May 5, 2026 Languages : ಕನ್ನಡ | English

ಬಾಲಿವುಡ್ ಬೆಡಗಿ ಹುಮಾ ಖುರೇಷಿ ಮದುವೆ ಫಿಕ್ಸ್? ಯಾರೀ ರಚಿತ್ ಸಿಂಗ್? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ!!

ಪ್ರೀತಿ ಅನ್ನೋದು ಯಾವ ವಯಸ್ಸಿನಲ್ಲಾದರೂ ಆಗಬಹುದು ಅನ್ನೋದಕ್ಕೆ ಹುಮಾ ಖುರೇಷಿ ಅವರೇ ಸಾಕ್ಷಿ. ಕಳೆದ 13 ವರ್ಷಗಳಿಂದ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಮಾ, ಈಗ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ; ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಹುಮಾ ಅವರು ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಬಾಲಿವುಡ್ ನಟಿ ಹುಮಾ ಖುರೇಷಿ ಶೀಘ್ರವೇ ವಧು | Photo Credit: https://x.com/Ramanand06X
ಬಾಲಿವುಡ್ ನಟಿ ಹುಮಾ ಖುರೇಷಿ ಶೀಘ್ರವೇ ವಧು | Photo Credit: https://x.com/Ramanand06X

ಹುಮಾ ಅವರ ಹೃದಯ ಗೆದ್ದಿರೋದು ಮತ್ಯಾರೂ ಅಲ್ಲ, ಬಾಲಿವುಡ್‌ನ ಫೇಮಸ್ ಫಿಟ್ನೆಸ್ ಟ್ರೈನರ್ ರಚಿತ್ ಸಿಂಗ್. ಇವರು ಆಲಿಯಾ ಭಟ್, ರಣ್‌ವೀರ್ ಸಿಂಗ್‌ರಂತಹ ಸ್ಟಾರ್‌ಗಳಿಗೆ ಜಿಮ್‌ನಲ್ಲಿ ಟ್ರೈನಿಂಗ್ ಕೊಡ್ತಾರೆ. ಅಷ್ಟೇ ಅಲ್ಲ, ರಚಿತ್ 'ಕರ್ಮ ಕಾಲಿಂಗ್' ಅನ್ನೋ ಸಿನಿಮಾ ಮೂಲಕ ಆಕ್ಟಿಂಗ್ ಫೀಲ್ಡ್‌ಗೂ ಕಾಲಿಟ್ಟಿದ್ದಾರೆ. ಅಂದಹಾಗೆ, ಈ ಹಿಂದೆ ಹುಮಾ ಹೆಸರು ನಿರ್ಮಾಪಕ ಮುದಸರ್ ಅಜೀಜ್ ಜೊತೆ ಕೇಳಿಬಂದಿತ್ತು, ಆದರೆ 2022ರಲ್ಲಿ ಆ ಸಂಬಂಧ ಮುರಿದುಬಿದ್ದಿತ್ತು. ಈಗ ರಚಿತ್ ಜೊತೆ ಹುಮಾ ಸಖತ್ ಹ್ಯಾಪಿಯಾಗಿದ್ದಾರಂತೆ.

ಇವರಿಬ್ಬರ ಪ್ರೇಮ ಪುರಾಣ ಯಾವಾಗ ಶುರುವಾಯ್ತು ಅನ್ನೋದು ಪಕ್ಕಾ ಗೊತ್ತಿಲ್ಲದಿದ್ದರೂ, ಕಳೆದ ಮಾರ್ಚ್‌ನಲ್ಲಿ ಶಾರುಖ್ ಖಾನ್ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಇಬ್ಬರೂ ಸಖತ್ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು.

ಆಮೇಲೆ ಸೋನಾಕ್ಷಿ ಸಿನ್ಹಾ ಮದುವೆಯಲ್ಲೂ ಜೊತೆಯಾಗಿಯೇ ಬಂದು ಎಲ್ಲರ ಗಮನ ಸೆಳೆದಿದ್ದರು. ಇವರಿಬ್ಬರ ಕೆಮಿಸ್ಟ್ರಿ ನೋಡಿಯೇ ಜನರಿಗೆ ಇವರ ಮಧ್ಯೆ ಏನೋ ನಡೀತಿದೆ ಅನ್ನೋ ಡೌಟ್ ಬಂದಿತ್ತು. ಈಗ ಆ ಡೌಟ್ ಮದುವೆಯ ಸುದ್ದಿಯಾಗಿ ಹೊರಬಂದಿದೆ.

ಸಿನಿಮಾ ಸ್ಟೈಲ್‌ನಲ್ಲೇ ಈ ಮದುವೆ ನಡೆಯುತ್ತಾ ಅಂದುಕೊಂಡ್ರೆ, ಇಲ್ಲಿ ಸ್ವಲ್ಪ ಟ್ವಿಸ್ಟ್ ಇದೆ. ಹುಮಾ ಅವರ ಮದುವೆ ತುಂಬಾ ಸಿಂಪಲ್ ಆಗಿ, ಕೇವಲ ಫ್ಯಾಮಿಲಿ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ. ಆದರೆ, ಮದುವೆಯ ನಂತರ ಮುಂಬೈನಲ್ಲಿ ಚಿತ್ರರಂಗದವರಿಗಾಗಿ ಗ್ರ್ಯಾಂಡ್ ರಿಸೆಪ್ಷನ್ ಕೊಡಲು ಪ್ಲಾನ್ ಮಾಡಿದ್ದಾರಂತೆ. ಮದುವೆಯ ತಯಾರಿ ಈಗಾಗಲೇ ಜೋರಾಗಿ ನಡೀತಿದೆ ಅನ್ನೋದು ವರದಿಯ ಸಾರಾಂಶ.

ನಮಗೆಲ್ಲಾ ಗೊತ್ತಿರೋ ಹಾಗೆ ಹುಮಾ ಖುರೇಷಿ ರಜನಿಕಾಂತ್ ಜೊತೆ ಕಾಲಾ ಸಿನಿಮಾದಲ್ಲಿ ಮಿಂಚಿದ್ದರು. ಈಗ ನಮ್ಮ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣ ಮಾಡಿ ನಟಿಸುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ನಲ್ಲೂ ಹುಮಾ ಒಂದು ಪವರ್‌ಫುಲ್ ಪಾತ್ರ ಮಾಡ್ತಿದ್ದಾರೆ. ಎಲಿಜಬೆತ್ ಅನ್ನೋ ರೋಲ್‌ನಲ್ಲಿ ಹುಮಾ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಅವರು ತುಂಬಾನೇ ಎಕ್ಸೈಟ್ ಆಗಿದ್ದಾರೆ.

ಸದ್ಯಕ್ಕೆ ಹುಮಾ ಖುರೇಷಿ ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಎಲ್ಲೂ ಬಾಯಿ ಬಿಟ್ಟಿಲ್ಲ. ಆದ್ರೆ ಹುಮಾ ಮದುವೆಯ ಸುದ್ದಿ ಕೇಳಿ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದು, ವಿಶ್ ಮಾಡೋಕೆ ಶುರು ಮಾಡಿದ್ದಾರೆ. ಹುಮಾ ಅಣ್ಣ ಯಾವತ್ತು ತಮ್ಮ ಮದುವೆಯ ಡೇಟ್ ಅನೌನ್ಸ್ ಮಾಡ್ತಾರೆ ಅಂತ ಕಾದು ನೋಡಬೇಕಿದೆ!

Latest News