ಗಂಡನ ವಿರುದ್ಧ ಪ್ರೋಮೋದಲ್ಲಿ ಕಿಡಿಕಾರಿದ್ದ ‘ಬ್ರಹ್ಮಗಂಟು’ ಗೀತಾ - Guys!! Chilll!! We are good!! ಸಂಸಾರದಲ್ಲಿ ಎದ್ದ ಗಾಸಿಪ್‌ಗೆ ಸಿಕ್ತು ಬಿಗ್ ಟ್ವಿಸ್ಟ್!!

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ. 1’ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಹೈಡ್ರಾಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಹಾಗೂ ಅವರ ಪತಿ ರಾಜಾರಾಮ್ ನಡುವೆ ಶೋನಲ್ಲಿ ದೊಡ್ಡ ಜಗಳ ನಡೆದು, ಗೀತಾ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿರೋ ಪ್ರೋಮೋ ವೈರಲ್ ಆಗಿತ್ತು.

ಒಂದೇ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ ನಟಿ | Photo Credit: www.instagram.com
ಒಂದೇ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ ನಟಿ | Photo Credit: www.instagram.com

ಇದನ್ನು ನೋಡಿ ಇಬ್ಬರ ಮಧ್ಯೆ ಏನೋ ದೊಡ್ಡದಾಗಿ ಬಿರುಕು ಮೂಡಿದೆ, ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅಂತೆಲ್ಲಾ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದರು. ಆದರೆ, ಈ ಎಲ್ಲಾ ಗಾಸಿಪ್‌ಗಳಿಗೆ ನಟಿ ಗೀತಾ ಭಾರತಿ ಭಟ್ ಈಗ ಖುದ್ದಾಗಿ ಬ್ರೇಕ್ ಹಾಕಿದ್ದಾರೆ. ಗಂಡನ ಜೊತೆ ಮುದ್ದಾದ ಫೋಟೋ ಪೋಸ್ಟ್ ಮಾಡಿ, "ಗೈಸ್ ಚಿಲ್.. ನಾವು ಚೆನ್ನಾಗಿದ್ದೇವೆ!" ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರೋಮೋದಲ್ಲಿ ನಡೆದಿದ್ದೇನು? ಕಣ್ಣೀರಿಟ್ಟ ಗೀತಾ ಭಟ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೋಡಿ ನಂ. 1’ ಸೀಸನ್‌ನಲ್ಲಿ ಭಾಗವಹಿಸಿರುವ ಗೀತಾ ಭಾರತಿ ಭಟ್ ಮತ್ತು ರಾಜಾರಾಮ್ ಜೋಡಿ ಅಂದ್ರೆ ಪ್ರೇಕ್ಷಕರಿಗೆ ತುಂಬಾ ಇಷ್ಟ. ಆದರೆ ಇತ್ತೀಚೆಗೆ ರಿಲೀಸ್ ಆದ ಎಪಿಸೋಡ್‌ನ ಪ್ರೋಮೋ ವೀಕ್ಷಕರಿಗೆ ದೊಡ್ಡ ಶಾಕ್ ನೀಡಿತ್ತು.

ಅದರಲ್ಲಿ ಗೀತಾ ಭಾರತಿ ಭಟ್ ಗಂಡನ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಾ, "ನಾನೇನಾದ್ರೂ ಮಾತಾಡಿದ್ರೆ, ಹೇಯ್ ಎಕ್ಸ್‌ಟ್ರಾ ಮಾತುಗಳನ್ನು ಆಡ್ಬೇಡಮ್ಮ, ಏನಕ್ಕೆ ಇದೆಲ್ಲಾ ಡ್ರಾಮಾ ಮಾಡ್ತೀಯಾ ಅಂತೀರಾ. ನನಗೊಂದು ನ್ಯಾಯ, ನಿಮಗೊಂದು ನ್ಯಾಯ ಏನಕ್ಕೆ? ಅದಕ್ಕೆ ರಾಜಾರಾಮ್ ಇದೆ ಇಷ್ಟೇ ಆಗೋದು, ಹೊಡಿ, ನೀನು ನನ್ನ ಬುರುಡೆನೇ ಹೊಡೆ ಬೇಕಾದ್ರೆ" ಅಂತ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ, "ನಾನು ಬಿಕ್ಕಿ ಬಿಕ್ಕಿ ಅತ್ತಿರುವಾಗ ಗೇಲಿ ಮಾಡಿದ್ದೀರಾ ಏನಕ್ಕೆ? ನನ್ನನ್ನು ದೂರ ತಳ್ಬೋದು, ಆದ್ರೆ ನಾನು ಎಷ್ಟೋ ಸಲ ಅತ್ತುಕೊಂಡು ಮಲಗಿದ್ದೀನಿ, ದಯವಿಟ್ಟು ನನ್ನ ಹಾಗೆ ಅತ್ತುಕೊಂಡು ಮಲಗೋಕೆ ಬಿಡಬೇಡಿ ಅಷ್ಟೇ" ಎಂದು ಕಣ್ಣೀರಿಟ್ಟಿದ್ದರು.

ಟಿಆರ್‌ಪಿ ಗೋಸ್ಕರ ಸಂಸಾರ ಒಡೀತೀರಾ? ವಾಹಿನಿ ವಿರುದ್ಧ ಜನಾಕ್ರೋಶ

ಈ ಎಮೋಷನಲ್ ವಿಡಿಯೋ ಹೊರಬರುತ್ತಿದ್ದಂತೆ ನೆಟ್ಟಿಗರು ಮತ್ತು ಅಭಿಮಾನಿಗಳು ಜೀ ಕನ್ನಡ ವಾಹಿನಿ ಹಾಗೂ ಶೋನ ಫಾರ್ಮ್ಯಾಟ್ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿದ್ದರು. ಕಮೆಂಟ್ ಸೆಕ್ಷನ್‌ನಲ್ಲಿ ಜನ ತಮಗನಿಸಿದ್ದನ್ನು ಬರೆದು ಆಕ್ರೋಶ ಹೊರಹಾಕಿದ್ದರು.

"ಈ ಶೋಗೆ ಬರುವಾಗ ಯಾವುದೇ ನೋವಿಲ್ಲ ಅನ್ನೋ ತರ ಬಂದಿದ್ದ ಜೋಡಿಗಳು, ಈಗ ನೋಡಿದರೆ ಎಲ್ಲರ ಮನೆ ದೋಸೆಯೂ ತೂತೇ ಅನ್ನೋ ಹಾಗೆ ಜಗಳ ಆಡುತ್ತಿದ್ದಾರೆ", "ಇದು ಗಂಡ ಹೆಂಡತಿಯನ್ನು ಒಂದು ಮಾಡೋ ಶೋನಾ ಅಥವಾ ಬೇರೆ ಬೇರೆ ಮಾಡೋ ಶೋನಾ? ಇಲ್ಲಿಗೆ ಹೋದವರೆಲ್ಲ ಗ್ಯಾರಂಟಿ ಡೈವರ್ಸ್ ಮಾಡ್ಕೊಂಡು ಬರ್ತಾರೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಇನ್ನು ಕೆಲವರಂತೂ, "ಕೇವಲ ಟಿಆರ್‌ಪಿ (TRP) ಗೋಸ್ಕರ ಈ ತರಹದ್ದನ್ನೆಲ್ಲಾ ಸ್ಕ್ರಿಪ್ಟ್ ಮಾಡಿ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಾ?" ಅಂತ ವಾಹಿನಿಯನ್ನು ತರಾಟೆಗೆ ತಗೆದುಕೊಂಡಿದ್ದರು.

ಒಂದೇ ಒಂದು ಪೋಸ್ಟ್ ಮೂಲಕ ಗಾಸಿಪ್‌ಗಳಿಗೆ ಬ್ರೇಕ್

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜಗಳದ ಪ್ರೋಮೋ ಭೀಕರವಾಗಿ ವೈರಲ್ ಆಗಿ, ಜನರ ಕಾಮೆಂಟ್‌ಗಳು ಮಿತಿಮೀರುತ್ತಿರುವುದನ್ನು ಗಮನಿಸಿದ ನಟಿ ಗೀತಾ ಭಾರತಿ ಭಟ್ ತಕ್ಷಣವೇ ಅಲರ್ಟ್ ಆಗಿದ್ದಾರೆ. ಗಾಸಿಪ್‌ಗಳಿಗೆ ಜಾಸ್ತಿ ರೆಕ್ಕೆಪುಕ್ಕ ಬರಬಾರದು ಅಂತ ತಮ್ಮ ಪತಿ ರಾಜಾರಾಮ್ ಜೊತೆಗಿನ ಕೆಲವು ಕ್ಯೂಟ್ ಅಂಡ್ ಹ್ಯಾಪಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದ ಜೊತೆಗೆ "Guys!! Chilll!! We are good!" (ಗೈಸ್ ಚಿಲ್, ನಾವು ಚೆನ್ನಾಗಿದ್ದೇವೆ!) ಅಂತ ಕ್ಯಾಪ್ಶನ್ ಬರೆದು ಅಪ್‌ಲೋಡ್ ಮಾಡಿದ್ದಾರೆ. ಅಂದರೆ, ಶೋನಲ್ಲಿ ನಡೆದಿದ್ದು ಕೇವಲ ಆ ಕ್ಷಣದ ಭಾವುಕತೆ ಅಥವಾ ಶೋನ ಒಂದು ಭಾಗ ಅಷ್ಟೇ, ನಮ್ಮಿಬ್ಬರ ಮಧ್ಯೆ ಯಾವುದೇ ರಿಯಲ್ ಪ್ರಾಬ್ಲಮ್ ಇಲ್ಲ ಅನ್ನೋದನ್ನು ಅವರು ಇನ್ಡೈರೆಕ್ಟ್ ಆಗಿ ಕನ್ಫರ್ಮ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಮೇಲಷ್ಟೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಜೀ ಕನ್ನಡದ ಜನಪ್ರಿಯ ಸೆಲೆಬ್ರಿಟಿ ರಿಯಾಲಿಟಿ ಶೋ

ಅಂದಹಾಗೆ, ಈ ‘ಜೋಡಿ ನಂ. 1’ ಕಾರ್ಯಕ್ರಮ ಸದ್ಯ ಕಿರುತೆರೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಶೋನಲ್ಲಿ ಹಿರಿಯ ನಟಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ಸ್ಯಾಂಡಲ್‌ವುಡ್‌ನ ನಟ ‘ನೆನಪಿರಲಿ’ ಪ್ರೇಮ್ ಹಾಗೂ ಪ್ರಸ್ತುತ ‘ಅಮೃತಧಾರೆ’ ಧಾರಾವಾಹಿಯ ಪಾಪ್ಯುಲರ್ ಜೋಡಿಯಾಗಿರುವ ನಟ ರಾಜೇಶ್ ನಟರಂಗ ಮತ್ತು ನಟಿ ಛಾಯಾ ಸಿಂಗ್ ತೀರ್ಪುಗಾರರಾಗಿ (Judges) ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇನ್ನು ಇಡೀ ಶೋ ಅನ್ನು ನಟಿ ಶ್ವೇತಾ ಚಂಗಪ್ಪ ಮತ್ತು ಕಾಮಿಡಿಯನ್ ಕುರಿ ಪ್ರತಾಪ್ ತಮ್ಮದೇ ಸ್ಟೈಲ್‌ನಲ್ಲಿ ಸಖತ್ ಇಂಟರೆಸ್ಟಿಂಗ್ ಆಗಿ ನಿರೂಪಣೆ ಮಾಡುತ್ತಿದ್ದಾರೆ.

Latest News