ಚಂದ್ರಮುಖಿ ಪ್ರಾಣಸಖಿ ಸಿನಿಮಾದ ಖ್ಯಾತ ನಟಿ ಭಾವನಾ ರಾಮಣ್ಣಅವರಿಗೆ ಮಗುವಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ತನ್ನ ಮುದ್ದಾದ ಮಗಳ ನಾಮಕರಣವನ್ನು ಮಾಡಿದ್ದಾರೆ.ಈ ಸುಂದರ ಸಮಾರಂಭದ ಬಗ್ಗೆ ಮತ್ತು ಮಗಳಿಗೆ ಇಟ್ಟಿರುವ ವಿಶೇಷ ಹೆಸರಿನ ಹಿಂದಿನ ಅರ್ಥದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೀಕೃಷ್ಣನ ಪತ್ನಿಯ ಹೆಸರಲ್ಲೇ ಮಗಳ ನಾಮಕರಣ

ನಟಿ ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ರುಕ್ಮಿಣಿ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಕೇಳಿದ ತಕ್ಷಣ ನಮಗೆಲ್ಲರಿಗೂ ದ್ವಾಪರ ಯುಗದ ಶ್ರೀಕೃಷ್ಣ ಮತ್ತು ಆತನ ಪತ್ನಿ ರುಕ್ಮಿಣಿ ನೆನಪಾಗುತ್ತಾರೆ. ಸಾಮಾನ್ಯವಾಗಿ ಕೃಷ್ಣನ ಹೆಸರಿನೊಂದಿಗೆ ರಾಧೆಯ ಹೆಸರು ಕೇಳಿಬರುತ್ತದೆ, ಆದರೆ ಭಾವನಾ ಅವರು ಕೃಷ್ಣನ ಧರ್ಮಪತ್ನಿಯ ಹೆಸರನ್ನೇ ಆರಿಸಿಕೊಂಡಿದ್ದಾರೆ. ಈ ಹೆಸರಿನ ಆಯ್ಕೆಯ ಹಿಂದೆ ಕೇವಲ ಪೌರಾಣಿಕ ಹಿನ್ನೆಲೆ ಮಾತ್ರವಲ್ಲದೆ, ಗಾಢವಾದ ಕೌಟುಂಬಿಕ ಪ್ರೀತಿಯೂ ಅಡಗಿದೆ. ಭಾವನಾ ಅವರ ಅಜ್ಜಿಯ ಹೆಸರು ಕೂಡ 'ರುಕ್ಮಿಣಿ' ಎಂದೇ ಇತ್ತು. ತಮ್ಮ ಅಜ್ಜಿಯ ಮೇಲಿನ ಅತೀವ ಗೌರವ ಮತ್ತು ಪ್ರೀತಿಯ ಸಂಕೇತವಾಗಿ, ಅದೇ ಹೆಸರನ್ನು ಈಗ ತಮ್ಮ ಮಗಳಿಗೂ ಇಟ್ಟು ಸಂಭ್ರಮಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲೇ ನಡೆದ ಶಾಸ್ತ್ರ
ಈ ನಾಮಕರಣದ ಶಾಸ್ತ್ರವು ಇಂದು ನಿನ್ನೆ ನಡೆದದ್ದಲ್ಲ, ಸುಮಾರು ಒಂದು ತಿಂಗಳ ಹಿಂದೆಯೇ ಅಂದರೆ ಫೆಬ್ರವರಿ ತಿಂಗಳಲ್ಲೇ ಅತ್ಯಂತ ಸಡಗರದಿಂದ ನೆರವೇರಿದೆ. ಕುಟುಂಬದ ಆಪ್ತರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಮಗಳಿಗೆ ಹೆಸರಿಡುವ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಸದ್ದಿಲ್ಲದೇ ಮಾಡಿದ್ದಾರೆ. ಭಾವನಾ ಅವರು ಈ ವಿಷಯವನ್ನು ಗುಟ್ಟಾಗಿಟ್ಟಿದ್ದರೂ, ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಅಮ್ಮ-ಮಗಳ ನೀಲಿ ಬಣ್ಣದ ಕಾಂಬಿನೇಷನ್

ಈ ಸಂಭ್ರಮದ ಮತ್ತೊಂದು ವಿಶೇಷವೆಂದರೆ ಅಮ್ಮ ಮತ್ತು ಮಗಳ ಉಡುಪು. ನಾಮಕರಣದ ದಿನ ಭಾವನಾ ರಾಮಣ್ಣ ಮತ್ತು ಪುಟ್ಟ ರುಕ್ಮಿಣಿ ಇಬ್ಬರೂ ನೀಲಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮಗಳಿಗೆ ಸುಂದರವಾದ ನೀಲಿ ಬಣ್ಣದ ಫ್ರಾಕ್ ಧರಿಸಿದ್ದರೆ, ಭಾವನಾ ಅವರು ಅದೇ ಬಣ್ಣದ ಸೀರೆಯನ್ನು ಉಟ್ಟು ಕಂಗೊಳಿಸುತ್ತಿದ್ದರು.

ಕ್ಯಾಮೆರಾ ಕಣ್ಣಿನಲ್ಲಿ ಸುಂದರ ಕ್ಷಣಗಳು

ಇವಾಗೆಲ್ಲ ಯಾವ್ದೇ ಕಾರ್ಯಕ್ರಮವಾಗ್ಲಿ ಫೋಟೋ ಶೂಟ್ ಮಾಡಿಸೋದು ಒಂದು ಟ್ರೆಂಡ್ ಆಗಿದೆ. ಹಾಗೆಯೇ ಈ ವಿಶೇಷ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಲು ಭಾವನಾ ಅವರು ಒಂದು ಪುಟ್ಟ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕೆಲವು ಫೋಟೋಗಳು ಮಗಳೊಂದಿಗೆ ಇದ್ದರೆ, ಮತ್ತೆ ಕೆಲವು ಭಾವನಾ ಅವರ ವೈಯಕ್ತಿಕ ಫೋಟೋಗಳಾಗಿವೆ. ಮಗಳ ಪ್ರತಿ ಚಲನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅಮ್ಮ-ಮಗಳ ಈ ಬಾಂಧವ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿಯಾಗಲು ನಿರ್ಧರಿಸಿದ್ದು, ಆರಂಭದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಅದರಲ್ಲಿ ಒಂದು ಮಗುವನ್ನು ಕಳೆದುಕೊಂಡ ನೋವು ಅವರಿಗಿತ್ತು. ಇದೀಗ ಉಳಿದಿರುವ ಈ ಒಬ್ಬಳೇ ಮಗಳನ್ನು ಅವರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ. ಸಮಾಜದ ಕಟ್ಟುಪಾಡುಗಳಿಗಿಂತ ತಮ್ಮ ಮಗುವಿನ ಭವಿಷ್ಯವೇ ಮುಖ್ಯ ಎಂದು ಸಾರುತ್ತಿರುವ ಭಾವನಾ ಅವರ ಈ ಪಯಣ ನಿಜಕ್ಕೂ ಸ್ಫೂರ್ತಿದಾಯಕ.