ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ 'ಕ್ವೀನ್' ಆಗಿ ಮೆರೆಯುತ್ತಿರುವ ನಟಿ ತ್ರಿಶಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆ ಹುಟ್ಟಿಕೊಳ್ಳುತ್ತಲೇ ಇವೆ. ಅದರಲ್ಲೂ ಕಳೆದ ಕೆಲವು ವಾರಗಳಿಂದಂತೂ ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಮಿತಿ ಮೀರಿವೆ. ಇದರಿಂದ ಬೇಸತ್ತ ತ್ರಿಶಾ, ಇಂದು ಬೆಳಗ್ಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಗಾಸಿಪ್ ಗಿರಾಕಿಗಳಿಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಸೈಲೆಂಟ್ ಆಗಿರೋ ತ್ರಿಶಾ ಈ ಬಾರಿ ಮಾತ್ರ ಫುಲ್ ಗರಂ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, "ನಾನು ಸಿನಿಮಾಗಳನ್ನು ಬಿಡುತ್ತಿದ್ದೀನಿ, ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗುತ್ತಿದ್ದೀನಿ, ಈಗಾಗಲೇ ಎರಡು ಸಿನಿಮಾಗಳನ್ನು ಮುಗಿಸಿ ಇನ್ನೂ ಹಲವು ಸಿನಿಮಾಗಳ ಆಫರ್ ಪಡೆಯುತ್ತಿದ್ದೇನೆ... ಇದಕ್ಕೆ ಇನ್ನೇನಾದರೂ ಎಕ್ಸ್ಟ್ರಾ ಸೇರಿಸಬೇಕಾ? ಅಥವಾ ಇಂದಿನ ನಿಮ್ಮ ಕಲ್ಪನಾ ಲೋಕದ (Imagination) ಕೋಟಾ ಮುಗಿಯಿತಾ?" ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಅಂದರೆ, ತನ್ನ ಬಗ್ಗೆ ಹಬ್ಬುತ್ತಿರುವ ಸುದ್ದಿಗಳೆಲ್ಲಾ ಕೇವಲ ಜನರ ಕಲ್ಪನೆ ಅಷ್ಟೇ ಎಂದು ಅವರು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ತ್ರಿಶಾ ಬಗ್ಗೆ ಇಷ್ಟೊಂದು ಸುದ್ದಿಗಳು ಹಬ್ಬಲು ಮುಖ್ಯವಾಗಿ ಮೂರು ಕಾರಣಗಳಿವೆ
ನಟನಾ ನಿವೃತ್ತಿ ಮತ್ತು ರಾಜಕೀಯ: ದಳಪತಿ ವಿಜಯ ಯಾವಾಗ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರುವುದಾಗಿ ಘೋಷಿಸಿದರೋ, ಆಗಿನಿಂದ ತ್ರಿಶಾ ಕೂಡ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರ್ತಾರೆ ಅನ್ನೋ ಮಾತು ಶುರುವಾಯ್ತು. ಹಳೆಯ ವಿಡಿಯೋ ಒಂದರಲ್ಲಿ ಅವರು "ನಾನು ಮುಂದೆ ಸಿಎಂ ಆಗ್ತೀನಿ" ಎಂದು ಹೇಳಿದ್ದು ಈಗ ಮತ್ತೆ ವೈರಲ್ ಆಗುತ್ತಿರುವುದು ಇದಕ್ಕೆ ತುಪ್ಪ ಸುರಿದಂತಾಗಿದೆ.
ವಿಜಯ್ ಜೊತೆ ಮದುವೆ ವದಂತಿ: ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ಡಿವೋರ್ಸ್ ಸುದ್ದಿ ಬಂದಾಗಿನಿಂದ ತ್ರಿಶಾ ಹೆಸರು ಪದೇ ಪದೇ ಕೇಳಿಬರುತ್ತಿದೆ. ಮೇ 4ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ವಿಜಯ್ ಮತ್ತು ತ್ರಿಶಾ ಮದುವೆಯಾಗುತ್ತಾರೆ ಎಂಬ ವಿಡಿಯೋಗೆ ತ್ರಿಶಾ ಅವರ ಅಮ್ಮ ಲೈಕ್ ಮಾಡಿದ್ದು ಇಡೀ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿತ್ತು.
ಉದ್ಯಮಿಯ ಜೊತೆ ಮದುವೆ: ತ್ರಿಶಾ ಅವರು ಒಬ್ಬ ದೊಡ್ಡ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿ ಸೆಟ್ಲ್ ಆಗ್ತಾರೆ ಅನ್ನೋದು ಬಹಳ ಹಳೆಯ ಗಾಸಿಪ್. ಈ ಹಿಂದೆ ಅವರಿಗೆ ನಿಶ್ಚಿತಾರ್ಥವಾಗಿ ಮುರಿದು ಬಿದ್ದಿದ್ದರಿಂದ, ಈ ಮದುವೆ ವಿಷಯ ಬಂದಾಗಲೆಲ್ಲಾ ಜನ ಕುತೂಹಲದಿಂದ ಚರ್ಚೆ ಮಾಡುತ್ತಾರೆ.
ವದಂತಿಗಳು ಏನೇ ಇರಲಿ, ತ್ರಿಶಾ ಮಾತ್ರ ತಮ್ಮ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋದು ಒಂದೆಡೆಯಾದರೆ, ಆಪ್ತ ಸ್ನೇಹಿತರ ಜೊತೆ ಪಾರ್ಟಿ, ಸೆಲೆಬ್ರೇಷನ್ ಅಂತ ಖುಷಿಯಾಗಿದ್ದಾರೆ. ಆದರೆ ದಿನ ಬೆಳಗಾದರೆ ತನ್ನ ಬಗ್ಗೆ ಹೊಸ ಹೊಸ ಕಥೆಗಳನ್ನು ಓದಿ ಅವರಿಗೆ ಸಾಕಾಗಿ ಹೋಗಿದೆ.
ತ್ರಿಶಾ ಸದ್ಯಕ್ಕಂತೂ ಸಿನಿಮಾ ಬಿಡುತ್ತಿಲ್ಲ ಅಥವಾ ಯಾರನ್ನೂ ಮದುವೆಯಾಗುತ್ತಿಲ್ಲ ಎನ್ನುವುದು ಅವರ ಇವತ್ತಿನ ಪೋಸ್ಟ್‌ನಿಂದ ಕ್ಲಿಯರ್ ಆಗಿದೆ. ಸ್ಟಾರ್ ನಟಿಯರಾದ ಮೇಲೆ ಇಂತಹ ಗಾಸಿಪ್‌ಗಳು ಕಾಮನ್ ಆದರೂ, ಅದಕ್ಕೊಂದು ಮಿತಿ ಇರಬೇಕು ಅನ್ನೋದು ತ್ರಿಶಾ ಅವರ ವಾದ.