Sunday, Nov 22, 2026
|
Advertisement

ಬೆಂಗಳೂರಿನ ಏಳು ಕೊ*ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಸಂಬಂಧಿಕರ ಕರೆಗಳಿಗೆ ಬಾಲಕನಿಂದಲೇ ಉತ್ತರ ಕೊಡಿಸಿದ ಆರೋಪಿ!!

ಬೆಂಗಳೂರಿನ ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹ*ತ್ಯೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರನ್ನು ಕೊ*ಲೆ ಮಾಡಿದ ಬಳಿಕ ಸಂಬಂಧಿಕರಿಗೆ ಅನುಮಾನ ಬಾರದಂತೆ ಆರೋಪಿ ಇಂದುಶೇಖರ್ ರೂಪಿಸಿದ್ದ ತಂತ್ರ ಇದೀಗ ಬಹಿರಂಗವಾಗಿದೆ. ಮೃ*ತರ ಸಂಬಂಧಿಕರು ಮೊಬೈಲ್‌ಗೆ ಕರೆ ಮಾಡಿದಾಗ ಬಾಲಕ ಯತಿನ್‌ನಿಂದಲೇ ಮಾತನಾಡಿಸಿ ಕುಟುಂಬದವರು ಸುರಕ್ಷಿತವಾಗಿದ್ದಾರೆ ಎಂಬ ಭಾವನೆ ಮೂಡಿಸಲಾಗಿತ್ತು ಎನ್ನಲಾಗಿದೆ. ಇದೀಗ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ಪ್ರಕರಣದ ಕ್ರೌರ್ಯವನ್ನು ಮತ್ತಷ್ಟು ಬಯಲು ಮಾಡಿದೆ.

ರಾಜಾಜಿನಗರ ಕೊ*ಲೆ ಪ್ರಕರಣ
ರಾಜಾಜಿನಗರ ಕೊ*ಲೆ ಪ್ರಕರಣ

ರಾಜಾಜಿನಗರದ ಏಳು ಮಂದಿಯ ಹ*ತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿತ್ತು. ಒಂದೇ ಕುಟುಂಬದ ಸದಸ್ಯರನ್ನು ಹ*ತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್, ಕೊ*ಲೆಗಳ ಬಳಿಕವೂ ತನ್ನ ಕೃ*ತ್ಯವನ್ನು ಮುಚ್ಚಿಹಾಕಲು ಹಲವು ಪ್ರಯತ್ನಗಳನ್ನು ನಡೆಸಿದ್ದಾನೆ ಎಂಬ ಸಂಗತಿಗಳು ತನಿಖೆಯಲ್ಲಿ ಹೊರಬರುತ್ತಿವೆ. ಅದರಲ್ಲೂ ಮೃತರ ಸಂಬಂಧಿಕರು ಕರೆ ಮಾಡಿದಾಗ ಅವರಿಗೆ ಸತ್ಯ ತಿಳಿಯದಂತೆ ಮಾತನಾಡಿಸಿರುವುದು ಪ್ರಕರಣದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ.

Advertisement

ಸಂಬಂಧಿಕರ ಕರೆಗಳಿಗೆ ಬಾಲಕನಿಂದ ಉತ್ತರ ಕೊಡಿಸಿದ ಆರೋಪಿ!

ತನಿಖೆಯಲ್ಲಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರ ಹತ್ಯೆಯ ಬಳಿಕ ಆರೋಪಿ ಇಂದುಶೇಖರ್ ಮೃತರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕುಟುಂಬದವರ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರಿಸಲು ಸಂಬಂಧಿಕರು ಕರೆ ಮಾಡಿದಾಗ ಅನುಮಾನ ಬಾರದಂತೆ ಉತ್ತರಿಸುವ ಪ್ರಯತ್ನ ಮಾಡಿದ್ದಾನೆ. ಕೆಲ ಸಂದರ್ಭಗಳಲ್ಲಿ ಬಾಲಕರ ಕೈಗೆ ಮೊಬೈಲ್ ಕೊಟ್ಟು ಅವರಿಂದಲೇ ಮಾತನಾಡಿಸಿದ್ದಾನೆ ಎನ್ನಲಾಗಿದೆ.

ಶಿವಕುಮಾರ್ ಮತ್ತು ದಿವ್ಯ ದಂಪತಿಯ ಹ*ತ್ಯೆಯ ಬಳಿಕ ಅವರ ಪುತ್ರ ಪುನೀತ್‌ನನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಆರೋಪಿ, ಸಂಬಂಧಿಕರ ಕರೆಗಳಿಗೆ ಆತನಿಂದಲೂ ಉತ್ತರ ಕೊಡಿಸಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಆದರೆ, ಬಳಿಕ ಪುನೀತ್‌ನನ್ನೂ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದೇ ರೀತಿಯಲ್ಲಿ ಶಂಕರ್ ಮತ್ತು ನಳಿನಿ ದಂಪತಿಯ ಹ*ತ್ಯೆಯ ನಂತರ ಅವರ ಪುತ್ರ ಯತಿನ್‌ನನ್ನು ತನ್ನೊಂದಿಗೆ ಕರೆದೊಯ್ದು ಸಂಬಂಧಿಕರೊಂದಿಗೆ ಮಾತನಾಡಿಸಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

'ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ, ಟ್ರಿಪ್‌ಗೆ ಬಂದಿದ್ದೇವೆ'

ಸದ್ಯ ಬಹಿರಂಗವಾಗಿರುವ ಆಡಿಯೋದಲ್ಲಿ ಬಾಲಕ ಯತಿನ್ ತನ್ನ ಸಂಬಂಧಿಕರೊಂದಿಗೆ ಮಾತನಾಡಿರುವ ಸಂಭಾಷಣೆ ಕೇಳಿಬಂದಿದೆ. ಈ ವೇಳೆ ಸಂಬಂಧಿಕರು ಅಪ್ಪ-ಅಮ್ಮ ಎಲ್ಲಿ ಇದ್ದಾರೆ ಎಂದು ವಿಚಾರಿಸಿದ್ದಾರೆ. ನಳಿನಿ ಜೊತೆ ಒಮ್ಮೆಯಾದರೂ ಮಾತನಾಡಿಸು, ಮಾತನಾಡಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ವಿಶೇಷವಾಗಿ ನಳಿನಿಯ ತಾಯಿ ತುಂಗಮ್ಮ ಅವರು ಮಗಳ ಬಗ್ಗೆ ಚಿಂತಿತರಾಗಿದ್ದು, ಅವರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಸಂಬಂಧಿಕರು ಕೇಳಿಕೊಂಡಿದ್ದಾರೆ. ಆದರೆ ಬಾಲಕ ಯತಿನ್ ನೀಡಿರುವ ಉತ್ತರಗಳು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿವೆ.

Advertisement

ತಾವು ಟ್ರಿಪ್‌ಗೆ ಬಂದಿರುವುದಾಗಿ ಹೇಳಿರುವ ಯತಿನ್, ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ. ಬಸ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾನೆ. ಅಲ್ಲದೆ, ಟ್ರಿಪ್ ಮುಗಿಸಿಕೊಂಡು ವಾಪಸ್ ಬರಲು ಮೂರು ತಿಂಗಳು ಬೇಕಾಗುತ್ತದೆ ಎಂದೂ ಹೇಳಿದ್ದಾನೆ ಎನ್ನಲಾಗಿದೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ತಾನು ಹೋಗಬೇಕು ಎಂದು ಬಾಲಕ ಮಾತನಾಡಿರುವುದು ಆಡಿಯೋದಲ್ಲಿ ಕೇಳಿಬಂದಿದೆ.

ಈ ಮಾತುಗಳನ್ನು ಕೇಳಿದಾಗ ಕುಟುಂಬದ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ನಂಬಿಕೆ ಸಂಬಂಧಿಕರಲ್ಲಿ ಮೂಡುವಂತೆ ಮಾಡಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ವಾಸ್ತವದಲ್ಲಿ ಕುಟುಂಬದ ಸದಸ್ಯರು ಹತ್ಯೆಯಾಗಿರುವ ವಿಚಾರ ಸಂಬಂಧಿಕರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

'ಪುನೀತ್ ಕೂಡ ನಮ್ಮ ಜೊತೆಯಲ್ಲಿದ್ದಾನೆ' ಎಂದ ಯತಿನ್!

ಈ ಆಡಿಯೋ ಸಂಭಾಷಣೆಯಲ್ಲಿ ಸಂಬಂಧಿಕರು ಮತ್ತೊಂದು ಪ್ರಮುಖ ಪ್ರಶ್ನೆಯನ್ನೂ ಕೇಳಿದ್ದಾರೆ. ಶಿವಕುಮಾರ್ ಮತ್ತು ದಿವ್ಯ ದಂಪತಿಯ ಪುತ್ರ ಪುನೀತ್ ಎಲ್ಲಿ ಇದ್ದಾನೆ ಎಂದು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಯತಿನ್, ಪುನೀತ್ ಕೂಡ ನಮ್ಮ ಜೊತೆಯಲ್ಲಿದ್ದಾನೆ. ಎಲ್ಲರೂ ಬಸ್‌ನಲ್ಲಿದ್ದೇವೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಈ ಉತ್ತರ ಕೂಡ ಪ್ರಕರಣದ ತನಿಖೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಪುನೀತ್‌ನ ಹತ್ಯೆಯ ಬಳಿಕವೂ ಆತ ಕುಟುಂಬದವರ ಜೊತೆಗಿದ್ದಾನೆ ಎಂಬಂತೆ ಸಂಬಂಧಿಕರಿಗೆ ತಿಳಿಸಲಾಗಿತ್ತು ಎಂಬ ಅಂಶ ಆಡಿಯೋದಿಂದ ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಅನುಮಾನ ಮೂಡದಂತೆ ಪ್ರವಾಸದ ಕಥೆಯನ್ನು ಮುಂದಿಟ್ಟುಕೊಂಡು ಆರೋಪಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಕೈ ಸೇರಿದ ಆಡಿಯೋ: ಸತ್ಯಾಸತ್ಯತೆ ಪರಿಶೀಲನೆ

ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವ ಆಡಿಯೋಗಳು ಇದೀಗ ಪೊಲೀಸರ ಗಮನಕ್ಕೆ ಬಂದಿವೆ. ಸಂಬಂಧಿಕರು ಈ ಆಡಿಯೋಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಅವುಗಳ ಸತ್ಯಾಸತ್ಯತೆ ಹಾಗೂ ಮಾತುಕತೆಯ ಸಂಪೂರ್ಣ ಹಿನ್ನೆಲೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲಿ ಕೇಳಿಬಂದಿರುವ ಮಾತುಗಳು, ಕರೆಗಳು ನಡೆದ ಸಮಯ, ಮೊಬೈಲ್ ಬಳಕೆಯ ವಿವರಗಳು ಹಾಗೂ ಆರೋಪಿಯ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಸಂಭಾಷಣೆಗಳು ಪ್ರಕರಣದ ತನಿಖೆಯಲ್ಲಿ ಹೊಸ ಸಾಕ್ಷ್ಯವಾಗಿ ನೆರವಾಗಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಒಂದೇ ಕುಟುಂಬದ ಏಳು ಮಂದಿಯ ಹ*ತ್ಯೆ ಪ್ರಕರಣದಲ್ಲಿ ಈಗಾಗಲೇ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಕೊ*ಲೆಗಳ ಬಳಿಕವೂ ಸಂಬಂಧಿಕರಿಗೆ ಅನುಮಾನ ಬಾರದಂತೆ ಬಾಲಕನಿಂದ ಮಾತನಾಡಿಸಿರುವ ಆರೋಪ ಪ್ರಕರಣದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿರುವ ಸಂಬಂಧಿಕರಿಗೆ ಈ ಆಡಿಯೋ ಮತ್ತಷ್ಟು ಆಘಾತ ಉಂಟುಮಾಡಿದೆ. ಸದ್ಯ ಇಂದುಶೇಖರ್‌ನ ಕೃತ್ಯಗಳ ಹಿಂದಿನ ಉದ್ದೇಶ, ಹ*ತ್ಯೆಗಳ ಸಂಪೂರ್ಣ ಹಿನ್ನೆಲೆ ಹಾಗೂ ಆಡಿಯೋದಲ್ಲಿನ ಸಂಭಾಷಣೆಗಳ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

Comments