ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಎತ್ತಿ ಹಿಡಿದ ಮೇಲೆ ನಮ್ಮ 'ಗಿಲ್ಲಿ' ಖ್ಯಾತಿಯ ನಟನ ಹವಾ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಕ್ರೇಜ್ ಸಂಪಾದಿಸಿರೋ ಗಿಲ್ಲಿಗೆ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆದರೆ ಈಗ ಗಿಲ್ಲಿ ಸುದ್ದಿಯಲ್ಲಿರೋದು ತಮ್ಮ ಫಾಲೋವರ್ಸ್ ಸಂಖ್ಯೆಯಿಂದಲ್ಲ, ಬದಲಾಗಿ ತಮ್ಮ 'ಹೊಸ ಲುಕ್' ಮತ್ತು 'ವರ್ಕೌಟ್' ಇಂದ.
ಶಾರ್ಟ್ಸ್-ಬನಿಯನ್ ಕಾಲ ಮುಗೀತು!
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಗಿಲ್ಲಿ ಹೇಗಿದ್ರು ಅಂತ ನಮಗೆಲ್ಲ ಗೊತ್ತು. ತಲೆ ಬಾಚುತ್ತಿರಲಿಲ್ಲ, ಒಂದು ಶಾರ್ಟ್ಸ್ ಮತ್ತು ಬನಿಯನ್ ಹಾಕಿಕೊಂಡು ಇಡೀ ಮನೆ ತುಂಬಾ ಓಡಾಡುತ್ತಿದ್ದರು. "ನಾನು ಹೊರಗಡೆ ಹೇಗಿದ್ದೀನೋ, ಒಳಗೂ ಹಾಗೇ ಇರ್ತೀನಿ" ಅಂತಿದ್ದ ಗಿಲ್ಲಿಗೆ ಫ್ಯಾಷನ್ ಅಂದ್ರೆ ಅಲರ್ಜಿ ಇತ್ತು. ಬಿಗ್ ಬಾಸ್ ಮನೆಯಲ್ಲಿ ಜಿಮ್ ಇದ್ದರೂ ಕೂಡ ಇವರು ಮಾತ್ರ ಆ ಕಡೆ ತಲೆ ಹಾಕಿ ಮಲಗುತ್ತಿರಲಿಲ್ಲ. ಸಹ ಸ್ಪರ್ಧಿ ರಘು ಅವರು "ವರ್ಕೌಟ್ ಮಾಡೋ ಗಿಲ್ಲಿ, ಫಿಟ್ ಆಗ್ತೀಯಾ" ಅಂತ ಎಷ್ಟು ಹೇಳಿದ್ರೂ ಗಿಲ್ಲಿ ಮಾತ್ರ ಕ್ಯಾರೆ ಅಂದಿರಲಿಲ್ಲ.
ಜಿಮ್‌ನಲ್ಲಿ ಗಿಲ್ಲಿ ಅಬ್ಬರ!
ಆದರೆ ಈಗ ಕಾಲ ಬದಲಾಗಿದೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಗಿಲ್ಲಿ ಸಖತ್ ಸೀರಿಯಸ್ ಆಗಿದ್ದಾರೆ. ಈಗ ಫಿಟ್‌ನೆಸ್ ಟ್ರೇನರ್ ಕೌಶಿಕ್ ಗೌಡ ಅವರ ಜೊತೆ ಸೇರಿಕೊಂಡು ಗಿಲ್ಲಿ ಭರ್ಜರಿಯಾಗಿ ವರ್ಕೌಟ್ ಶುರು ಮಾಡಿದ್ದಾರೆ. ಜಿಮ್‌ನಲ್ಲಿ ಗಿಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನು ಕಂಡ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ "ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ!" ಅಂತ ಕಮೆಂಟ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಗಿಲ್ಲಿ ಹೀರೋ ಆಗ್ತಿದ್ದಾರಾ?
ಗಿಲ್ಲಿ ಜಿಮ್ ಸೇರಿದ್ದನ್ನ ನೋಡಿ ಎಲ್ಲರೂ ಕೇಳ್ತಿರೋ ಪ್ರಶ್ನೆ ಒಂದೇ- "ಗಿಲ್ಲಿ ಮುಂದಿನ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ತಿದ್ದಾರಾ?". ಈ ಫಿಟ್‌ನೆಸ್ ಟ್ರಾನ್ಸ್‌ಫರ್ಮೇಷನ್ ನೋಡಿದ್ರೆ ಹಾಗೇ ಅನಿಸುತ್ತೆ. ಆದರೆ ಗಿಲ್ಲಿಗೆ ನಟನೆಗಿಂತ ಹೆಚ್ಚಾಗಿ ನಿರ್ದೇಶನ (Direction) ಮಾಡೋದು ಅಂದ್ರೆ ತುಂಬಾ ಇಷ್ಟ. ಹೀಗಿದ್ದರೂ ಕೂಡ, ಒಬ್ಬ ಹೀರೋಗೆ ಇರಬೇಕಾದ ಫಿಟ್‌ನೆಸ್ ಪಡೆಯಲು ಗಿಲ್ಲಿ ಈಗ ತಯಾರಿ ನಡೆಸುತ್ತಿದ್ದಾರೆ.
ಫ್ಯಾನ್ಸ್ ಖುಷಿಗೆ ಪಾರವೇ ಇಲ್ಲ!
ತಮ್ಮ ನೆಚ್ಚಿನ ಸ್ಪರ್ಧಿ ಇಷ್ಟು ಸೀರಿಯಸ್ ಆಗಿ ಫಿಟ್‌ನೆಸ್ ಕಡೆ ಗಮನ ಕೊಡುತ್ತಿರುವುದು ನೋಡಿ ಫಾಲೋವರ್ಸ್ ಫುಲ್ ಖುಷಿಯಾಗಿದ್ದಾರೆ. ಬಿಗ್ ಬಾಸ್ ವಿನ್ನರ್ ಆದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಅನ್ನೋದು ಗಿಲ್ಲಿಗೂ ಅರ್ಥವಾದಂತಿದೆ. ಸ್ಟೈಲ್ ಮತ್ತು ಫಿಟ್‌ನೆಸ್ ಸೇರಿದರೆ ಗಿಲ್ಲಿಯನ್ನ ಸ್ಕ್ರೀನ್ ಮೇಲೆ ನೋಡೋ ಮಜಾನೇ ಬೇರೆ ಅಂತಿದ್ದಾರೆ ಅಭಿಮಾನಿಗಳು.
ಗಿಲ್ಲಿ ಈಗ ಹೊಸ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಈ ವರ್ಕೌಟ್ ಯಾವುದೋ ದೊಡ್ಡ ಸಿನಿಮಾದ ತಯಾರಿ ಇರಬಹುದಾ? ಅಥವಾ ಅವರು ನಿರ್ದೇಶಿಸಲಿರುವ ಸಿನಿಮಾದಲ್ಲೇ ಇವರೇ ಹೀರೋ ಆಗಿರ್ತಾರಾ? ಈ ಎಲ್ಲಾ ಸಸ್ಪೆನ್ಸ್ ಸದ್ಯದಲ್ಲೇ ರಿವೀಲ್ ಆಗಲಿದೆ.