ಕಾಲಿವುಡ್‌ನ ಎವರ್‌ಗ್ರೀನ್ ಕ್ವೀನ್ ತ್ರಿಷಾ ಕೃಷ್ಣನ್ (Trisha Krishnan) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಈಗ ಇದೇ ಸಾಲಿಗೆ ಮಲಯಾಳಂನ ಖ್ಯಾತ ನಟ, ಸೂಪರ್ ಹಿಟ್ 'ಮಿನ್ನಲ್ ಮುರಳಿ' ಸಿನಿಮಾದ ಡೈರೆಕ್ಟರ್ ಬಾಸಿಲ್ ಜೋಸೆಫ್ (Basil Joseph) ಕೂಡ ಸೇರಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಹೊಸ ಚಿತ್ರ 'ಅತಿರಡಿ' ಪ್ರಮೋಷನ್ ಸಂದಿಗ್ಧದಲ್ಲಿ ತಮಿಳು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಬಾಸಿಲ್, ತ್ರಿಷಾ ಮೇಲಿದ್ದ ತಮ್ಮ ಕ್ರಶ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ಅವರು ಕಾಶುವಲ್ ಆಗಿ ಹೇಳಿದ ಈ ಒಂದು ಮಾತು ಈಗ ಸೌತ್ ಸಿನಿಮಾ ಇಂಡಸ್ಟ್ರಿ ಹಾಗೂ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ! ಅಷ್ಟಕ್ಕೂ ಬಾಸಿಲ್ ಜೋಸೆಫ್ ಹೇಳಿದ್ದೇನು? ಇದಕ್ಕೆ ದಳಪತಿ ವಿಜಯ್ ಹೆಸರು ನಡು ಮಧ್ಯೆ ಬಂದಿದ್ದಾದರೂ ಹೇಗೆ? ಪೂರ್ತಿ ಮ್ಯಾಟರ್ ಇಲ್ಲಿದೆ ನೋಡಿ.
"ಆಗ ಕ್ರಶ್ ಇತ್ತು, ಆದ್ರೆ ಇವಾಗ್ಲಲ್ಲಪ್ಪಾ!" – ಉಲ್ಟಾ ಹೊಡೆದ ಬಾಸಿಲ್
ಇಂಟರ್ವ್ಯೂನಲ್ಲಿ ನಿರೂಪಕ "ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?" ಅಂತ ಕೇಳಿದ್ದೇ ತಡ, ಬಾಸಿಲ್ ಜೋಸೆಫ್ ಮುಖದಲ್ಲಿ ಎಂದಿನಂತೆ ನಗು ಮೂಡಿದೆ. ಸ್ವಲ್ಪ ತಮಾಷೆಯಾಗಿ ಮ್ಯಾನೇಜ್ ಮಾಡಲು ಯತ್ನಿಸಿದ ಬಾಸಿಲ್, "ಇದನ್ನ ಈಗ ಇಲ್ಲಿ ಹೇಳಬಹುದಾ ಇಲ್ವಾ ಗೊತ್ತಿಲ್ಲ, ಹೇಳಿದ್ರೆ ಏನಾದ್ರೂ ಕಾಂಟ್ರವರ್ಸಿ ಆಗುತ್ತಾ?" ಅಂತ ಸಸ್ಪೆನ್ಸ್ ಕ್ರಿಯೇಟ್ ಮಾಡಿದರು.
ಆಮೇಲೆ, "ನನಗೆ ಒಂದು ಕಾಲದಲ್ಲಿ ನಟಿ ತ್ರಿಷಾ ಅಂದ್ರೆ ಸಖತ್ ಕ್ರಶ್ ಇತ್ತು" ಅಂತ ಸೀಕ್ರೆಟ್ ಬಿಚ್ಚಿಟ್ಟರು. ಆದರೆ ಮ್ಯಾಟರ್ ಎಲ್ಲಿ ಕೈ ಮೀರಿ ಹೋಗುತ್ತೋ ಅಂತ ಅಲರ್ಟ್ ಆದ ಬಾಸಿಲ್, ತಕ್ಷಣವೇ "ಬಾಸ್, ಅದು ಹಳೇ ಕಥೆ.. ಈಗ ಆ ತರ ಯಾವುದೇ ಕ್ರಶ್ ಇಲ್ಲ" ಎಂದು ಹೇಳಿ ಅಲ್ಲೇ ಮ್ಯಾಟರ್ ಕ್ಲೋಸ್ ಮಾಡಲು ನೋಡಿದರು. ಬಾಸಿಲ್ ಅವರ ಈ ಸಡನ್ ಕನ್ಫೆಷನ್ ಮತ್ತು ಯು-ಟರ್ನ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಬಾಸಿಲ್ ಈ ಮಾತನ್ನು ಬಹಳ ನಾರ್ಮಲ್ ಆಗಿ ಹೇಳಿದ್ದರೂ, ಇದು ವೈರಲ್ ಆದ ಟೈಮಿಂಗ್ ಮಾತ್ರ ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ಪ್ರಸ್ತುತ ತಮಿಳುನಾಡು ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ಜೋಸೆಫ್ ವಿಜಯ್ (Thalapathy Vijay) ಅವರ ಜೊತೆ ತ್ರಿಷಾ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ತಳುಕು ಹಾಕಿಕೊಳ್ಳುತ್ತಿದೆ.
ವಿಜಯ್ ಹಾಗೂ ತ್ರಿಷಾ ಆಪ್ತ ವಲಯದವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ಕೆಲವು ಪೋಸ್ಟ್‌ಗಳು ಈ ಗಾಸಿಪ್‌ಗಳಿಗೆ ಇನ್ನುಷ್ಟು ರೆಕ್ಕೆಪುಕ್ಕ ಬರುವಂತೆ ಮಾಡಿವೆ. ಇಂಥದ್ದೇ ಟೈಮ್‌ನಲ್ಲಿ ಬಾಸಿಲ್ ಜೋಸೆಫ್ "ತ್ರಿಷಾ ನನ್ನ ಕ್ರಶ್" ಅಂದಿದ್ದ ತಡ, ನೆಟ್ಟಿಗರು ಕನೆಕ್ಷನ್ ಲಿಂಕ್ ಹುಡುಕಿ ದಳಪತಿ ವಿಜಯ್ ಹೆಸರನ್ನು ಮಧ್ಯೆ ಎಳೆದು ತಂದು ತರಹೇವಾರಿ ಮೀಮ್ಸ್ ಹಾಗೂ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ.
ತ್ರಿಷಾ ಕಾಲೆಳೆದಿದ್ದ ಮಲಯಾಳಂನ ಮತ್ತೊಬ್ಬ ನಟ ಧ್ಯಾನ್ ಶ್ರೀನಿವಾಸನ್!
ವಿಶೇಷ ಅಂದ್ರೆ, ತ್ರಿಷಾ ಮತ್ತು ವಿಜಯ್ ಹೆಸರನ್ನು ಎಳೆದು ತಂದು ಕಾಮೆಂಟ್ ಮಾಡುತ್ತಿರುವುದು ಬಾಸಿಲ್ ಒಬ್ಬರೇ ಅಲ್ಲ. ಇತ್ತೀಚೆಗೆ ಮಲಯಾಳಂನ ಮತ್ತೊಬ್ಬ ಸ್ಟಾರ್ ನಟ ಧ್ಯಾನ್ ಶ್ರೀನಿವಾಸನ್ ಕೂಡ ಇದೇ ಮ್ಯಾಟರ್ ಇಟ್ಟುಕೊಂಡು ತ್ರಿಷಾ ಅವರ ಕಾಲೆಳೆದಿದ್ದರು.
ಖಾಸಗಿ ಯುಜಿಸಿ ಗೋಲ್ಡ್ ಲೋನ್ (UGC Gold Loan) ಇವೆಂಟ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ತ್ರಿಷಾ ಗೈರಾಗಿದ್ದರು. ಆಗ ವೇದಿಕೆ ಮೇಲಿದ್ದ ಧ್ಯಾನ್ ಶ್ರೀನಿವಾಸನ್ ಮೈಕ್ ಹಿಡಿದು, "ಇವತ್ತು ವಿಜಯ್ ಅವರ ಎಲೆಕ್ಷನ್ ರಿಸಲ್ಟ್ ಬರೋ ದಿನ ಅಲ್ವಾ? ಹಾಗಾಗಿ ತ್ರಿಷಾ ಅವರಿಗೆ ಇಲ್ಲಿಗೆ ಬರಲು ಟೈಮ್ ಸಿಕ್ಕಿಲ್ಲ ಅನ್ಸುತ್ತೆ" ಎಂದು ಪಂಚ್ ಹಾಕಿದ್ದರು. ಧ್ಯಾನ್ ಅವರ ಈ ಕಾಮಿಡಿ ಪಂಚ್ ಕೂಡ ತಮಿಳುನಾಡು ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.
ಒಟ್ಟಾರೆಯಾಗಿ, ತ್ರಿಷಾ ಅವರ ವೈಯಕ್ತಿಕ ಜೀವನದ ಅಪ್‌ಡೇಟ್ಸ್ ಹಾಗೂ ಸಿಎಂ ವಿಜಯ್ ಅವರ ಮೂವ್ಸ್‌ಗಳ ಬಗ್ಗೆ ಮಲಯಾಳಂ ನಟರು ಬ್ಯಾಕ್-ಟು-ಬ್ಯಾಕ್ ಈ ರೀತಿ ಇಂಟರೆಸ್ಟಿಂಗ್ ಕಾಮೆಂಟ್‌ಗಳನ್ನು ಮಾಡುತ್ತಿರುವುದು ಸದ್ಯ ಕಾಲಿವುಡ್ ಅಂಗಳದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.