Jan 25, 2026 Languages : ಕನ್ನಡ | English

ಪೆಟ್ರೋಲ್ ಹಾಕ್ಸಿ ಹಾಕ್ಸಿ ಸಾಕಾಗಿದೆಯಾ? ಈ ಸ್ಕೂಟಿ ಬೆಸ್ಟ್ ಅಂತಾರೆ ಸ್ಕೂಟಿ ಕೊಂಡವರು

ಪ್ರತಿದಿನ ನಾವು ಹೊಸ ಹೊಸ ವಾಹನಗಳ ನೋಡುತ್ತಲೇ ಇರುತ್ತೇವೆ. ಒಂದಿಲ್ಲೊಂದು ಹೊಸ ವಿಶಿಷ್ಟ ವೈಶಿಷ್ಟತೆ ಹೊಂದಿರುವ, ಗ್ರಾಹಕರಿಗೆ ಅನುಕೂಲ ಆಗುವಂತೆ ಹೊಸ ನವೀಕರಣ ಮೂಲಕ ಮಾರುಕಟ್ಟೆಗೆ ಬೈಕ್ ಗಳು ಜೊತೆಗೆ ಸ್ಕೂಟಿಗಳು ಲಾಂಚ್ ಆಗುತ್ತಲೇ ಇರುತ್ತವೆ. ಕೆಲವೊಂದಿಷ್ಟು ಬೈಕ್ ಗಳು ಫೀಚರ್ ಮೂಲಕ ಸೆಡ್ಡು ಹೊಡೆದು ಸದ್ದು ಮಾಡಿದರೆ, ಇನ್ನಷ್ಟು ಕೇವಲ ಸ್ಟೈಲಿಶ್ ಲುಕ್ ಮೂಲಕವೇ ಬೈಕ್ ಪ್ರಿಯರಿಗೆ ಇಷ್ಟ ಆಗಿಬಿಡುತ್ತವೆ. ಹಾಗೆ ಕೈ ಬೀಸಿ ಕರೆಯುತ್ತವೆ ಕೂಡ. ಇವತ್ತಿನ ದಿನಮಾನದಲ್ಲಿ ಬೈಕ್ ಸ್ಕೂಟಿ ಪೆಟ್ರೋಲ್ ರಹಿತವಾಗಿ ಚಲಿಸುತ್ತಲಿದ್ದು, ಬ್ಯಾಟರಿ ಚಾರ್ಜ್ ಮೂಲಕ ಅತ್ಯಾಕರ್ಷವಾಗಿ ರಸ್ತೆಗೆ ಇಳಿಯುತ್ತಲಿರುವುದು ನಿಮಗೂ ಗೊತ್ತು. ಅಂತಹ ಒಂದು ಎಲೆಕ್ಟ್ರಿಕ್ ಸೂಪರ್ ಸ್ಕೂಟಿ ಇದೆ ವರ್ಷ ಬರುತ್ತಿದೆ ನೋಡಿ. ಅದು ಯಾವುದು? ಅದರ ವೈಶಿಷ್ಟತೆ ಏನು ಎಂಬುದಾಗಿ ಈ ಲೇಖನ ಮೂಲಕ ತಿಳಿದುಕೊಳ್ಳೋಣ ಬನ್ನಿ. 

Yamaha Aerox-E
Yamaha Aerox-E

ಇದು ಯಮಹ ಕಂಪನಿಯು ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿರುವ ಹಂತ ದೊಡ್ಡ ಮಹತ್ವದ ಹೆಜ್ಜೆಯಾಗಿದೆ. ಹೊಸ Yamaha Aerox-E ಎಲೆಕ್ಟ್ರಿಕ್ ಸ್ಕೂಟರ್, ಅದರ ಪೆಟ್ರೋಲ್ ಆವೃತ್ತಿಯಂತೆ ತೋರಿದರೂ, ಒಳಗಿನಿಂದ ಶುದ್ಧ ಎಲೆಕ್ಟ್ರಿಕ್ ತಂತ್ರಜ್ಞಾನ ಹೊಂದಿದೆ. ಈ ಸ್ಕೂಟರ್‌ನ್ನು 9.4kW ಮೋಟರ್ ಚಲಾಯಿಸುತ್ತದೆ, ಇದು 48Nm ಟಾರ್ಕ್ ಉತ್ಪತ್ತಿ ಮಾಡುತ್ತದೆ. ಈ ಮೋಟರ್‌ಗೆ ಶಕ್ತಿ ನೀಡುವದು 3kWh ಬ್ಯಾಟರಿ ಪ್ಯಾಕ್, ಇದು ಡ್ಯುಯಲ್ ಬ್ಯಾಟರಿಗಳ ಸಂಯೋಜನೆಯಾಗಿದ್ದು, ‘ಅಸಾಧಾರಣ ಕಾರ್ಯಕ್ಷಮತೆ’ ಗಾಗಿ ಹೈ-ಎನರ್ಜಿ ಸೆಲ್‌ಗಳಿಂದ ನಿರ್ಮಿತವಾಗಿದೆ. ಇದರ ಪ್ರಮಾಣಿತ ರೇಂಜ್ 106 ಕಿಮೀ, ಆದರೆ ನೈಜ ಬಳಕೆಯಲ್ಲಿ ಸ್ವಲ್ಪ ಕಡಿಮೆ ಇರಬಹುದು. Yamaha ಕಂಪನಿ ವಿವಿಧ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಿದೆ. ಮುಖ್ಯವಾಗಿ, ಈ ಬ್ಯಾಟರಿ ಡಿಟ್ಯಾಚಬಲ್ ಆಗಿದ್ದು, ಮನೆದಲ್ಲಿಯೇ ಚಾರ್ಜ್ ಮಾಡಬಹುದು ಎಂದು ಕೇಳಿ ಬಂದಿದೆ. 

ಸ್ಕೂಟರ್‌ನಲ್ಲಿ ಇಕೊ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ ಮೂರು ರೈಡಿಂಗ್ ಮೋಡ್‌ಗಳಿವೆ. ಜೊತೆಗೆ Boost ಫಂಕ್ಷನ್ ಕೂಡ ಇದೆ, ಇದು ತಕ್ಷಣ ವೇಗ ಹೆಚ್ಚಿಸಲು ಸಹಾಯ ಮಾಡುತ್ತದೆ. Reverse ಮೋಡ್ ಕೂಡ ಲಭ್ಯವಿದ್ದು, ತಗ್ಗು ಜಾಗಗಳಲ್ಲಿ ಸ್ಕೂಟರ್ ಹಿಂಬದಿಗೆ ಚಲಿಸಲು ಅನುಕೂಲವಾಗುತ್ತದೆ ಎನ್ನಲಾಗಿ ಈ ಹೊಸ ಫೀಚರ್ ಅನ್ನು ಸೇರ್ಪಡೆ ಮಾಡಲಾಗಿದೆ. ಫೀಚರ್‌ಗಳ ಪಟ್ಟಿಯಲ್ಲಿ ಸ್ಮಾರ್ಟ್ ಕೀ ಸಿಸ್ಟಮ್, 5-ಇಂಚಿನ TFT ಸ್ಕ್ರೀನ್, Bluetooth ಕನೆಕ್ಟಿವಿಟಿ, ಮತ್ತು Turn-by-turn ನ್ಯಾವಿಗೇಶನ್ ಸೇರಿವೆ. ಸುರಕ್ಷತೆಗಾಗಿ Single-channel ABS ಮತ್ತು Traction Control ಕೂಡ ಲಭ್ಯವಿದೆ. ಇದು ಶೈಲಿ, ಶಕ್ತಿ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ನೀಡುವ Yamaha ಕಂಪನಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಪೆಟ್ರೋಲ್ ಏರಾಕ್ಸ್ 155 ಮಾದರಿಯ ಶೈಲಿಯನ್ನು ಹೋಲುತ್ತದೆ ಆದರೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ತಂತ್ರಜ್ಞಾನ ಹೊಂದಿದೆ. ಯಮಹಾ ಡೀಲರ್ ನೆಟ್‌ವರ್ಕ್ ಮೂಲಕ ಇದು ಲಭ್ಯವಿದೆ.

ಯಮಹಾ ತನ್ನ ಪ್ರಖ್ಯಾತ ಏರಾಕ್ಸ್ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು 2025ರ ಕೊನೆಯ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಮ್ಮ  ಭಾರತದಲ್ಲಿ ಬಿಡುಗಡೆ  ಮಾಡುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಇದು ಮ್ಯಾಕ್ಸಿ-ಸ್ಕೂಟರ್ ಶೈಲಿಯಲ್ಲಿದ್ದು, ಯುವರೈಡರ್‌ಗಳಿಗೆ ಆಕರ್ಷಕವಾಗಿದೆ. ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಆಲ್ಎಡ್‌ ಲೈಟಿಂಗ್ ಸೌಲಭ್ಯವಿದೆ. ಡಿಸ್ಕ್ ಬ್ರೇಕ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಕೂಡ ಲಭ್ಯ.

ಈ ಸ್ಕೂಟಿಯ ಪ್ರಮುಖ ವೈಶಿಷ್ಟ್ಯಗಳು

  • ಬ್ಯಾಟರಿ ಸಾಮರ್ಥ್ಯ: 3.0 kWh ಡ್ಯುಯಲ್ ಬ್ಯಾಟರಿ ಪ್ಯಾಕ್ (2 x 1.5 kWh)
  • ರೇಂಜ್: ಒಮ್ಮೆ ಚಾರ್ಜ್‌ನಲ್ಲಿ 106 ಕಿಮೀ
  • ಮೋಟರ್ ಪವರ್: 9.4 kW BLDC ಮೋಟರ್
  • ಟಾರ್ಕ್: 48 Nm
  • ರೈಡಿಂಗ್ ಮೋಡ್‌ಗಳು: ಇಕೊ, ನಾರ್ಮಲ್, ಪವರ್
  • ಟಾಪ್ ಸ್ಪೀಡ್: 90 kmph (ಅಂದಾಜು)
  • ಚಾರ್ಜಿಂಗ್ ಸಮಯ: ಫಾಸ್ಟ್ ಚಾರ್ಜಿಂಗ್ ಮೂಲಕ 2–3 ಗಂಟೆಗಳಲ್ಲಿ 80% ಚಾರ್ಜ್

ಬೆಲೆ ಮತ್ತು ವೇರಿಯಂಟ್‌ಗಳು ಹೀಗಿವೆ

  • ಅಂದಾಜು ಬೆಲೆ: ₹2.90 ಲಕ್ಷ (ಎಕ್ಸ್-ಶೋರೂಂ, ಡೆಲ್ಲಿ)
  • ವೇರಿಯಂಟ್‌ಗಳು: Aerox-E STD (106 km/charge) – ಇನ್ನಷ್ಟು ವೇರಿಯಂಟ್‌ ವಿವರಗಳು ಲಾಂಚ್ ಸಮಯದಲ್ಲಿ ಬಹಿರಂಗವಾಗಲಿವೆ

ವಿಶಿಷ್ಟವಾದ ಈ ಸ್ಕೂಟಿ ಲಾಂಚ್ ಮಾಹಿತಿ

  • ಅನಾವರಣ ದಿನಾಂಕ: 2025 ನವೆಂಬರ್ 11
  • ವಾಣಿಜ್ಯ ಲಾಂಚ್: 2026 ಜನವರಿ–ಮಾರ್ಚ್ ನಡುವೆ ನಿರೀಕ್ಷೆ