ಟಾಟಾ ಮೋಟರ್ಸ್ 2025ರಲ್ಲಿ ತನ್ನ ಮೊದಲ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಭಾರತೀಯ ಎಂಟ್ರಿ-ಲೆವೆಲ್ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ತಂದಿದೆ. ₹59,000 ಆರಂಭಿಕ ಬೆಲೆಯೊಂದಿಗೆ, ಟಾಟಾ 125cc ಬೈಕ್ ಮತ್ತು150cc ಹೈಬ್ರಿಡ್ ಬೈಕ್‌ಗಳು ಇಂಧನ ದಕ್ಷತೆ ಮತ್ತು ತಂತ್ರಜ್ಞಾನದಲ್ಲಿ ಗಮನ ಸೆಳೆಯುತ್ತಿವೆ.
ಟಾಟಾ ಕೈಗೆಟುಕುವ ಅಗ್ಗದ ಬೈಕ್ (125cc) ಮಾದರಿಯು ನವೆಂಬರ್ 6, 2025ರಂದು ಬಿಡುಗಡೆಗೊಂಡಿದ್ದು, ₹59,000 (ಎಕ್ಸ್ ಶೋರೂಮ್) ಅಂದಾಜು ಬೆಲೆಯೊಂದಿಗೆ ಲಭ್ಯವಿದೆ. ಈ ಬೈಕ್ 125cc ಪೆಟ್ರೋಲ್ ಎಂಜಿನ್ ಹೊಂದಿದ್ದು, 90 kmpl ಮೈಲೇಜ್ ನೀಡುವ ಸಾಮರ್ಥ್ಯವಿದೆ. ಇದರ ಟಾಪ್ ಸ್ಪೀಡ್ ~95 ಕಿಮಿ/ಗಂಟೆ ಚಲಿಸಲಿದೆ. ಸಿಂಪಲ್ ಡಿಸೈನ್, ಡಿಜಿಟಲ್ ಮೀಟರ್, ಟ್ಯೂಬ್‌ಲೆಸ್ ಟೈರ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಟಾಟಾ ಹೈಬ್ರಿಡ್ ಬೈಕ್ (150cc ಪೆಟ್ರೋಲ್ + ಎಲೆಕ್ಟ್ರಿಕ್) ಅನ್ನು ನವೆಂಬರ್ 4, 2025ರಂದು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ₹85,000 ರಿಂದ ₹95,000 (ಅಂದಾಜು) ಆಗಿದ್ದು, ಹೈಬ್ರಿಡ್ ಮೋಡ್‌ನಲ್ಲಿ 95 ಕಿಮೀ/ಲೀಟರ್ ವರೆಗೆ ಮೈಲೇಜ್ ನೀಡುತ್ತದೆ. ಈ ಬೈಕ್ 150cc ಪೆಟ್ರೋಲ್ + ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದು, 2.5 kWh ಲಿಥಿಯಂ-ಐಯಾನ್ ಬ್ಯಾಟರಿ (removable) ಮತ್ತು 45 ನಿಮಿಷ ಚಾರ್ಜಿಂಗ್ ಸಮಯ ಹೊಂದಿದೆ. ಟಾಪ್ ಸ್ಪೀಡ್ 110 km/h ಆಗಿದ್ದು, ಡ್ಯುಯಲ್ ಡ್ರೈವ್ ಮೋಡ್, ಡಿಜಿಟಲ್ ಡ್ಯಾಶ್, LED ಲೈಟ್ಸ್ ಮತ್ತು ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯಗಳಿವೆ.
ಟಾಟಾ ಬೈಕ್‌ಗಳು ದಿನನಿತ್ಯದ ಪ್ರಯಾಣಿಕರಿಗೆ ಕಡಿಮೆ ಇಂಧನ ವೆಚ್ಚದಲ್ಲಿ ಹೆಚ್ಚು ಮೈಲೇಜ್ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇವು ಬಜೆಟ್ ಸ್ನೇಹಿ ಬೆಲೆ, ನವೀನ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಆಯ್ಕೆಗಳನ್ನು ಒದಗಿಸುತ್ತಿದ್ದು, ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ಹೊಸ ಆಯ್ಕೆಗಳನ್ನು ಹುಡುಕುತ್ತಿರುವವರಿಗೆ ಶ್ರೇಷ್ಠ ಪರಿಹಾರವಾಗಿವೆ.
ಟಾಟಾ ಮೊದಲ ಬೈಕ್ ನ ಪರಿಚಯ
ಟಾಟಾ ಮೋಟರ್ಸ್ 2025ರಲ್ಲಿ Classic 125 ಎಂಬ ಹೆಸರಿನಲ್ಲಿ ತನ್ನ ಮೊದಲ ಬೈಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಹಾಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡೂ ಆಯ್ಕೆಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿರಲಿದೆಯಂತೆ. ಈಗಾಗಲೇ ಈ ಕಂಪನಿಯ ಟಾಟಾ ನೆಕ್ಸಾನ್ EV ಮತ್ತು ಟಿಯಾಗೋ EV ಯಶಸ್ಸಿನ ನಂತರ, ಎಲೆಕ್ಟ್ರಿಕ್ ಬೈಕ್ ಸೆಗ್ಮೆಂಟ್ ಗೆ ಪ್ರವೇಶಿಸುತ್ತಿದೆ. ಜೊತೆಗೆ ಈ ಬೈಕ್ ಕೈಗೆಟುಕುವ ಬೆಲೆ, ಬೋಲ್ಡ್ ಲುಕ್ ಮತ್ತು ಹೈ ಮೈಲೇಜ್ ಹೊಂದಿರಲಿದೆ.
ಈ ಬೈಕ್ ನ ವೈಶಿಷ್ಟ್ಯಗಳು
- ಪೆಟ್ರೋಲ್ ಮಾದರಿಯಲ್ಲಿ 125cc 4-ಸ್ಟ್ರೋಕ್ ಎಂಜಿನ್ ನಿರೀಕ್ಷಿಸಲಾಗಿದೆ.
- ಎಲೆಕ್ಟ್ರಿಕ್ ಮಾದರಿಯಲ್ಲಿ 4kW BLDC ಮೋಟರ್ ಮತ್ತು 280KM ರೇಂಜ್ ಲಭ್ಯವಿರಬಹುದು.
- ಫಾಸ್ಟ್ ಚಾರ್ಜಿಂಗ್, ಡಿಜಿಟಲ್ ಡ್ಯಾಶ್, LED ಲೈಟಿಂಗ್ ಮುಂತಾದ ವೈಶಿಷ್ಟ್ಯಗಳು ಇರಬಹುದು.
- ಟ್ಯೂಬ್‌ಲೆಸ್ ಟೈರ್, ಅಲಾಯ್ ವೀಲ್, ಮತ್ತು USB ಚಾರ್ಜಿಂಗ್ ಪೋರ್ಟ್ ಕೂಡ ನಿರೀಕ್ಷಿಸಲಾಗಿದೆ.
ಮೈಲೇಜ್ ಮತ್ತು ಕಾರ್ಯಕ್ಷಮತೆ
- ಪೆಟ್ರೋಲ್ ಬೈಕ್ 90 kmpl ಮೈಲೇಜ್ ನೀಡಬಹುದು ಎಂಬ ಊಹೆಗಳು ಹರಡಿವೆ.
- ಎಲೆಕ್ಟ್ರಿಕ್ ಮಾದರಿ ಒಂದು ಚಾರ್ಜ್‌ಗೆ 280KM ಪ್ರಯಾಣ ಸಾಧ್ಯವಿದೆ.
- ಸಿಟಿ ಮತ್ತು ಹೈವೇ ಎರಡಕ್ಕೂ ಸೂಕ್ತವಾದ ಕಾರ್ಯಕ್ಷಮತೆ.
- ಹಗುರ ತೂಕ ಮತ್ತು ಉತ್ತಮ ಟಾರ್ಕ್ ನಿಂದ ವೇಗದ ಚಾಲನೆ ಸಾಧ್ಯ.
ಬೆಲೆ ಮತ್ತು ಲಭ್ಯತೆ
- Classic 125 ಪೆಟ್ರೋಲ್ ಮಾದರಿಯ ಅಂದಾಜು ಬೆಲೆ ₹55,999 ಎಂದು OLX ವರದಿ ಮಾಡಿದೆ.ಎ
- ಲೆಕ್ಟ್ರಿಕ್ ಮಾದರಿಯ ಬೆಲೆ ₹85,000–₹1.10 ಲಕ್ಷ ನಡುವೆ ಇರಬಹುದು.
- 2025 ಡಿಸೆಂಬರ್ ಅಥವಾ 2026 ಆರಂಭದಲ್ಲಿ ಲಾಂಚ್ ನಿರೀಕ್ಷಿಸಲಾಗಿದೆ.
ಟಾಟಾ ಬೈಕ್ ಕೈಗೆಟುಕುವ ಬೆಲೆ, ಹೈ ಮೈಲೇಜ್, ಮತ್ತು ಇಂಧನ ದಕ್ಷತೆ ಹೊಂದಿರುವ ಮೂಲಕ ಬಜೆಟ್-ಬಳಕೆದಾರರಿಗೆ ಸೂಕ್ತ.125cc ಪೆಟ್ರೋಲ್ ಮಾದರಿ ವಿದ್ಯಾರ್ಥಿಗಳು ಮತ್ತು ದಿನನಿತ್ಯದ ಪ್ರಯಾಣಿಕರಿಗೆ ಉಪಯುಕ್ತ ಎನ್ನಬಹುದು. ಎಲೆಕ್ಟ್ರಿಕ್ ಮಾದರಿ ಪರಿಸರ ಸ್ನೇಹಿ ಮತ್ತು ಮುಂದಿನ ತಲೆಮಾರಿಗೆ ತಕ್ಕಂತೆ ವಿನ್ಯಾಸಗೊಂಡಿದೆ. ಟಾಟಾ ಮೋಟರ್ಸ್ ಈ ಮೂಲಕ ಟೂ-ವೀಲರ್ ಸೆಗ್ಮೆಂಟ್ ಗೆ ಶಕ್ತಿಶಾಲಿ ಪ್ರವೇಶ ಮಾಡುತ್ತಿದೆ. ಈ ಹೊಸ ವಿನ್ಯಾಸದ ಬಗ್ಗೆ ನಿಮ್ಮ್ ಅನಿಸಿಕೆ ತಿಳಿಸಿ.