Mar 11, 2026 Languages : ಕನ್ನಡ | English

ಪೆಟ್ರೋಲ್ ಬೆಲೆ ಏರಿಕೆಗೆ ತಲೆ ಬಿಸಿಯಾಗಿದೆಯಾ - ಟೆನ್ಷನ್ ಬೇಡ, ಬರೀ 7-8 ಲಕ್ಷಕ್ಕೆ ಈ ಕಾರುಗಳು ಸಿಗಲಿವೆ ನೋಡಿ!!

ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಸಾಮಾನ್ಯ ಜನರ ಜೇಬು ಖಾಲಿಯಾಗುತ್ತಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ತಮ್ಮ ದೈನಂದಿನ ಓಡಾಟಕ್ಕಾಗಿ ವಾಹನ ಬಳಸುವುದು ಈಗ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಇತ್ತೀಚಿನ ದಿನಗಳಲ್ಲಿ ಕಂಡುಕೊಂಡಿರುವ ಅತ್ಯುತ್ತಮ ಪರಿಹಾರವೆಂದರೆ ಅದು ಎಲೆಕ್ಟ್ರಿಕ್ ಕಾರುಗಳು. ಎಲೆಕ್ಟ್ರಿಕ್ ವಾಹನಗಳು ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಕಾಲ ಈಗ ಬದಲಾಗಿದೆ. ಕೇವಲ 7 ರಿಂದ 8 ಲಕ್ಷ ರೂಪಾಯಿಗಳ ಬಜೆಟ್‌ನಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಹೊಂದಿಕೆಯಾಗುವಂತಹ ಫ್ಯಾಮಿಲಿ ಕಾರುಗಳು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವುದು ತಂತ್ರಜ್ಞಾನದ ಮ್ಯಾಜಿಕ್ ಆಗಿದೆ.

ಪೆಟ್ರೋಲ್ ಬೆಲೆ ಏರಿಕೆಗೆ ಪರಿಹಾರ – 7 ಲಕ್ಷದಲ್ಲಿ ಇವಿ ಕಾರುಗಳು!!
ಪೆಟ್ರೋಲ್ ಬೆಲೆ ಏರಿಕೆಗೆ ಪರಿಹಾರ – 7 ಲಕ್ಷದಲ್ಲಿ ಇವಿ ಕಾರುಗಳು!!

ಪೆಟ್ರೋಲ್ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ಎಲೆಕ್ಟ್ರಿಕ್ ಕಾರುಗಳೇ ಉತ್ತಮ ದಾರಿ. ನಿಮ್ಮ ಹೊಸ ಕಾರ್ ಖರೀದಿಯ ನಿರ್ಧಾರ ಜಾಣತನದಿಂದ ಕೂಡಿರಲಿ; ಭಾರತದಲ್ಲಿ ಸಿಗುವ ಐದು ಅತಿ ಅಗ್ಗದ ಮತ್ತು ಜನಪ್ರಿಯ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಇಲ್ಲಿ ತಿಳಿಯಿರಿ. 

ಬಜೆಟ್ ಬೆಲೆಯ ಟಾಪ್ ಎಲೆಕ್ಟ್ರಿಕ್ ಕಾರುಗಳು

MG Comet EV - ಅತ್ಯಂತ ಅಗ್ಗದ ದರದಲ್ಲಿ ಹೈಟೆಕ್ ಕಾರ್ ಬೇಕೆನ್ನುವವರಿಗೆ ಎಂಜಿ ಕಾಮೆಟ್ ಇವಿ ಹೇಳಿ ಮಾಡಿಸಿದಂತಿದೆ. ಕೇವಲ ₹7.50 ಲಕ್ಷದ ಆರಂಭಿಕ ಬೆಲೆಯಲ್ಲಿ ಸಿಗುವ ಈ ಕಾರ್, ಸಿಟಿ ಸಂಚಾರಕ್ಕೆ ಹೆಚ್ಚು ಸೂಕ್ತ. ಇದರ ಬ್ಯಾಟರಿ ಸಾಮರ್ಥ್ಯವು 230 ಕಿ.ಮೀ ವರೆಗೆ ಚಲಿಸುವ ಶಕ್ತಿ ನೀಡುತ್ತದೆ. ಚಿಕ್ಕದಾದ ಆಕರ್ಷಕ ವಿನ್ಯಾಸದೊಂದಿಗೆ ಸ್ಮಾರ್ಟ್ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ. 

Tata Tiago EV - ಸಾಮಾನ್ಯ ಕುಟುಂಬಗಳಿಗೆ ಇದು ಮೊದಲ ಆಯ್ಕೆಯಾಗಿದೆ. ಟಾಟಾ ಕಂಪನಿಯ ಈ ಹ್ಯಾಚ್‌ಬ್ಯಾಕ್ ಕಾರ್ ಸುರಕ್ಷತೆ ಮತ್ತು ಮೈಲೇಜ್ ಎರಡರಲ್ಲೂ ಮುಂಚೂಣಿಯಲ್ಲಿದೆ. ಇದರ ಬೆಲೆ ₹7.99 ಲಕ್ಷದಿಂದ ಆರಂಭವಾಗಲಿದ್ದು, 315 ಕಿ.ಮೀ ವರೆಗೆ ರೇಂಜ್ ನೀಡುತ್ತದೆ.

Tata Punch EV - ಸ್ವಲ್ಪ ಎತ್ತರವಾದ ಎಸ್‌ಯುವಿ ಲುಕ್ ಇಷ್ಟಪಡುವವರಿಗೆ ಪಂಚ್ ಇವಿ ಸೂಕ್ತವಾಗಿದೆ. ಹೊಸದಾಗಿ ಪರಿಚಯಿಸಲಾದ (ಬ್ಯಾಟರಿ ಆಸ್ ಎ ಸರ್ವಿಸ್) ಯೋಜನೆಯಡಿ, ಬ್ಯಾಟರಿಯನ್ನು ಹೊರತುಪಡಿಸಿ ಕೇವಲ ಕಾರಿನ ಬೆಲೆ ₹6.49 ಲಕ್ಷದ ಆಸುಪಾಸಿನಲ್ಲಿ ದೊರೆಯುತ್ತದೆ. ಇದು ಗರಿಷ್ಠ 468 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Tata Tigor ಮತ್ತು Nexon EV - ನೀವು ಸ್ವಲ್ಪ ಹೆಚ್ಚು ಪ್ರೀಮಿಯಂ ಅನುಭವ ಬಯಸಿದರೆ ಟಾಟಾ ಟಿಗೋರ್ ಇವಿ, ನೆಕ್ಸಾನ್ ಇವಿ ಉತ್ತಮ ಆಯ್ಕೆಗಳು. ಇವುಗಳ ಆರಂಭಿಕ ಬೆಲೆ ಸುಮಾರು 12.49 ಲಕ್ಷಗಳಾಗಿದ್ದು, ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ ಮತ್ತು ವೇಗ ಹೊಂದಿವೆ.

ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು

ಎಲೆಕ್ಟ್ರಿಕ್ ಕಾರ್ ಖರೀದಿಸುವ ಮುನ್ನ ಕೆಲವು ಮುಖ್ಯ ಸಂಗತಿಗಳನ್ನ ಗಮನಿಸುವುದು ಅವಶ್ಯಕ. ಮೊದಲನೆಯದಾಗಿ, ನಿಮ್ಮ ಮನೆಯಲ್ಲಿ ಕಾರನ್ನ ಚಾರ್ಜ್ ಮಾಡಲು ಸರಿಯಾದ ಪಾಯಿಂಟ್ ಮತ್ತು ಜಾಗ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ದಿನನಿತ್ಯದ ಓಡಾಟ ಸುಮಾರು 50 ರಿಂದ 60 ಕಿ.ಮೀ ಇದ್ದರೆ ಮಾತ್ರ ಇ ಕಾರ್ ನಿಮಗೆ ಹೆಚ್ಚು ಲಾಭದಾಯಕವಾಗಿ ಪರಿಣಮಿಸುತ್ತದೆ. ದೂರದ ಪ್ರಯಾಣ ಬೆಳೆಸುವವರು ಹಾದಿಯಲ್ಲಿ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳ ಬಗ್ಗೆ ಮಾಹಿತಿ ಇಟ್ಟುಕೊಳ್ಳುವುದು ಒಳ್ಳೆದು.

ಹೊಸದಾಗಿ ಕಾರ್ ಖರೀದಿಸುವವರ ಮನಸ್ಸಿನಲ್ಲಿ ಬ್ಯಾಟರಿ ಬಾಳಿಕೆಯ ಬಗ್ಗೆ ಅನುಮಾನವಿರುವುದು ಸಹಜ. ಕಂಪನಿಗಳು ಸಾಮಾನ್ಯವಾಗಿ 8 ವರ್ಷಗಳವರೆಗೆ ಬ್ಯಾಟರಿ ವಾರಂಟಿ ನೀಡುವುದರಿಂದ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇನ್ನು ಮಳೆಯ ಸಮಯದಲ್ಲಿ ಇ-ಕಾರ್ ಓಡಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗೆ ಉತ್ತರ ಖಂಡಿತ ಸುರಕ್ಷಿತ. ಈ ಕಾರುಗಳ ಬ್ಯಾಟರಿಗಳು ವಾಟರ್ ಪ್ರೂಫ್ (IP67 ರೇಟಿಂಗ್) ಆಗಿರುವುದರಿಂದ ನೀರಿನ ಗುಂಡಿಗಳಲ್ಲಿ ಚಲಿಸಿದರೂ ಯಾವುದೇ ಅಪಾಯವಿರುವುದಿಲ್ಲ.

ಒಟ್ಟಾರೆಯಾಗಿ ಹೇಳಬೇಕು ಅಂದರೆ, ಭವಿಷ್ಯದ ದೃಷ್ಟಿಯಿಂದ ಎಲೆಕ್ಟ್ರಿಕ್ ಕಾರುಗಳು ಕೇವಲ ಹಣ ಉಳಿಸುವುದು ಮಾತ್ರವಲ್ಲದೆ, ವಾಯು ಮಾಲಿನ್ಯ ತಡೆಗಟ್ಟಲು ಸಹಾಯ ಮಾಡುತ್ತವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಮೇಲೆ ತಿಳಿಸಿದ ಕಾರುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.