ಸ್ಯಾಂಡಲ್‌ವುಡ್‌ನ 'ನಟರಾಕ್ಷಸ' ಡಾಲಿ ಧನಂಜಯ್ ಅವರು ಸದಾ ಹೊಸತನದ ತುಡಿತವಿರುವ ನಟ ಮತ್ತು ನಿರ್ಮಾಪಕ. ಇದೀಗ ಅವರ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಮದರ್ ಪ್ರಾಮಿಸ್' (Mother Promise) ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಧನಂಜಯ್ ಅವರು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ 'ದಾಲಿ ಡೈರಿ'ಯ ನಾಲ್ಕು ಪುಟಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಮೊದಲ ಹಾಡಿನ ಅಪ್‌ಡೇಟ್ ನೀಡಿದ್ದಾರೆ. "ಎಲ್ಲರನ್ನೂ ಪಂಪ್ ಅಪ್ ಮಾಡುವ ಹಾಡು.. ನಿರೀಕ್ಷಿಸಿ!" ಎಂದು ಬರೆಯುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಡೈರಿಯ ಮೊದಲ ಪುಟದಲ್ಲಿ ಧನಂಜಯ್ ಬಹಳ ಆಪ್ತವಾಗಿ ಈ ಸಿನಿಮಾದ ಹುಟ್ಟಿನ ಬಗ್ಗೆ ಬರೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಕಥೆ ಶುರುವಾಗುವುದೇ '2025ರಲ್ಲಿ ನಮ್ಮ RCB ಕಪ್ ಗೆದ್ದ ಆ ರಾತ್ರಿಯಿಂದ'. ಆರ್‌ಸಿಬಿ ಅಭಿಮಾನಿಗಳಿಗೆ ಇದೊಂದು ದೊಡ್ಡ ಎಮೋಷನ್. "ಆ ರಾತ್ರಿ ಗೆಲುವಿನ ಸಂಭ್ರಮದಿಂದಲೇ ಈ ಸಿನಿಮಾ ಶುರು ಮಾಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಕಾಲೇಜು ದಿನಗಳಲ್ಲಿ ಗೆಳೆಯರಾದ ನಾಗ, ಸುನಿಲ್, ಮಹದೇವ ಅವರೊಂದಿಗೆ ಸೇರಿ 'Father of All Mass Movies' ಎಂಬ ಶಾರ್ಟ್ ಫಿಲ್ಮ್ ಮಾಡಿದ್ದ ನೆನಪನ್ನು ಅವರು ಇಲ್ಲಿ ಮೆಲುಕು ಹಾಕಿದ್ದಾರೆ.
ಎಲ್ಲರನ್ನೂ ಪಂಪ್ ಅಪ್ ಮಾಡುವ ಹಾಡು.. ನಿರೀಕ್ಷಿಸಿ!
— Dhananjaya (@Dhananjayaka) April 7, 2026
ಸಿಂಗರ್ ಗೆಸ್ ಮಾಡಿ 🎙️🫡💥
Veni Vidi Vici ✌️#MotherPromise #FirstBanger #TheRoastSong #VeniVidiVici@PoornaMysore @dr_bhushana @ShashankSoghal @oh_rahulroy @eneyedm @NavaneethSham @KmYadunandan @pinkticketsoff pic.twitter.com/3O9riHH8Hn
ಸಿನಿಮಾದ ಟೈಟಲ್ ಹಾಗೂ ಟ್ಯಾಗ್ ಲೈನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಾಲಿ, "Mother Promise.. Father of All Promises" ಎಂಬ ಸಾಲುಗಳು ಕಥೆಗೆ ಬಹಳ ಪೂರಕವಾಗಿವೆ ಎಂದಿದ್ದಾರೆ. ಈ ವಿಭಿನ್ನ ಟೈಟಲ್ ಕೇಳಿದ ತಕ್ಷಣ ಅವರ ಮುಖ ಅರಳಿತಂತೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪೋಸ್ಟರ್‌ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ದೊಡ್ಡ ಮಟ್ಟದ ಉತ್ಸಾಹ ಬಂದಿದೆ. ಈಗ ಇದೇ ಜೋಶ್‌ನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ.
ಈ ಹಾಡಿನ ಕುರಿತು ಧನಂಜಯ್ ನೀಡಿರುವ ಸುಳಿವುಗಳು ಈಗ ಎಲ್ಲರ ಚರ್ಚೆಗೆ ಕಾರಣವಾಗಿವೆ. ಹಾಡಿನ ಬಗ್ಗೆ ಅವರು ಹೀಗೆ ಬರೆದಿದ್ದಾರೆ
ಸಂಗೀತ: ನವನೀತ್ ಶ್ಯಾಮ್ (ನರನಾಡಿ ಪಂಪ್ ಆಗುವಂತಹ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ)
ಸಾಹಿತ್ಯ: ಶಶಾಂಕ್ ಸೋಗಾಲ್ (ಮಾಸ್ ಆಗಿ ಸಾಹಿತ್ಯ ಬರೆದಿದ್ದಾರೆ)
ಗಾಯಕರು: ನಮ್ಮ ಪ್ರೀತಿಯ, ಲೆಜೆಂಡರಿ ಮತ್ತು ಮಿಲೇನಿಯಲ್ಸ್‌ಗಳ ಫೇವರೆಟ್ ಸಿಂಗರ್!
ಡೈರಿಯ ಪುಟದಲ್ಲಿ ಗಾಯಕರ ಹೆಸರಿರುವ ಜಾಗವನ್ನು ಖಾಲಿ ಬಿಟ್ಟು, "ಸಿಂಗರ್ ಗೆಸ್ ಮಾಡಿ" ಎಂದು ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ಇದು ಯಾವ ಗಾಯಕರಿರಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ.
ಸಂಭ್ರಮದ 'ದ ರೋಸ್ಟ್ ಸಾಂಗ್' (#TheRoastSong)
ಜೀವನದ ಗೆಲುವುಗಳನ್ನು ಸೆಲೆಬ್ರೇಟ್ ಮಾಡುವ ಮಜವಾದ ಹಾಡು #TheRoastSong ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ಗೆಲ್ಲುತ್ತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. 'ಮದರ್ ಪ್ರಾಮಿಸ್' ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಡೈರಿಯ ಕೊನೆಯಲ್ಲಿ "Veni Vidi Vici" (ಬಂದೆ, ನೋಡಿದೆ, ಗೆದ್ದೆ) ಎಂದು ಬರೆಯುವ ಮೂಲಕ ಗೆಲುವಿನ ವಿಶ್ವಾಸ ಸಾರಿದ್ದಾರೆ.
'ಮದರ್ ಪ್ರಾಮಿಸ್' ಚಿತ್ರವು ಕೇವಲ ಸಿನಿಮಾ ಮಾತ್ರವಲ್ಲದೆ, ಆರ್‌ಸಿಬಿ ಅಭಿಮಾನಿಗಳ ಕನಸು ಮತ್ತು ಗೆಳೆಯರ ಹಳೆಯ ನೆನಪುಗಳ ಸಮ್ಮಿಲನದಂತೆ ಕಾಣುತ್ತಿದೆ. ಈಗ ಎಲ್ಲರ ಕಣ್ಣು ಆ 'ಲೆಜೆಂಡರಿ' ಗಾಯಕ ಯಾರು? ಮತ್ತು ಆ ಮಾಸ್ ಹಾಡು ಯಾವಾಗ ರಿಲೀಸ್ ಆಗಲಿದೆ ಎಂಬುದರ ಮೇಲಿದೆ.