ನೆಗೆಟಿವ್ ಪಾತ್ರದಲ್ಲಿ ಮಿಂಚಲಿರುವ ಕಾರ್ತಿಕ್ ಮಹೇಶ್ - ಕುತೂಹಲ ಹೆಚ್ಚಿಸಿದ 'ಅಲ್ಫಾ' ಟ್ರೈಲರ್!!

ಇದೇ ಫೆಬ್ರವರಿ 20ಕ್ಕೆ ಬಿಡುಗಡೆಯಾಗಲಿರುವ 'ಆಲ್ಪಾ' ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದ ಮೂಲಕ ಹೇಮಂತ್ ಕುಮಾರ್ ಅವರು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್ ಎಲ್ಲರ ಗಮನ ಸೆಳೆದಿದ್ದು, ಕಾರ್ತಿಕ್ ಮಹೇಶ್ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಡ್ರಗ್ಸ್ ಹಾಗೂ ಪ್ರೇಮಕಥೆಯನ್ನು ಒಳಗೊಂಡಿದೆ. ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಎಂಟ್ರಿ ಆಗುತ್ತಲೇ ಇರುತ್ತಾರೆ. ಟ್ರೇಲರ್‌ನಲ್ಲಿ ಹೇಮಂತ್ ಅವರ ಫೈಟ್ ಮತ್ತು ಡ್ಯಾನ್ಸ್‌ನಲ್ಲಿ ಹಾಕಿರುವ ಶ್ರಮ ಸ್ಪಷ್ಟವಾಗಿ ಕಾಣುತ್ತದೆ. 

‘ಆಲ್ಪಾ’ ಟ್ರೇಲರ್ ರಿಲೀಸ್
‘ಆಲ್ಪಾ’ ಟ್ರೇಲರ್ ರಿಲೀಸ್

ಹೇಮಂತ್ ಅವರು ಆಲ್ಪಾ ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅವರು ಫೈಟ್ ಮತ್ತು ಡ್ಯಾನ್ಸ್ ಅನ್ನು ಶ್ರದ್ಧೆಯಿಂದ ಕಲಿತಿರುವುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಟ್ರೇಲರ್ ನೋಡಿದರೆ ಡ್ರಗ್ಸ್ ಹಾಗೂ ಇತರ ಸಾಮಾಜಿಕ ವಿಷಯಗಳ ಬಗ್ಗೆ ನಿರ್ದೇಶಕರು ಸಂದೇಶ ನೀಡಲು ಹೊರಟಂತೆ ತೋರುತ್ತದೆ. ಈ ಚಿತ್ರದಲ್ಲಿ ಒಂದು ಸುಂದರ ಪ್ರೇಮಕಥೆಯೂ ಇದೆ ಎಂಬುದು ಟ್ರೇಲರ್‌ನಲ್ಲಿ ಸ್ಪಷ್ಟವಾಗುತ್ತದೆ. 'ಆಲ್ಪಾ' ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ಅವರು ನಟಿಸಿರುವುದು ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಅವರ ಪಾತ್ರ ನೆಗೆಟಿವ್ ಎಂಬುದು ಸ್ಪಷ್ಟವಾಗಿದ್ದು, ಅವರ ಅವತಾರದ ಫೋಟೋ ಕೂಡ ರಿವೀಲ್ ಆಗಿದೆ. 

ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದಲೇ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೇಮಂತ್ ಕುಮಾರ್ ಅವರ ತಂದೆ ಆನಂದ್ ಕುಮಾರ್ ಅವರು ಮಗನಿಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ವಿಜಯ್ ಎನ್ ಅವರು ನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೇಮಂತ್ ಕುಮಾರ್ ಅವರ ಜೊತೆಗೆ ಅಯಾನಾ, ಗೋಪಿಕಾ ಸುರೇಶ್, ಅಚ್ಯುತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್, ರಮೇಶ್ ಇಂದಿರಾ, ಗಿರಿರಾಜ್, ರಾಘು ಶಿವಮೊಗ್ಗ ಹಾಗೂ ವಿನಯ್ ಬಿದ್ದಪ್ಪ ಅವರು ನಟಿಸಿದ್ದಾರೆ. ಸಿನಿಮಾದ ಸಂಗೀತ ಸಂಯೋಜನೆ ಅನೂಪ್ ಸೀಳಿನ್ ಅವರದ್ದು. ಚಿತ್ರದ ಸಂಭಾಷಣೆಗಳನ್ನು ಮಾಸ್ತಿ ಅವರು ಬರೆದಿದ್ದಾರೆ. 

Latest News

Related News