Apr 7, 2026 Languages : ಕನ್ನಡ | English

ಇಂದಿನ ರಾಶಿ ಭವಿಷ್ಯ - ಯಾವ ರಾಶಿಯವರಿಗೆ ಗಣೇಶನ ಕೃಪೆ? ನಿಮ್ಮ ಅದೃಷ್ಟದ ಸಂಖ್ಯೆ ಇಲ್ಲಿದೆ!!

ಇವತ್ತು ನಿಮ್ಮ ಅದೃಷ್ಟ ಹೇಗಿದೆ? ಕೈ ಹಾಕಿದ ಕೆಲಸಗಳೆಲ್ಲಾ ಈಜಿಯಾಗಿ ಮುಗಿಯುತ್ತಾ ಅಥವಾ ಸ್ವಲ್ಪ ಕಷ್ಟ ಪಡಬೇಕಾ? ಪ್ರಖ್ಯಾತ ಜ್ಯೋತಿಷಿ ಚಿರಾಗ್ ದಾರುವಾಲಾ ಅವರು ಇಂದಿನ (ಏಪ್ರಿಲ್ 7) ದಿನ ಭವಿಷ್ಯ ಹೇಗಿದೆ ಅಂತ ತಿಳಿಸಿದ್ದಾರೆ. ದ್ವಾದಶ ರಾಶಿಗಳ ಇಂದಿನ ಫಲ ಇಲ್ಲಿದೆ ನೋಡಿ.

ಏಪ್ರಿಲ್ 7ರ ದಿನ ಭವಿಷ್ಯ
ಏಪ್ರಿಲ್ 7ರ ದಿನ ಭವಿಷ್ಯ

ಮೇಷ ರಾಶಿ: ಫುಲ್ ಜೋಶ್!

ಇವತ್ತು ನೀವು ಸಖತ್ ಎನರ್ಜಿಟಿಕ್ ಆಗಿ ಇರ್ತೀರಾ. ಅಂದುಕೊಂಡ ಕೆಲಸಗಳನ್ನ ಮಾಡಿ ಮುಗಿಸೋಕೆ ಗಣೇಶನ ಕೃಪೆ ನಿಮ್ಮ ಮೇಲಿದೆ. ಆಫೀಸ್‌ನಲ್ಲಿ ನಿಮ್ಮ ಐಡಿಯಾಗಳಿಗೆ ಬೆಲೆ ಸಿಗುತ್ತೆ. ಹಳೆ ಫ್ರೆಂಡ್ಸ್ ಸಿಕ್ಕಿ ಸ್ವಲ್ಪ ಹರಟೆ ಹೊಡೆಯೋ ಚಾನ್ಸ್ ಇದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.

ಲಕ್ಕಿ ನಂಬರ್: 5, ಲಕ್ಕಿ ಕಲರ್: ಕಪ್ಪು.

ವೃಷಭ ರಾಶಿ: ಬ್ಯಾಲೆನ್ಸ್ ಮಾಡಿ

ಇವತ್ತು ಪರ್ಸನಲ್ ಲೈಫ್ ಮತ್ತೆ ಆಫೀಸ್ ಕೆಲಸ ಎರಡನ್ನೂ ಮ್ಯಾನೇಜ್ ಮಾಡೋದ್ರಲ್ಲೇ ಟೈಮ್ ಹೋಗುತ್ತೆ. ಜನರ ಜೊತೆ ಚೆನ್ನಾಗಿ ಮಾತಾಡಿ ಕೆಲಸ ಗಿಟ್ಟಿಸಿಕೊಳ್ಳುವಿರಿ. ದುಡ್ಡಿನ ವಿಚಾರದಲ್ಲಿ ಗುಡ್ ನ್ಯೂಸ್ ಸಿಗಬಹುದು, ಆದ್ರೆ ಖರ್ಚು ಮಾಡುವಾಗ ಸ್ವಲ್ಪ ಯೋಚನೆ ಮಾಡಿ.

ಲಕ್ಕಿ ನಂಬರ್: 3, ಲಕ್ಕಿ ಕಲರ್: ಹಸಿರು.

ಮಿಥುನ ರಾಶಿ: ಐಡಿಯಾಗಳ ಸಂತೆ
ನಿಮ್ಮ ಮಾತು ಇವತ್ತು ಮ್ಯಾಜಿಕ್ ಮಾಡುತ್ತೆ! ಹೊಸ ಐಡಿಯಾಗಳು ತಲೆಯಲ್ಲಿ ಓಡ್ತಿರುತ್ತವೆ. ಫ್ಯಾಮಿಲಿ ಸಪೋರ್ಟ್ ಇರೋದ್ರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಆದ್ರೆ ಅಡ್ಡಾದಿಡ್ಡಿ ಖರ್ಚು ಮಾಡಬೇಡಿ, ಬಜೆಟ್ ಹಾಕೊಂಡು ಪ್ಲಾನ್ ಮಾಡಿ.

ಲಕ್ಕಿ ನಂಬರ್: 7, ಲಕ್ಕಿ ಕಲರ್: ಹಳದಿ.

ಕರ್ಕಾಟಕ ರಾಶಿ: ಕ್ರಿಯೇಟಿವ್ ದಿನ

ಹೊಸ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರುತ್ತವೆ. ಕ್ರಿಯೇಟಿವ್ ಕೆಲಸಗಳಲ್ಲಿ ಇರೋರಿಗೆ ಇವತ್ತು ಒಳ್ಳೆ ಟೈಮ್. ಮನೆಯವರ ಜೊತೆ ಸಂಜೆ ಎಂಜಾಯ್ ಮಾಡ್ತೀರಾ. ಇನ್ವೆಸ್ಟ್‌ಮೆಂಟ್ ಮಾಡುವ ಮುನ್ನ ಪೂರ್ತಿ ಡಿಟೇಲ್ಸ್ ಚೆಕ್ ಮಾಡಿಕೊಳ್ಳಿ.

ಲಕ್ಕಿ ನಂಬರ್: 4, ಲಕ್ಕಿ ಕಲರ್: ಗುಲಾಬಿ.

ಸಿಂಹ ರಾಶಿ: ಸೋಶಿಯಲ್ ಲೈಫ್‌

ಇವತ್ತು ನೀವು ಏನು ಅಂದುಕೊಳ್ತೀರೋ ಅದನ್ನ ಕ್ಲಿಯರ್ ಆಗಿ ಹೇಳಿಬಿಡಿ. ಫ್ರೆಂಡ್ಸ್ ಜೊತೆ ಹೊರಗೆ ಹೋಗೋ ಪ್ಲಾನ್ ಆಗಬಹುದು. ಆದ್ರೆ ಊಟ-ತಿಂಡಿ ವಿಚಾರದಲ್ಲಿ ಹುಷಾರಾಗಿರಿ, ಹೊರಗಿನ ಫುಡ್ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ.

ಲಕ್ಕಿ ನಂಬರ್: 6, ಲಕ್ಕಿ ಕಲರ್: ಕಿತ್ತಳೆ.

ಕನ್ಯಾ ರಾಶಿ: ಹಾರ್ಡ್ ವರ್ಕ್ ಮೆಚ್ಚಲೇಬೇಕು

ನೀವು ಪಟ್ಟಿರೋ ಕಷ್ಟಕ್ಕೆ ಇವತ್ತು ಫಲ ಸಿಗೋ ಕಾಲ ಹತ್ತಿರ ಬಂದಿದೆ. ಫ್ಯೂಚರ್ ಪ್ಲಾನ್ ಮಾಡೋಕೆ ಇದು ಬೆಸ್ಟ್ ದಿನ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಏನಾದ್ರೂ ಹೊಸದಾಗಿ ಕಲಿಯೋ ಆಸೆ ಇದ್ರೆ ಇವತ್ತೇ ಶುರು ಮಾಡಿ.

ಲಕ್ಕಿ ನಂಬರ್: 10, ಲಕ್ಕಿ ಕಲರ್: ಮೆರೂನ್.

ತುಲಾ ರಾಶಿ: ಲವ್ ಈಸ್ ಇನ್ ದಿ ಏರ್!

ಪಾರ್ಟ್ನರ್ ಜೊತೆ ಇರೋ ಗೊಂದಲಗಳು ಇವತ್ತು ಬಗೆಹರಿಯುತ್ತವೆ. ಆಫೀಸ್‌ನಲ್ಲಿ ಕೊಲೀಗ್ಸ್ ನಿಮಗೆ ಹೆಲ್ಪ್ ಮಾಡ್ತಾರೆ. ನಿಮ್ಮ ಚಾರ್ಮಿಂಗ್ ಸ್ವಭಾವದಿಂದ ಎಲ್ಲರನ್ನೂ ಇಂಪ್ರೆಸ್ ಮಾಡ್ತೀರಾ. ನಿಮ್ಮ ಗುರಿ ಮೇಲೆ ಫೋಕಸ್ ಇರಲಿ.

ಲಕ್ಕಿ ನಂಬರ್: 12, ಲಕ್ಕಿ ಕಲರ್: ಆಕಾಶ ನೀಲಿ.

ವೃಶ್ಚಿಕ ರಾಶಿ: ಸ್ವಲ್ಪ ಶಾಂತವಾಗಿರಿ

ಇವತ್ತು ನಿಮಗೆ ಒಂಟಿಯಾಗಿ ಇರೋಕೆ ಇಷ್ಟ ಆಗಬಹುದು. ಕೆಲಸದ ಬಗ್ಗೆ ಹೊಸ ಪ್ಲಾನ್ ಮಾಡಿಕೊಳ್ಳೋಕೆ ಇದು ಒಳ್ಳೆ ಸಮಯ. ದೊಡ್ಡ ಹೂಡಿಕೆ ಮಾಡೋ ಮುನ್ನ ಮನೆಯವರ ಅಥವಾ ಎಕ್ಸ್‌ಪರ್ಟ್ಸ್ ಸಲಹೆ ತಗೊಳ್ಳಿ.

ಲಕ್ಕಿ ನಂಬರ್: 1, ಲಕ್ಕಿ ಕಲರ್: ಕಡು ಹಸಿರು.

ಧನು ರಾಶಿ: ಕಾನ್ಫಿಡೆನ್ಸ್ ಜಾಸ್ತಿ!

ಇವತ್ತು ನೀವು ಫುಲ್ ಕಾನ್ಫಿಡೆಂಟ್ ಆಗಿ ಇರ್ತೀರಾ. ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತೀರಾ. ಆಫೀಸ್‌ನಲ್ಲಿ ದೊಡ್ಡ ಜವಾಬ್ದಾರಿ ಸಿಗಬಹುದು. ಹಳೆ ಕಿರಿಕ್ ಹೋಗಿ ಎಲ್ಲರ ಜೊತೆ ರಿಲೇಷನ್ ಚೆನ್ನಾಗಿ ಆಗುತ್ತೆ.

ಲಕ್ಕಿ ನಂಬರ್: 8, ಲಕ್ಕಿ ಕಲರ್: ಕಂದು.

ಮಕರ ರಾಶಿ: ಎಕ್ಸ್ ಪೀರಿಯನ್ಸ್ ಇಂಪಾರ್ಟೆಂಟ್

ಇವತ್ತು ನಿಮಗೆ ಕೆಲವು ಹೊಸ ಅನುಭವಗಳು ಆಗ್ತವೆ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತೆ. ಫ್ಯಾಮಿಲಿ ಜೊತೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ. ಅತಿಯಾದ ಖರ್ಚು ಬೇಡ, ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.

ಲಕ್ಕಿ ನಂಬರ್: 9, ಲಕ್ಕಿ ಕಲರ್: ನೀಲಿ.

ಕುಂಭ ರಾಶಿ: ಹೊಸ ಚಾನ್ಸ್

ಕೆಲಸದಲ್ಲಿ ಹೊಸ ಪ್ರಾಜೆಕ್ಟ್ ಶುರುವಾಗಬಹುದು. ನಿಮ್ಮ ಕ್ರಿಯೇಟಿವಿಟಿ ತೋರಿಸೋಕೆ ಇದು ಸರಿಯಾದ ಟೈಮ್. ಮನಸ್ಸಿನ ಭಾವನೆಗಳನ್ನ ಆಪ್ತರ ಜೊತೆ ಹಂಚಿಕೊಳ್ಳಿ, ಹಗುರ ಅನ್ಸುತ್ತೆ. ಮನೆಯಲ್ಲಿ ಹ್ಯಾಪಿ ಮೂಡ್ ಇರುತ್ತೆ.

ಲಕ್ಕಿ ನಂಬರ್: 11, ಲಕ್ಕಿ ಕಲರ್: ನೇರಳೆ.

ಮೀನ ರಾಶಿ: ಪಾಸಿಟಿವ್ ವೈಬ್ಸ್

ಇವತ್ತು ಮೈಂಡ್ ಫುಲ್ ಪಾಸಿಟಿವ್ ಆಗಿ ಇರುತ್ತೆ. ಹಳೆಯ ಯಾವುದೋ ನಿಂತು ಹೋದ ಕೆಲಸಕ್ಕೆ ಮತ್ತೆ ಚಾಲನೆ ಸಿಗುತ್ತೆ. ಮಾನಸಿಕ ಶಾಂತಿಗಾಗಿ ಸ್ವಲ್ಪ ಯೋಗ ಅಥವಾ ಧ್ಯಾನ ಮಾಡಿ. ಇಂಪಾರ್ಟೆಂಟ್ ನಿರ್ಧಾರ ತಗೊಳ್ಳೋಕೆ ಇದು ಒಳ್ಳೆ ದಿನ.

ಲಕ್ಕಿ ನಂಬರ್: 2, ಲಕ್ಕಿ ಕಲರ್: ಕೆಂಪು.

Latest News