Mar 11, 2026 Languages : ಕನ್ನಡ | English

ಒಮ್ಮೆ ಚಾರ್ಜ್ ಮಾಡಿದರೆ 543 ಕಿ.ಮೀ ಮೈಲೇಜ್ - ಟಾಟಾ, ಹುಂಡೈ ಇವಿಗಳಿಗೆ ಮಾರುತಿ ಟಕ್ಕರ್!!

ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ Maruti Suzuki ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ e-Vitara ಅನ್ನು ಭರ್ಜರಿಯಾಗಿ ಅನಾವರಣ ಮಾಡಿದೆ. ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬಿಡುಗಡೆ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಕಾರಿನ ಆರಂಭಿಕ ಬೆಲೆ ರೂ. 10.99 ಲಕ್ಷ (ಪರಿಚಯಾತ್ಮಕ BaaS ಮಾದರಿ) ಎಂದು ಕಂಪನಿ ಘೋಷಿಸಿದೆ. ಟಾಪ್ ಮಾದರಿಯು ಒಂದೇ ಚಾರ್ಜ್‌ಗೆ ಗರಿಷ್ಠ 543 ಕಿಲೋಮೀಟರ್‌ಗಳವರೆಗೆ ಸಂಚರಿಸಬಹುದು ಎಂದು ಹೇಳಲಾಗಿದೆ.

ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV e-Vitara ಅನ್ನು ಬಿಡುಗಡೆ ಮಾಡಿದೆ. BaaS ಮಾದರಿಯಲ್ಲಿ ಆರಂಭಿಕ ಬೆಲೆ ₹10.99 ಲಕ್ಷ!!
ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV e-Vitara ಅನ್ನು ಬಿಡುಗಡೆ ಮಾಡಿದೆ. BaaS ಮಾದರಿಯಲ್ಲಿ ಆರಂಭಿಕ ಬೆಲೆ ₹10.99 ಲಕ್ಷ!!

BaaS ಮಾದರಿ ಎಂದರೇನು?

BaaS (Battery-as-a-Service) ಮಾದರಿಯಲ್ಲಿ ಕಾರಿನ ಬೆಲೆ ಮತ್ತು ಬ್ಯಾಟರಿಯ ಬೆಲೆ ಬೇರೆಬೇರೆ. ಗ್ರಾಹಕರು ಬ್ಯಾಟರಿಯ ಸಂಪೂರ್ಣ ಮೊತ್ತವನ್ನು ಒಂದೇ ಬಾರಿ ಪಾವತಿಸುವ ಅಗತ್ಯವಿಲ್ಲ. ಬದಲಿಗೆ, ಪ್ರತಿ ಕಿಲೋಮೀಟರ್‌ಗೆ ರೂ. 3.99 ದರದಲ್ಲಿ ಪಾವತಿಸಬಹುದು. ಇದರಿಂದ ಆರಂಭಿಕ ವೆಚ್ಚ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಜನರಿಗೆ ಇವಿ ಖರೀದಿ ಸುಲಭವಾಗುತ್ತದೆ.

ಬುಕ್ಕಿಂಗ್ ಮತ್ತು ಸೌಲಭ್ಯಗಳು

ಈ ಕಾರು NEXA ಶೋ ರೂಂಗಳಲ್ಲಿ ಲಭ್ಯವಿದೆ. ಗ್ರಾಹಕರು ಟೆಸ್ಟ್ ಡ್ರೈವ್ ಮಾಡಿ ಕಾರನ್ನು ಬುಕ್ ಮಾಡಬಹುದು. ಬುಕ್ಕಿಂಗ್ ಮೊತ್ತ ರೂ. 21,000 ನಿಗದಿಯಾಗಿದೆ. ಕೆಲ ಆಫರ್‌ಗಳ ಅಡಿಯಲ್ಲಿ ಹೋಮ್ ಚಾರ್ಜರ್ ಮತ್ತು ಇನ್‌ಸ್ಟಾಲೇಶನ್ ಸೌಲಭ್ಯವೂ ಸಿಗಲಿದೆ. ಆದರೆ ರಸ್ತೆ ತೆರಿಗೆ, ವಿಮೆ ಮುಂತಾದ ಶುಲ್ಕಗಳು BaaS ಬೆಲೆಯಲ್ಲಿ ಸೇರಿಲ್ಲ.

ವಿನ್ಯಾಸ ಮತ್ತು ಆಯಾಮಗಳು

e-Vitara ಆಧುನಿಕ ಮತ್ತು ಕ್ಲೀನ್ ಲುಕ್ ಹೊಂದಿದೆ. ಉದ್ದ 4,275 ಮಿಮೀ, ಅಗಲ 1,800 ಮಿಮೀ ಮತ್ತು ಎತ್ತರ 1,640 ಮಿಮೀ. 2,700 ಮಿಮೀ ವೀಲ್‌ಬೇಸ್ ಇರುವುದರಿಂದ ಒಳಗೆ ಸಾಕಷ್ಟು ಜಾಗ ಸಿಗುತ್ತದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸ್ಪರ್ಧಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು Hyundai Creta EV, Tata Curvv EV ಮತ್ತು MG Windsor EV ಗಳಿಗೆ ಪೈಪೋಟಿ ನೀಡಲಿದೆ.

ಒಳಾಂಗಣ ವೈಶಿಷ್ಟ್ಯಗಳು

ಇದು ಮಾರುತಿಯ ಅತ್ಯಂತ ಪ್ರೀಮಿಯಂ ಕಾರುಗಳಲ್ಲಿ ಒಂದಾಗಿದೆ. 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಇದೆ. ಸಾಫ್ಟ್ ಟಚ್ ಮೆಟೀರಿಯಲ್, ಡಬಲ್ ಟೋನ್ ಇಂಟೀರಿಯರ್, ಮಲ್ಟಿ ಕಲರ್ ಆಂಬಿಯಂಟ್ ಲೈಟಿಂಗ್ ಒಳಗೊಂಡಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್, 10-ವೇ ಪವರ್ ಅಡ್ಜಸ್ಟ್ ಚಾಲಕ ಸೀಟ್, 40:20:40 ಸ್ಪ್ಲಿಟ್ ಹಿಂಭಾಗದ ಸೀಟ್ ವ್ಯವಸ್ಥೆ ಇದೆ. ಪನೋರಮಿಕ್ ಗ್ಲಾಸ್ ಸನ್‌ರೂಫ್ ಮತ್ತು ಹರ್ಮನ್ ಟ್ಯೂನ್ ಆಡಿಯೋ ಸಿಸ್ಟಮ್ ಕೂಡ ಸಿಗುತ್ತದೆ.

ಬ್ಯಾಟರಿ ಮತ್ತು ಕಾರ್ಯಕ್ಷಮತೆ

ಇದು 3-ಇನ್-1 ಎಲೆಕ್ಟ್ರಿಕ್ ಡ್ರೈವ್ ಸಿಸ್ಟಮ್ ಹೊಂದಿದೆ. 49kWh ಬ್ಯಾಟರಿ ಮಾದರಿ 144hp ಪವರ್ ನೀಡುತ್ತದೆ. 61kWh ಬ್ಯಾಟರಿ ಮಾದರಿ 174bhp ಪವರ್ ನೀಡುತ್ತದೆ. ಟಾಪ್ ಮಾದರಿ 543 ಕಿಮೀ ವ್ಯಾಪ್ತಿ ನೀಡುತ್ತದೆ. ವಿದೇಶಗಳಲ್ಲಿ ಆಲ್ ವೀಲ್ ಡ್ರೈವ್ ಆವೃತ್ತಿಯೂ ಲಭ್ಯವಿದೆ.

ಸುರಕ್ಷತೆ!!

7 ಏರ್‌ಬ್ಯಾಗ್, ಡಿಸ್ಕ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇ-ಕಾಲ್, ಮತ್ತು ಲೆವೆಲ್-2 ADAS ವೈಶಿಷ್ಟ್ಯಗಳು ಸೇರಿವೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

Latest News