ಇನ್‌ಸ್ಟಾಗ್ರಾಮ್‌ನಲ್ಲಿ ಗುಟ್ಟು ರಟ್ಟು ಮಾಡಿದ ಬಾದ್‌ಶಾ ಪತ್ನಿ - ಸ್ಟಾರ್ ರ‍್ಯಾಪರ್ ಬಾದ್‌ಶಾ ಜೊತೆಗಿನ ಸೀಕ್ರೆಟ್ ಲೈಫ್ ಓಪನ್!!

ಬಾಲಿವುಡ್ ಮತ್ತು ಪಂಜಾಬಿ ಮ್ಯೂಸಿಕ್ ಇಂಡಸ್ಟ್ರಿಯ ಸ್ಟಾರ್ ರ‍್ಯಾಪರ್ ಬಾದ್‌ಶಾ (Badshah) ಮದುವೆ ಆಗಿದ್ದಾರಾ ಇಲ್ವಾ ಅನ್ನೋ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ! ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಪಂಜಾಬಿ ನಟಿ ಇಶಾ ರಿಖಿ (Isha Rikhi) ತಾನು ಬಾದ್‌ಶಾ ಅವರನ್ನೇ ಮದುವೆಯಾಗಿರೋದನ್ನು ಅಫೀಶಿಯಲ್ ಆಗಿ ಕನ್ಫರ್ಮ್ ಮಾಡಿದ್ದಾರೆ.

ಮಾರ್ಚ್‌ನಲ್ಲೇ ನಡೆದಿತ್ತು ಸೀಕ್ರೆಟ್ ಮ್ಯಾರೇಜ್ | Photo Credit: https://www.instagram.com/isharikhi/
ಮಾರ್ಚ್‌ನಲ್ಲೇ ನಡೆದಿತ್ತು ಸೀಕ್ರೆಟ್ ಮ್ಯಾರೇಜ್ | Photo Credit: https://www.instagram.com/isharikhi/

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಜೊತೆ 'ಆಸ್ಕ್ ಮಿ ಎನಿಥಿಂಗ್' (Ask Me Anything) ಸೆಷನ್ ನಡೆಸುತ್ತಿದ್ದ ಇಶಾ, ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಸೂಪರ್ ಆಗಿ ಉತ್ತರಿಸುವ ಮೂಲಕ ಇಡೀ ಇಂಟರ್ನೆಟ್‌ಗೆ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ಏನಿದು ಮ್ಯಾಟರ್? ಇವರ ಮದುವೆ ಯಾವಾಗ ಆಗಿತ್ತು? ಇಲ್ನೋಡಿ ಕಂಪ್ಲೀಟ್ ಡಿಟೇಲ್ಸ್.

ಇನ್‌ಸ್ಟಾಗ್ರಾಮ್‌ನಲ್ಲಿ ಗುಟ್ಟು ರಟ್ಟು ಮಾಡಿದ ಇಶಾ

ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಫಾಲೋವರ್ ಒಬ್ಬರು ಇಶಾಗೆ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ದರು, "ನೀವು ಮತ್ತು ಬಾದ್‌ಶಾ ಮದುವೆ ಆಗಿದ್ದೀರಾ?" ಅಂತ. ಅದಕ್ಕೆ ಇಶಾ ರಿಖಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಹೌದು, ನಾನು ಮದುವೆಯಾಗಿದ್ದೇನೆ" ಅಂತ ಸಿಂಪಲ್ ಆಗಿ ಬರೆದು, ಇಷ್ಟು ದಿನ ಸೀಕ್ರೆಟ್ ಆಗಿ ಇಟ್ಟಿದ್ದ ಮ್ಯಾಟರ್ ಅನ್ನು ಓಪನ್ ಆಗಿ ಒಪ್ಪಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಮದುವೆ ಮ್ಯಾಟರ್ ಕನ್ಫರ್ಮ್ ಮಾಡಿದ್ದಲ್ಲದೆ, ಬಾದ್‌ಶಾ ಜೊತೆಗಿನ ತಮ್ಮ ಮೊದಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಜೋಡಿ ಮೊದಲಿನಿಂದಲೂ ತಮ್ಮ ಪರ್ಸನಲ್ ಲೈಫ್ ಅನ್ನು ಸಖತ್ ಲೋ-ಪ್ರೊಫೈಲ್ ಆಗಿ ಇಟ್ಟಿದ್ದರಿಂದ, ಇವರಿಬ್ಬರ ಫೋಟೋ ನೋಡಿದ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಇದೇ ವೇಳೆ ಅಭಿಮಾನಿಯೊಬ್ಬರು, "ನೀವಿಬ್ಬರು ಗಂಡ-ಹೆಂಡತಿ ಆದ್ರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಯಾಕೆ ಫಾಲೋ ಮಾಡ್ತಿಲ್ಲ?" ಅಂತ ಕಾಲೆಳೆದಿದ್ದಾರೆ. ಅದಕ್ಕೆ ಇಶಾ ಸಖತ್ ಫನ್ನಿ ಯಾಗಿ ಬಾದ್‌ಶಾ ಅವರನ್ನೇ ಟ್ಯಾಗ್ ಮಾಡಿ, "ಇದಕ್ಕೆ ನೀವೇ ಬಂದು ಉತ್ತರ ಕೊಡಿ" ಅಂತ ಕಾಮೆಂಟ್ ಸೆಕ್ಷನ್‌ನಲ್ಲಿ ಬರೆದಿದ್ದಾರೆ. ಇದನ್ನು ನೋಡಿ ಫಾಲೋವರ್ಸ್ ಸಖತ್ ನಗಾಡುತ್ತಿದ್ದಾರೆ.

ಮಾರ್ಚ್‌ನಲ್ಲೇ ನಡೆದಿತ್ತು ಸೀಕ್ರೆಟ್ ಮ್ಯಾರೇಜ್

ನಿಮಗೆ ನೆನಪಿರಬಹುದು, ಈ ವರ್ಷದ ಮಾರ್ಚ್ ತಿಂಗಳಲ್ಲೇ ಇವರಿಬ್ಬರ ಮದುವೆಯ ಗಾಳಿಸುದ್ದಿ ಜೋರಾಗಿ ಹಬ್ಬಿತ್ತು. ಅದಕ್ಕೆ ಕಾರಣ ಇಶಾ ಅವರ ತಾಯಿ ಪೂನಂ ರಿಖಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್. ವರದಿಗಳ ಪ್ರಕಾರ, ಕಳೆದ ಮಾರ್ಚ್ 24 ರಂದೇ ಇವರಿಬ್ಬರ ಮದುವೆ ತೀರಾ ಖಾಸಗಿಯಾಗಿ, ಕೇವಲ ಹತ್ತಿರದ ಫ್ಯಾಮಿಲಿ ಮೆಂಬರ್ಸ್ ಮತ್ತು ಆಪ್ತ ಗೆಳೆಯರ ಸಮ್ಮುಖದಲ್ಲಿ ನಡೆದಿತ್ತು. ಮೀಡಿಯಾ ಕಣ್ಣಿಗೆ ಬೀಳಬಾರದು ಅಂತಲೇ ಇಬ್ಬರೂ ಸೈಲೆಂಟ್ ಆಗಿ ಮದುವೆ ಮುಗಿಸಿಕೊಂಡಿದ್ದರು.

ಯಾರು ಈ ಇಶಾ ರಿಖಿ?

ಚಂಡೀಗಢದಲ್ಲಿ ಹುಟ್ಟಿ ಬೆಳೆದ 33 ವರ್ಷದ ಇಶಾ ರಿಖಿ, ಪಂಜಾಬಿ ಸಿನೆಮಾ ಇಂಡಸ್ಟ್ರಿಯ ಫೇಮಸ್ ನಟಿ. 'ಜಾಟ್ ಬಾಯ್ಸ್ ಪುತ್ ಜಾಟನ್ ದೆ' ಮತ್ತು 'ಹ್ಯಾಪಿ ಗೋ ಲಕ್ಕಿ'ಯಂತಹ ಹಿಟ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇನ್ನು ಬಾಲಿವುಡ್‌ನಲ್ಲೂ ರೆಮೋ ಡಿಸೋಜಾ ಪ್ರೊಡಕ್ಷನ್‌ನ 'ನವಾಬ್‌ಜಾದೆ' (2018) ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಟಿವಿ ಸೆಲೆಬ್ರಿಟಿಗಳಾದ ಜಾಸ್ಮಿನ್ ಬಾಸಿನ್ ಮತ್ತು ಅಲಿ ಗೋನಿ ಇವರ ಬೆಸ್ಟ್ ಫ್ರೆಂಡ್ಸ್. ಬಾದ್‌ಶಾ ಮತ್ತು ಇಶಾ ಮೊದಲು ಭೇಟಿಯಾಗಿದ್ದು ಒಬ್ಬರ ಮ್ಯೂಚುವಲ್ ಫ್ರೆಂಡ್ ಪಾರ್ಟಿಯಲ್ಲಿ. ಮ್ಯೂಸಿಕ್, ಮೂವೀಸ್ ಅಂತ ಇಬ್ಬರ ಟೇಸ್ಟ್ ಮ್ಯಾಚ್ ಆಗಿ, ಇಬ್ಬರೂ ಲವ್‌ನಲ್ಲಿ ಬಿದ್ದಿದ್ದರು.

ಬಾದ್‌ಶಾ ಅವರ ಮೊದಲ ಮದುವೆ ಏನಾಗಿತ್ತು?

ಇಶಾ ರಿಖಿಗಿಂತ ಮುಂಚೆ ಬಾದ್‌ಶಾ ಅವರು ಜಾಸ್ಮಿನ್ ಅನ್ನೋವರನ್ನು 2012 ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ 2017 ರಲ್ಲಿ ಜೆಸ್ಸಾಮಿ ಗ್ರೇಸ್ ಮಾನ್ಸಿಂಗ್ ಅನ್ನೋ ಮುದ್ದಾದ ಮಗಳು ಹುಟ್ಟಿದ್ದಳು. ಆದ್ರೆ ಭಿನ್ನಾಭಿಪ್ರಾಯಗಳಿಂದಾಗಿ 2019 ರಲ್ಲಿ ಇಬ್ಬರೂ ಡಿವೋರ್ಸ್ ಪಡೆದು ಸಪರೇಟ್ ಆದರು. ಸದ್ಯ ಜಾಸ್ಮಿನ್ ಮಗಳ ಜೊತೆ ಲಂಡನ್‌ನಲ್ಲಿ ಸೆಟಲ್ ಆಗಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ್ದ ಬಾದ್‌ಶಾ, "ನನ್ನ ಮೊದಲ ಮದುವೆಯನ್ನು ಉಳಿಸಿಕೊಳ್ಳಲು ನಾನು ಮತ್ತು ಜಾಸ್ಮಿನ್ ತುಂಬಾ ಟ್ರೈ ಮಾಡಿದ್ವಿ. ಆದ್ರೆ ಮಗಳ ಭವಿಷ್ಯದ ದೃಷ್ಟಿಯಿಂದ ನಾವು ದೂರಾಗುವುದೇ ಒಳ್ಳೇದು ಅಂತ ಅನಿಸ್ತು" ಅಂತ ಬೇಸರ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, ದೂರ ಇರುವುದರಿಂದ ಮಗಳನ್ನು ಅಷ್ಟಾಗಿ ಭೇಟಿಯಾಗಲು ಆಗುತ್ತಿಲ್ಲ ಎಂದಿದ್ದ ಬಾದ್‌ಶಾ, "ನನ್ನ ಮಗಳಿಗೆ ನನ್ನ ಮ್ಯೂಸಿಕ್ ಇಷ್ಟ, ಆದ್ರೆ ಅವಳಿಗೆ ಕೊರಿಯನ್ ಬ್ಯಾಂಡ್ 'ಬ್ಲ್ಯಾಕ್‌ಪಿಂಕ್' (Blackpink) ಅಂದ್ರೆನೇ ಪ್ರಾಣ" ಅಂತ ನಕ್ಕಿದ್ದರು.

Latest News