ ಲೈಫ್‌ನಲ್ಲೂ ಮಾಸ್ ಆಗಿ ನಿಂತು ಅಭಿಮಾನಿಗಳ ದಿಲ್ ಗೆದ್ದಿದ್ದಾರೆ! ತಮ್ಮ ಹುಟ್ಟುಹಬ್ಬದ ದಿನ ನೋಡೋಕೆ ಬಂದ ಫ್ಯಾನ್ಸ್ ಜೊತೆ ಉದ್ಧಟತನ ತೋರಿಸಿದ ಸೆಕ್ಯೂರಿಟಿ ಬೌನ್ಸರ್‌ಗೆ ತಾರಕ್ ಎಲ್ಲರೆದುರೇ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಜೊತೆ ಇರೋ ಬೌನ್ಸರ್‌ಗಳು ಜನರನ್ನು ದೂಡೋದು, ರೇಗೋದು ಮಾಡ್ತಿರ್ತಾರೆ.
ಮಂಗಳವಾರ ತಡರಾತ್ರಿ ಜೂನಿಯರ್ ಎನ್‌ಟಿಆರ್ ಅವರ ಬರ್ತ್‌ಡೇ ಇದ್ದಿದ್ದರಿಂದ ಹೈದರಾಬಾದ್‌ನಲ್ಲಿರೋ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ರು. ತಮ್ಮ ನೆಚ್ಚಿನ ಹೀರೋನ ಒಂದೇ ಒಂದು ಸಲಿ ಕಣ್ಣು ತುಂಬಿಕೊಳ್ಳಬೇಕು ಅಂತ ಎಷ್ಟೋ ಕಿಲೋಮೀಟರ್ ದೂರದಿಂದ ಬಂದು ಗಂಟೆಗಟ್ಟಲೆ ವೇಟ್ ಮಾಡ್ತಾ ಇದ್ರು. ಫ್ಯಾನ್ಸ್ ಪ್ರೀತಿಯನ್ನು ತಾರಕ್ ಕೂಡ ನಿರಾಸೆ ಮಾಡಲಿಲ್ಲ. ಮಧ್ಯರಾತ್ರಿಯೇ ಮನೆಯಿಂದ ಆಚೆ ಬಂದು, ಗೇಟ್ ಹತ್ತಿರ ಹಾಕಿದ್ದ ಸ್ಟೀಲ್ ಬ್ಯಾರಿಕೇಡ್ ಹಿಂಭಾಗದಿಂದಲೇ ಎಲ್ಲರಿಗೂ ಕೈಬೀಸಿ ಥ್ಯಾಂಕ್ಸ್ ಹೇಳಿದ್ರು.
ಇದೇ ಟೈಮ್‌ನಲ್ಲಿ ತಾರಕ್ ಅವರನ್ನ ಇನ್ನು ಹತ್ತಿರದಿಂದ ನೋಡಬೇಕು ಅಂತ ಕೆಲವು ಅಭಿಮಾನಿಗಳು ಸ್ವಲ್ಪ ಮುಂದೆ ಬರೋಕೆ ಟ್ರೈ ಮಾಡಿದ್ದಾರೆ. ಇದನ್ನ ನೋಡಿ ಅಲ್ಲೇ ಇದ್ದ ಸೆಕ್ಯೂರಿಟಿ ಟೀಮ್ ಒಂದೇ ಸಮನೆ ಅಭಿಮಾನಿಗಳ ಮೇಲೆ ಮುಗಿಬಿದ್ದು, ಅವರನ್ನ ಜೋರಾಗಿ ತಳ್ಳೋಕೆ ಮತ್ತು ರೇಗಾಡೋಕೆ ಶುರು ಮಾಡಿದೆ. ಬೌನ್ಸರ್‌ಗಳ ಈ ಓವರ್ ಆಕ್ಷನ್ ತಾರಕ್ ಕಣ್ಣಿಗೆ ಬಿದ್ದಿದ್ದೇ ತಡ, ಸಲ್ಲೂ ಭಾಯ್ ರೇಂಜ್‌ಗೆ ಎನ್‌ಟಿಆರ್ ಫುಲ್ ಕೆಂಡಾಮಂಡಲ ಆಗಿದ್ದಾರೆ.
ಮೇನ್ ಆಫೀಸರ್ ಕರೆದು ಸಾರ್ವಜನಿಕವಾಗಿ ತರಾಟೆ
ಅಭಿಮಾನಿಗಳನ್ನು ಆ ತರಹ ರಫ್ ಆಗಿ ಹ್ಯಾಂಡಲ್ ಮಾಡ್ತಿರೋದನ್ನು ನೋಡಿ ಸಹಿಸದ ಜೂನಿಯರ್ ಎನ್‌ಟಿಆರ್, ತಕ್ಷಣವೇ ಅಲ್ಲೇ ಇದ್ದ ಮುಖ್ಯ ಭದ್ರತಾ ಅಧಿಕಾರಿಯನ್ನು (Chief Security Officer) ಹತ್ತಿರ ಕರೆದಿದ್ದಾರೆ. ಎಲ್ಲರ ಮುಂದೆಯೇ ಅವರನ್ನ ತರಾಟೆಗೆ ತಗೊಂಡ ತಾರಕ್, "ಇಲ್ಲಿ ಇಷ್ಟೊಂದು ಗೊಂದಲ ಮತ್ತು ಗಲಾಟೆ ಆಗೋಕೆ ನಿಮ್ಮ ಈ ವರ್ತನೆಯೇ ಕಾರಣ. ಬಂದಿರೋದು ನನ್ನ ಅಭಿಮಾನಿಗಳು, ಅವರ ಹತ್ತಿರ ಹೀಗೆ ಬಿಹೇವ್ ಮಾಡಬೇಡಿ" ಅಂತ ಖಡಕ್ ಆಗಿ ಬುದ್ಧಿ ಕಲಿಸಿದ್ದಾರೆ. ನಟನೇ ಖುದ್ದಾಗಿ ಸೆಕ್ಯೂರಿಟಿ ಟೀಮ್‌ಗೆ ಕ್ಲಾಸ್ ತಗೊಂಡಿದ್ದನ್ನು ನೋಡಿ ಅಲ್ಲಿದ್ದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
Jr NTR celebrates his 43rd birthday with fans in #Hyderabad
— Surya Reddy (@jsuryareddy) May 20, 2026
The #Dragon actor #JrNTR was seen waving and smiling at them (#JrNTRfans) while being guarded by his bodyguards and protection from police, as fans arrived in large numbers to celebrate their idol's birthday, outside… pic.twitter.com/CXoeMKAF1s
‘ಡ್ರ್ಯಾಗನ್’ ಸಿನಿಮಾದ ಹೈಲೈಟ್ಸ್ ಇಲ್ಲಿದೆ ನೋಡಿ:
ಒಂದೆಡೆ ಬರ್ತ್‌ಡೇ ಸಂಭ್ರಮ ಆದ್ರೆ, ಇನ್ನೊಂದೆಡೆ ಸ್ಯಾಂಡಲ್‌ವುಡ್‌ನ ಪ್ರಶಾಂತ್ ನೀಲ್ ಮತ್ತು ಎನ್‌ಟಿಆರ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಸಿನಿಮಾದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸ್ತಾ ಇದೆ. ಚಿತ್ರದ ಕೆಲವು ಇಂಟರೆಸ್ಟಿಂಗ್ ಹೈಲೈಟ್ಸ್ ಇಲ್ಲಿದೆ:
ಕ್ರೂರ ಹಂತಕನ ಪಾತ್ರ - ಈ ಸಿನಿಮಾದಲ್ಲಿ ತಾರಕ್ ಅವರು ಅಫೀಮು ದಂಧೆಯ ಕರಾಳ ಲೋಕವನ್ನು ಕಂಟ್ರೋಲ್ ಮಾಡೋ ಒಬ್ಬ ಡೇಂಜರಸ್ ಮತ್ತು ಕ್ರೂರ ಕಿಲ್ಲರ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನೀಲ್ ಸ್ಟೈಲ್ ರಗಡ್ ಲುಕ್ - ಗ್ಲಿಂಪ್ಸ್‌ನಲ್ಲಿ ಹೆಣಗಳ ರಾಶಿಯ ಮೇಲೆ ನಿಂತು ಶತ್ರುಗಳನ್ನು ಸಂಹರಿಸೋ ಸೀನ್‌ಗಳು ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾಗಳ ಕಲ್ಲಿದ್ದಲು ಗಣಿಯ ಡಾರ್ಕ್ ಮತ್ತು ರಗಡ್ ಶೇಡ್ ಅನ್ನು ನೆನಪಿಸುವಂತಿದೆ.
ರಿಲೀಸ್ ಡೇಟ್ ಫಿಕ್ಸ್ - ಭಾರಿ ಬಜೆಟ್‌ನ ಈ ಆಕ್ಷನ್ ಸಿನಿಮಾ ಮುಂದಿನ ವರ್ಷ ಅಂದ್ರೆ ಜೂನ್ 11, 2027 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.
ಯಾವಾಗಲೂ ಅಭಿಮಾನಿಗಳ ಜೊತೆ ಪ್ರೀತಿಯಿಂದ ಇರೋ ಜೂನಿಯರ್ ಎನ್‌ಟಿಆರ್, ಈ ಬಾರಿ ಬೌನ್ಸರ್‌ಗೆ ವಾರ್ನಿಂಗ್ ಕೊಟ್ಟಿರೋ ರೀತಿಗೆ ಟಾಲಿವುಡ್ ಮಾತ್ರವಲ್ಲದೆ ಇಡೀ ಸೌತ್ ಸಿನಿ ಇಂಡಸ್ಟ್ರಿ ಫಿದಾ ಆಗಿದೆ. ಸಿನಿಮಾ ಪ್ರಮೋಷನ್ ಜೊತೆಗೆ ತಾರಕ್ ಅವರ ಈ ರಿಯಲ್ ಲೈಫ್ ಆಟಿಟ್ಯೂಡ್ ಈಗ ಎಲ್ಲೆಡೆ ಸಖತ್ ಸೌಂಡ್ ಮಾಡ್ತಾ ಇದೆ.