Apr 29, 2026 Languages : ಕನ್ನಡ | English

ನಮ್ಮ ಜಗತ್ತು ದೊಡ್ಡದಾಗುತ್ತಿದೆ - ತಂದೆಯಾಗುತ್ತಿರುವ ಸಂಭ್ರಮದಲ್ಲಿ ನಟ ಧನಂಜಯ್ ಫೋಟೋಶೂಟ್ ವೈರಲ್!!

ಸ್ಯಾಂಡಲ್‌ವುಡ್‌ನಲ್ಲಿ ವಿಲನ್ ಆಗಿ ಎಂಟ್ರಿ ಕೊಟ್ಟು, ಹೀರೋ ಆಗಿ ಮೆರೆದು, ಈಗ ನಿರ್ಮಾಪಕನಾಗಿಯೂ ಸೈ ಎನಿಸಿಕೊಂಡಿರೋ ನಮ್ಮ 'ಡಾಲಿ' ಧನಂಜಯ್ ಬದುಕಿಗೆ ಈಗ ಅತೀ ದೊಡ್ಡ ಪ್ರಶಸ್ತಿ ಸಿಗುವ ಸಮಯ ಬಂದಿದೆ. ಅದುವೇ 'ಅಪ್ಪ' ಅನ್ನೋ ಪಟ್ಟ ಹೌದು, ಧನಂಜಯ್ ಮತ್ತು ಧನ್ಯತಾ ದಂಪತಿ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಡಾಲಿ ಧನಂಜಯ್ ಲೇಟೆಸ್ಟ್ ಫೋಟೋಶೂಟ್ ವೈರಲ್ | Photo Credit: dhananjaya_ka
ಡಾಲಿ ಧನಂಜಯ್ ಲೇಟೆಸ್ಟ್ ಫೋಟೋಶೂಟ್ ವೈರಲ್ | Photo Credit: dhananjaya_ka

ಕೆಮಿಸ್ಟ್ರಿ ಅಂದ್ರೆ ಇದು ಫೋಟೋ ನೋಡಿ ಫ್ಯಾನ್ಸ್ ಫಿದಾ

ತಮ್ಮ ಪತ್ನಿ ಧನ್ಯತಾ ಅವರ ಜೊತೆ ಮಾಡಿಸಿರೋ ಲೇಟೆಸ್ಟ್ ಫೋಟೋಶೂಟ್ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಮಂಜಿನಂತೆ ಬಿಳಿ ಬಣ್ಣದ ಡ್ರೆಸ್ ಧರಿಸಿರೋ ಈ ಜೋಡಿಯನ್ನು ನೋಡಿದ್ರೆ, ಸ್ವರ್ಗದಿಂದ ಇಳಿದು ಬಂದ ದೇವದೂತರಂತೆ ಕಾಣುತ್ತಿದ್ದಾರೆ.

ಧನಂಜಯ್ ಅವರು ಈ ಫೋಟೋಗಳಿಗೆ ನೀಡಿರೋ ಕ್ಯಾಪ್ಷನ್ ನೋಡಿ: "ನಮ್ಮ ಜಗತ್ತು ದೊಡ್ಡದಾಗುತ್ತಿದೆ". ಈ ಸಾಲಿನಲ್ಲಿ ಎಂತಹ ಖುಷಿ ಇದೆ ಅಲ್ವಾ? ಇಷ್ಟು ದಿನ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ಡಾಲಿ, ಈಗ ಮಗುವಿನ ಜೊತೆ ಹೊಸ ಇನ್ನಿಂಗ್ಸ್ ಶುರು ಮಾಡೋಕೆ ರೆಡಿಯಾಗಿದ್ದಾರೆ.

2025ರ ಫೆಬ್ರವರಿ 16 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈಗ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಸಿಹಿ ಸುದ್ದಿ ಸಿಕ್ಕಿರೋದು ಫ್ಯಾನ್ಸ್‌ಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ಹಬ್ಬದಂತಿದೆ. ಫೋಟೋಗಳಲ್ಲಿ ಧನ್ಯತಾ ಅವರ ಮುಖದಲ್ಲಿನ ಆ 'ಪ್ರೆಗ್ನೆನ್ಸಿ ಗ್ಲೋ' ಮತ್ತು ಧನಂಜಯ್ ಅವರ ಮುಖದಲ್ಲಿನ ಆ ಸಂಭ್ರಮ ಎಲ್ಲವನ್ನೂ ಹೇಳುತ್ತಿದೆ.

ಕೌಂಟ್‌ಡೌನ್ ಶುರುವಾಗಿದೆ ಈ ವಾರವೇ ಬರಲಿದೆಯೇ ಸುದ್ದಿ?

ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬರ್ತಿರೋ ಸುದ್ದಿಯ ಪ್ರಕಾರ, ಡೆಲಿವರಿ ಡೇಟ್ ಫಿಕ್ಸ್ ಆಗಿದೆಯಂತೆ. ಮೂಲಗಳ ಪ್ರಕಾರ ಇದೇ ವಾರ ಡಾಲಿ ಮನೆಯಿಂದ ಒಂದು ಖುಷಿಯ ಸುದ್ದಿ ಹೊರಬರೋ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಫ್ಯಾನ್ಸ್ ಗ್ರೂಪ್‌ಗಳಲ್ಲಿ "ಪುಟ್ಟ ಡಾಲಿ ಬರ್ತಾನಾ?" ಅಥವಾ "ಪುಟ್ಟ ಲಕ್ಷ್ಮಿ ಬರ್ತಾಳಾ?" ಅನ್ನೋ ಚರ್ಚೆ ಕೂಡ ಜೋರಾಗಿದೆ.

ರಿಯಲ್ ಲೈಫ್ ಹೀರೋ ಈಗ ಅಪ್ಪ

ತೆರೆಯ ಮೇಲೆ ಎಷ್ಟೇ ರಗಡ್ ಆಗಿ ಕಾಣಿಸಿಕೊಂಡರೂ, ಧನಂಜಯ್ ಮನಸ್ಸು ಮಾತ್ರ ತುಂಬಾನೇ ಮೃದು. ಈಗ ತಮ್ಮ ಸ್ವಂತ ಮಗುವನ್ನು ಎತ್ತಿಕೊಳ್ಳೋ ಆ ಕ್ಷಣಕ್ಕಾಗಿ ಅವರು ಕಾತರದಿಂದ ಕಾಯುತ್ತಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಈ ವಿಶೇಷ ಸಮಯವನ್ನು ಎಂಜಾಯ್ ಮಾಡೋಕೆ ಅವರು ಪ್ಲಾನ್ ಮಾಡಿಕೊಂಡಿದ್ದಾರೆ.

ಡಾಲಿ ಮನೆಯಲ್ಲಿ ಈಗ ಹಬ್ಬದ ಕಳೆ ಮನೆ ಮಾಡಿದೆ. ಬದುಕಿನ ಈ ಹೊಸ ಜರ್ನಿ ಅವರಿಗೆ ಇನ್ನಷ್ಟು ಯಶಸ್ಸು ಮತ್ತು ಸುಖ ನೀಡಲಿ. ಆ ದೇವರು ತಾಯಿ ಮತ್ತು ಮಗು ಇಬ್ಬರಿಗೂ ಆರೋಗ್ಯ ನೀಡಲಿ ಅನ್ನೋದೇ ನಮ್ಮೆಲ್ಲರ ಹಾರೈಕೆ.