May 11, 2026 Languages : ಕನ್ನಡ | English

ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು 100 ಸಂಚಿಕೆ ಪೂರೈಸಿದ ಗೌರಿ ಕಲ್ಯಾಣ ಸೀರಿಯಲ್ - ಮುಂದೆ ಕಾದಿದೆ ಇನ್ನೂ ದೊಡ್ಡ ಸರ್ಪ್ರೈಸ್!!

ಕನ್ನಡ ಕಿರುತೆರೆಯ ಟಾಪ್ ವಾಹಿನಿಗಳಲ್ಲಿ ಒಂದಾದ ಕಲರ್ಸ್ ಕನ್ನಡ, ವೀಕ್ಷಕರಿಗೆ ಸದಾ ಕಿಕ್ ಕೊಡೋ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಅಂದ್ರೆ ಅದು ನಮ್ಮೆಲ್ಲರ ಫೇವರೆಟ್ 'ಗೌರಿ ಕಲ್ಯಾಣ'. ಸದ್ಯ ಈ ಸೀರಿಯಲ್ ಸದ್ದಿಲ್ಲದೆ ಒಂದು ದೊಡ್ಡ ಮೈಲಿಗಲ್ಲು ತಲುಪಿದೆ. ಅದೇ 100 ಸಂಚಿಕೆಗಳ ಸಂಭ್ರಮ!

100 ಎಪಿಸೋಡ್ ಪೂರೈಸಿದ ಸೀರಿಯಲ್ | Photo Credit: colorskannadaofficial
100 ಎಪಿಸೋಡ್ ಪೂರೈಸಿದ ಸೀರಿಯಲ್ | Photo Credit: colorskannadaofficial

ಹೌದು, ಇಡೀ ಚಿತ್ರತಂಡ ಈಗ ಶತಕ ಬಾರಿಸಿದ ಖುಷಿಯಲ್ಲಿದೆ. ಇಷ್ಟು ಕಡಿಮೆ ಸಮಯದಲ್ಲಿ ಜನರ ಮನೆಮಾತಾಗೋದು ಅಂದ್ರೆ ಸುಮ್ಮನೆನಾ? ಈ ಖುಷಿಯನ್ನು ಕಲರ್ಸ್ ಕನ್ನಡದವರ ಹಾಗೂ ಸೀರಿಯಲ್ ನಟಿ ಶಿಲ್ಪಾ ಕಾಮತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ.

ಸೀರಿಯಲ್ ಕ್ಲಿಕ್ ಆಗಿದ್ದು ಎಲ್ಲಿ?

ಗೌರಿ ಕಲ್ಯಾಣ ಇಷ್ಟು ಬೇಗ ಜನರ ಮನಸ್ಸಿಗೆ ಹತ್ತಿರವಾಗಲು ಮುಖ್ಯ ಕಾರಣ ಅಂದ್ರೆ ಅಲ್ಲಿರೋ ಜಗಳ ಮತ್ತು ಪ್ರೀತಿಯ ತೂಗುಯ್ಯಾಲೆ.

ಗೌರಿ-ರಾಘವ ಕೆಮಿಸ್ಟ್ರಿ: ಮುಗ್ಧ ಗೌರಿ ಮತ್ತು ಸ್ಟೈಲಿಶ್ ರಾಘವ ನಡುವಿನ ಸಣ್ಣ ಪುಟ್ಟ ಕ್ಯೂಟ್ ಫೈಟ್ಸ್ ನೋಡೋದಕ್ಕೆ ಒಂಥರಾ ಮಜಾ ಕೊಡುತ್ತೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್ - ನಂಬಿಕೆ-ಅಪನಂಬಿಕೆ, ಸತ್ಯ-ಸುಳ್ಳಿನ ನಡುವಿನ ಹೋರಾಟ ವೀಕ್ಷಕರನ್ನು ದಿನಾ ರಾತ್ರಿ ಟಿವಿಗೆ ಅಂಟಿಕೊಳ್ಳುವಂತೆ ಮಾಡಿದೆ.

ಫ್ಯಾಮಿಲಿ ಎಮೋಷನ್ಸ್ - ಕೇವಲ ಪ್ರೇಮಕಥೆಯಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗೋ ಫ್ಯಾಮಿಲಿ ಡ್ರಾಮಾ ಇಲ್ಲಿದೆ.

ಶ್ರಮಕ್ಕೆ ಸಿಕ್ಕ ಫಲ!

ಯಾವುದೇ ಸಕ್ಸಸ್ ಹಿಂದೆ ದೊಡ್ಡ ಟೀಮ್ ಇರುತ್ತೆ. ಗೌರಿ ಕಲ್ಯಾಣದ ಡೈರೆಕ್ಟರ್ ಇಂದ ಹಿಡಿದು ಲೈಟ್ ಬಾಯ್ ವರೆಗೆ ಎಲ್ಲರೂ ಹಗಲು ರಾತ್ರಿ ಶ್ರಮಿಸಿದ್ದಾರೆ. ಪ್ರತಿ ಎಪಿಸೋಡ್‌ನಲ್ಲೂ ಏನಾದರೂ ಹೊಸತು ಇರಬೇಕು ಅನ್ನೋ ಇವರ ಹಂಬಲವೇ ಇಂದು ಸೀರಿಯಲ್ ಅನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.

ನೆಟ್ಟಿಗರ ಮಾತು:

ಸೋಷಿಯಲ್ ಮೀಡಿಯಾದಲ್ಲಂತೂ ಸೀರಿಯಲ್ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. "ರಾಘವನ ಆಟಿಟ್ಯೂಡ್ ಸೂಪರ್", "ಗೌರಿ ಅಳೋದು ನೋಡಿದ್ರೆ ನಮಗೂ ಬೇಜಾರಾಗುತ್ತೆ" ಅನ್ನೋವಷ್ಟು ಮಟ್ಟಿಗೆ ಈ ಪಾತ್ರಗಳು ಜನರಿಗೆ ಆಪ್ತವಾಗಿವೆ.

ಮುಂದಿನ ದಿನಗಳಲ್ಲಿ ಗೌರಿ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳಾಗಬಹುದು? ಕಥೆ ಯಾವ ತಿರುವು ಪಡೆಯುತ್ತೆ ಅನ್ನೋ ಕುತೂಹಲ ಈಗ ಡಬಲ್ ಆಗಿದೆ. ಶತಕ ಬಾರಿಸಿದ ಶಿಲ್ಪಾ ಕಾಮತ್ ಅಂಡ್ ಟೀಮ್‌ಗೆ ನಮ್ಮ ಕಡೆಯಿಂದಲೂ ಒಂದು ದೊಡ್ಡ ಚಪ್ಪಾಳೆ

Latest News