Sunday, Nov 22, 2026
|
Advertisement

ವಾಟ್ಸ್‌ಆ್ಯಪ್‌ನಲ್ಲಿ ಹರಿದ ಸಂದೇಶಕ್ಕೆ ಯಾದಗಿರಿಯಲ್ಲಿ ಸಂಚಲನ; ಭೀಮಾ ನದಿ ತೀರದಲ್ಲಿ ಮಹಿಳೆಯರ ದಂಡು!!

ಸಾಮಾಜಿಕ ಮಾದ್ಯಮದಲ್ಲಿ ಬರುವ ಸುದ್ದಿಯು ಸಾಕಷ್ಟು ಸಮಯ  ಸುಳ್ಳಗೆ   ಇರುತ್ತದೆ ಅಂತಹ ಸುಳ್ಳು ಸುದ್ದಿಗಳನ್ನೂ ನಾವು ದಿನನಿತ್ಯ ಕಾಣುತ್ತೆವೆ  ವಾಟ್ಸಪ್ಪ್ ನಲ್ಲಿನ    ಈ ಸಂದೇಶವನ್ನು  1೦೦ ಜನಕೆ ಕಳುಹಿಸಿ ನಿಮಗೆ ಸಂಜೆಯ ಓತಿಗೆ ಶುಭ ಸುದ್ದಿ ಬರುತ್ತದೆ ಎಂಬ ಸುದ್ದಿಗಳಿಂದ  ಇಡಿದು   ಇನ್ಸ್ಟಾಗ್ರಾಮ್ ai ರೂಪಿತ ವಿಡಿಯೋಗಳು  ವರೆಗೆ ಎಲ್ಲವು  ಕೃತಕ ಬುದ್ಧಿಮತ್ತೆ ಇಂದ ತಯಾರಿಸುವುದಾಗಿದೆ ಹಾಗು ಜಾಲತಾಣದಲ್ಲಿ ಹರಿಯುವ ಸುದ್ದಿಯು ಕೆಲವೊಂದು ಮಾತ್ರ  ಸೂಕ್ತ ಮಾಹಿತಿಗಳೊಂದಿಗೆ ನಿಜವಾಗಿದರೇ  ಕೇಳೋವೊಂದು   ಸತ್ಯಕ್ಕೆ ದೂರವಾದ ಮಾಹಿತಿ ಈಗ್ಗೆ ಸುಳ್ಳಾದ ಮಾಹಿತಿಯಿಂದ  ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ  ದೇವಸ್ಥಾನದಲ್ಲಿ  ನದಿ ಮತ್ತು  ಪರಿಸರ ಮಲಿನಗೊಂಡಿದೆ  

ಸವದತ್ತಿ ಯಲ್ಲಮ್ಮ | Photo Credit: https://encrypted-tbn0.gstatic.com/images?
ಸವದತ್ತಿ ಯಲ್ಲಮ್ಮ | Photo Credit: https://encrypted-tbn0.gstatic.com/images?


ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಗೆ ಸರ್ಪದೋಷ ತಗುಲಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಯಾದಗಿರಿ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಸಾವಿರಾರು ಮಹಿಳೆಯರು ಜಮಾಯಿಸಿದ ಘಟನೆ ನಡೆದಿದೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಸಂದೇಶವನ್ನು ನಂಬಿದ ಮಹಿಳೆಯರು ನದಿಯಲ್ಲಿ ಸ್ನಾನ ಮಾಡಿ, ಹಳೆಯ ಪಾದುಕೆಗಳನ್ನು ವಿಸರ್ಜಿಸಿ ಹೊಸ ಪಾದುಕೆಗಳನ್ನು ಧರಿಸಿದ್ದಾರೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಸವದತ್ತಿ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Advertisement

ಅಸಲಿಗೆ ಏನಾಗಿತ್ತು?

ನವೆಂಬರ್ ರಂದು ಯಾದಗಿರಿ ನಗರದ ಹೊರವಲಯದಲ್ಲಿರುವ ಭೀಮಾ ನದಿ ತೀರದಲ್ಲಿ 3 ಸಾವಿರಕ್ಕೂ ಅಧಿಕ ಮಹಿಳೆಯರು ಜಮಾಯಿಸಿದ್ದರು. ಯಲ್ಲಮ್ಮ ದೇವಿಯ ಪಾದುಕೆಗಳಿಗೆ ಸರ್ಪದೋಷ ತಗುಲಿದೆ, ಅದರಿಂದ ಪರಿಹಾರ ಪಡೆಯಲು ನದಿಯಲ್ಲಿ ಸ್ನಾನ ಮಾಡಿ ಹಳೆಯ ಪಾದುಕೆಗಳನ್ನು ತೆಗೆದು ಹೊಸ ಪಾದುಕೆಗಳನ್ನು ಧರಿಸಬೇಕು ಎಂಬ ಸಂದೇಶ ಹರಿದಾಡಿತ್ತು.

ಈ ವದಂತಿ ಯಾದಗಿರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ವೇಗವಾಗಿ ಹರಡಿದ್ದು, ಅನೇಕ ಮಹಿಳೆಯರು ತಂಡೋಪತಂಡವಾಗಿ ನದಿಯತ್ತ ಆಗಮಿಸಿದ್ದರು. ಕೆಲವರು ಹಾಲು, ತುಪ್ಪ, ಹೂವು ಹಾಗೂ ಹಣ್ಣುಗಳನ್ನು ತೆಗೆದುಕೊಂಡು ಪೂಜೆ ಸಲ್ಲಿಸಿದರು. ಬಳಿಕ ಹಳೆಯ ಪಾದುಕೆಗಳನ್ನು ತೆಗೆದು ನದಿಗೆ ಬಿಡುವ ಮೂಲಕ ಹೊಸ ಪಾದುಕೆಗಳನ್ನು ಧರಿಸಿದರು. ಕೆಲವರು ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆ ಧರಿಸಿದರು ಎಂದು ವರದಿಯಾಗಿದೆ. 


ವದಂತಿ ನಂಬಿ ಸಾವಿರಾರು ಮಹಿಳೆಯರು ನದಿಯಲ್ಲಿ ಪೂಜೆ

ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ನಂಬಿದ ಅನೇಕ ಮಹಿಳೆಯರು ನಿಜಾಸತ್ಯ ಪರಿಶೀಲಿಸದೆ ಭೀಮಾ ನದಿ ತೀರಕ್ಕೆ ತೆರಳಿದ್ದರು. ಕೆಲವರು ತಮ್ಮ ಊರಿನಲ್ಲಿ ಈ ಸುದ್ದಿ ಕೇಳಿದ ತಕ್ಷಣ ನದಿಗೆ ಬಂದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲಿ ಯಲ್ಲಮ್ಮ ದೇವಿಯನ್ನು ಸ್ಮರಿಸಿ ಪೂಜೆ ಸಲ್ಲಿಸಿ, ಸರ್ಪದೋಷ ನಿವಾರಣೆಯಾಗಲಿ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಮಹಿಳೆಯರ ಸಂಖ್ಯೆ ಏಕಾಏಕಿ ಹೆಚ್ಚಾದ ಕಾರಣ ನದಿ ತೀರದಲ್ಲಿ ಜನಸಂದಣಿ ಉಂಟಾಗಿತ್ತು. ಒಂದೇ ದಿನ ಸಾವಿರಾರು ಜನರು ಆಗಮಿಸಿದ್ದರಿಂದ ಸ್ಥಳೀಯರಿಗೂ ಅಚ್ಚರಿ ಮೂಡಿಸಿತ್ತು. 

Advertisement


ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿ ಹೇಳಿದ್ದೇನು?

ಈ ವದಂತಿ ಹರಡಿದ ಬಳಿಕ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರೆ ಸ್ಪಷ್ಟನೆ ನೀಡಿದ್ದಾರೆ. ಯಲ್ಲಮ್ಮ ದೇವಿಗೆ ಸರ್ಪದೋಷ ತಗುಲಿದೆ ಅಥವಾ ಪಾದುಕೆಯನ್ನು ಹಾವು ನುಂಗಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಆಧಾರರಹಿತ ಸುದ್ದಿಗಳನ್ನು ನಂಬಬಾರದು. ಎಂದಿನಂತೆ ಭಕ್ತಿ ಮತ್ತು ಶ್ರದ್ಧೆಯಿಂದ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುವಂತೆ ಮನವಿ ಮಾಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ, ಹುಂಡಿ ಕಾಣಿಕೆಯೂ ಹೆಚ್ಚಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. 

ಭಕ್ತಿಯಿಂದ ನದಿಗೆ ಹಾನಿ: ಸ್ವಚ್ಛತಾ ಕಾರ್ಯಕ್ಕೆ ಇಳಿದ ನಗರಸಭೆ

ಸಾವಿರಾರು ಮಹಿಳೆಯರು ನದಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಭೀಮಾ ನದಿ ತೀರದಲ್ಲಿ ಹಳೆಯ ಬಟ್ಟೆಗಳು, ಪೂಜಾ ಸಾಮಗ್ರಿಗಳು, ಹೂವಿನ ಹಾರಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿತ್ತು. ಇದರಿಂದ ನದಿ ಪರಿಸರ ಮಲಿನಗೊಂಡಿದ್ದು, ಯಾದಗಿರಿ ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಭೀಮಾ ನದಿಯಿಂದಲೇ ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಹಿನ್ನೆಲೆಯಲ್ಲಿ ನದಿಯ ಸ್ವಚ್ಛತೆಯ ಬಗ್ಗೆ ಆತಂಕ ವ್ಯಕ್ತವಾಯಿತು. ನದಿಯಲ್ಲಿ ಪೂಜೆ ಮಾಡುವುದಕ್ಕೆ ವಿರೋಧವಿಲ್ಲ, ಆದರೆ ಬಟ್ಟೆ, ಪ್ಲಾಸ್ಟಿಕ್ ಮತ್ತು ಪೂಜಾ ತ್ಯಾಜ್ಯಗಳನ್ನು ನೀರಿಗೆ ಎಸೆಯಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ. 


ವದಂತಿಯಿಂದ ನಡೆದ ಘಟನೆಯ ಪ್ರಮುಖ ಅಂಶಗಳು

  • ವದಂತಿ: ಯಲ್ಲಮ್ಮ ದೇವಿಯ ಪಾದುಕೆಯನ್ನು ಸರ್ಪ ನುಂಗಿದೆ, ದೇವಿಗೆ ಸರ್ಪದೋಷ ತಗುಲಿದೆ ಎಂಬ ಸಂದೇಶ.
  • ಸ್ಥಳ: ಯಾದಗಿರಿ ಹೊರವಲಯದ ಭೀಮಾ ನದಿ.
  • ಜನಸಂದಣಿ: ವರದಿಗಳ ಪ್ರಕಾರ 3 ಸಾವಿರಕ್ಕೂ ಅಧಿಕ ಮಹಿಳೆಯರು ಸೇರಿದ್ದರು.
  • ನಡೆದ ಆಚರಣೆ: ನದಿಯಲ್ಲಿ ಸ್ನಾನ, ಪೂಜೆ, ಹಳೆಯ ಪಾದುಕೆ ಬದಲಿಸಿ ಹೊಸ ಪಾದುಕೆ ಧರಿಸುವುದು.
  • ಅಧಿಕೃತ ಸ್ಪಷ್ಟನೆ: ಸವದತ್ತಿ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿ ವದಂತಿಯನ್ನು ನಿರಾಕರಿಸಿದೆ.

ಪರಿಣಾಮ - ನದಿಯಲ್ಲಿ ತ್ಯಾಜ್ಯ ಸಂಗ್ರಹ ನಗರಸಭೆಯಿಂದ ಸ್ವಚ್ಛತಾ ಕಾರ್ಯ ಮತ್ತು ಎಚ್ಚರಿಕೆ.

Comments