ಇಂದಿನ ಪಂಚಾಂಗದ ಪ್ರಕಾರ ಶಾಲಿವಾಹನ ಶಕ 1949, ಉತ್ತರಾಯಣದ ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿ. ಇಂದಿನ ದಿನ ಹಲವು ರಾಶಿಗಳಿಗೆ ಏರಿಳಿತಗಳಿಂದ ಕೂಡಿದೆ. ಕೆಲವರಿಗೆ ಚಾಣಾಕ್ಷತನದಿಂದ ಲಾಭವಾದರೆ, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯ ಅಥವಾ ಕೆಲಸದ ಒತ್ತಡದ ಭೀತಿ ಇದೆ. ಹಾಗಾದರೆ ನಿಮ್ಮ ರಾಶಿ ಫಲ ಹೇಗಿದೆ ಎಂದು ನೋಡೋಣ ಬನ್ನಿ.
ಮೇಷ ಹಾಗೂ ವೃಷಭ ರಾಶಿ
ಮೇಷ ರಾಶಿಯವರಿಗೆ ಇಂದು ಕುಟುಂಬದಿಂದ ಸಾಕಷ್ಟು ಸಕಾರಾತ್ಮಕ ಬೆಂಬಲ ಸಿಗಲಿದೆ. ಮನೆಯಲ್ಲಿನ ಕೆಲಸದ ಒತ್ತಡ ನಿಮ್ಮನ್ನು ಸ್ವಲ್ಪ ಸುಸ್ತಾಗಿಸಬಹುದು, ಹಾಗಾಗಿ ಆರೋಗ್ಯದ ಕಡೆ ಗಮನವಿರಲಿ. ಅನಿರೀಕ್ಷಿತ ಸುದ್ದಿಯೊಂದು ನಿಮ್ಮನ್ನು ಅಚ್ಚರಿಗೊಳಿಸಬಹುದು. ನೀವು ಕೈಬಿಟ್ಟ ಕೆಲಸಗಳೇ ಇಂದು ನಿಮಗೆ ಲಾಭ ತಂದುಕೊಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮತ್ತು ಕೃಷಿ ಆಸಕ್ತರಿಗೆ ಇಂದು ಉತ್ತಮ ದಿನ.
ವೃಷಭ ರಾಶಿಯವರು ಇಂದು ಸ್ವಲ್ಪ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವನ್ನು ಕಬಳಿಸಲು ಹಿತಶತ್ರುಗಳು ಕಾಯುತ್ತಿರಬಹುದು. ಅನಗತ್ಯ ಜನರ ಜೊತೆ ಸಮಯ ಕಳೆಯಬೇಡಿ. ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಹೊಸ ದಾರಿಗಳನ್ನು ಹುಡುಕುವಿರಿ.
ಮಿಥುನ ಹಾಗೂ ಕರ್ಕಾಟಕ ರಾಶಿ
ಮಿಥುನ ರಾಶಿಯವರಿಗೆ ಇಂದು ಆಪ್ತರ ನೆನಪು ಕಾಡಬಹುದು. ವ್ಯಾಪಾರದಲ್ಲಿ ಸಣ್ಣಪುಟ್ಟ ಆತಂಕಗಳಿದ್ದರೂ, ಕಲಾವಿದರಿಗೆ ಒಳ್ಳೆಯ ಪ್ರೋತ್ಸಾಹ ಸಿಗಲಿದೆ. ಗಡಿಬಿಡಿಯಲ್ಲಿ ಯಾರಿಗಾದರೂ ಮಾತು ಕೊಡುವ ಮುನ್ನ ಯೋಚಿಸಿ. ಕುಟುಂಬಕ್ಕೆ ಸಮಯ ನೀಡಲು ಪ್ರಯತ್ನಿಸಿ.
ಕರ್ಕಾಟಕ ರಾಶಿ
ಹೂಡಿಕೆ ಮಾಡುವಾಗ ಎಚ್ಚರದಿಂದಿರಿ, ಸರಿಯಾದ ಜಾಗದಲ್ಲಿ ಹಣ ತೊಡಗಿಸಿದರೆ ಲಾಭ ಖಂಡಿತ. ಪ್ರೇಮ ವಿಚಾರದಲ್ಲಿ ಸ್ವಲ್ಪ ಗೊಂದಲವಿರಬಹುದು. ಮನಸ್ಸಿನ ಶಾಂತಿಗಾಗಿ ಪ್ರಶಾಂತವಾದ ಜಾಗಕ್ಕೆ ಭೇಟಿ ನೀಡಿ. ಸುಳ್ಳು ಭರವಸೆಗಳನ್ನು ನೀಡಿ ಸಂಕಷ್ಟಕ್ಕೆ ಸಿಲುಕಬೇಡಿ.
ಸಿಂಹ ಹಾಗೂ ಕನ್ಯಾ ರಾಶಿ
ಸಿಂಹ ರಾಶಿಯವರು ಇಂದು ಪರೋಪಕಾರದ ಕೆಲಸದಲ್ಲಿ ತೊಡಗುವಿರಿ. ಸ್ನೇಹಿತರೊಡನೆ ಮೋಜು-ಮಸ್ತಿ ಮಾಡುವ ಮನಸ್ಸಾಗಲಿದೆ. ಆದರೆ, ಕೆಲಸದ ವಿಷಯದಲ್ಲಿ ಶಕ್ತಿ ಮೀರಿ ಶ್ರಮ ಹಾಕಬೇಡಿ, ಆರೋಗ್ಯ ಮುಖ್ಯ. ಕುಟುಂಬದವರು ನಿಮ್ಮಿಂದ ಹಣಕಾಸಿನ ಸಹಾಯ ನಿರೀಕ್ಷಿಸಬಹುದು.
ಕನ್ಯಾ ರಾಶಿಯವರಿಗೆ ಇಂದು ಸಂಗಾತಿಯ ಜೊತೆ ಹಣದ ವಿಷಯಕ್ಕೆ ಸಣ್ಣ ಮಾತಿನ ಚಕಮಕಿ ನಡೆಯಬಹುದು. ನಿಮ್ಮ ನೇರ ನುಡಿ ಕೆಲವರಿಗೆ ಇಷ್ಟವಾಗದೇ ಇರಬಹುದು. ವಿದೇಶಿ ಕೆಲಸದ ಪ್ರಯತ್ನದಲ್ಲಿದ್ದರೆ ಸದ್ಯಕ್ಕೆ ಸ್ವಲ್ಪ ನಿಧಾನಿಸಿ. ಇಂದಿನ ಕೆಲಸಗಳನ್ನು ಇಂದೇ ಮುಗಿಸುವುದು ನಿಮಗೆ ಒಳ್ಳೆಯದು.
ತುಲಾ ಹಾಗೂ ವೃಶ್ಚಿಕ ರಾಶಿ
ತುಲಾ ರಾಶಿಯವರಿಗೆ ತಾಳ್ಮೆ ಬಹಳ ಮುಖ್ಯ. ಯಾವುದೇ ಕೆಲಸ ತಕ್ಷಣಕ್ಕೆ ಫಲ ನೀಡುವುದಿಲ್ಲ ಎಂಬುದು ನೆನಪಿರಲಿ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗಲಿದೆ. ನಿಮ್ಮ ಮನಸ್ಸಿನ ತುಮುಲಗಳನ್ನು ಆಪ್ತರ ಬಳಿ ಹಂಚಿಕೊಳ್ಳಲು ಹಿಂಜರಿಯಬೇಡಿ.
ವೃಶ್ಚಿಕ ರಾಶಿಯವರಿಗೆ ಇಂದು ಶುಭ ಸುದ್ದಿ ಕಾದಿದೆ. ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಪೂರಕ ವಾತಾವರಣವಿದೆ. ನಕಾರಾತ್ಮಕ ಯೋಚನೆಗಳನ್ನು ಬಿಟ್ಟು ಹೊಸ ಹುರುಪಿನಿಂದ ಕೆಲಸ ಮಾಡಿ. ಉದ್ಯಮದಲ್ಲಿ ಗ್ರಾಹಕರ ವಿಶ್ವಾಸ ಗಳಿಸುವುದು ಮುಖ್ಯ.
ಧನು ಹಾಗೂ ಮಕರ ರಾಶಿ
ಧನು ರಾಶಿಯವರಿಗೆ ಇಂದು ಧನಲಾಭದ ಯೋಗವಿದೆ. ಕಲಾವಿದರ ಆಸೆಗಳು ಈಡೇರಲಿವೆ. ದಾಂಪತ್ಯದ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ, ಅಸೂಯೆ ಪಟ್ಟು ನಿಮ್ಮ ವ್ಯಕ್ತಿತ್ವವನ್ನು ಕೆಡಿಸಿಕೊಳ್ಳಬೇಡಿ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯಬೇಡಿ.
ಮಕರ ರಾಶಿಯವರಿಗೆ ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಂಭ್ರಮವಿರುತ್ತದೆ. ಅಧಿಕಾರ ಅಥವಾ ಸ್ಥಾನಮಾನ ಪಡೆಯಲು ಸ್ವಲ್ಪ ಖರ್ಚು ಮಾಡಬೇಕಾದೀತು. ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ತಂದೆಯ ಗೌರವ ಕಾಪಾಡಲು ಶ್ರಮಿಸುವಿರಿ.
ಕುಂಭ ಹಾಗೂ ಮೀನ ರಾಶಿ
ಕುಂಭ ರಾಶಿಯವರು ಇಂದು ಕೃಷಿ ಮತ್ತು ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ತೋರುವಿರಿ. ಜನರ ಜೊತೆ ಬೆರೆಯಲು ಸಮಯ ಸಿಗಲಿದೆ. ಆದರೆ, ದಾರಿಯಲ್ಲಿ ಹೋಗುವಾಗ ಅಥವಾ ಅಪರಿಚಿತರ ಜೊತೆ ಮಾತನಾಡುವಾಗ ಜಾಗ್ರತೆ ಇರಲಿ, ಅನಗತ್ಯ ಜಗಳಗಳು ಬೇಡ.
ಮೀನ ರಾಶಿಯವರಿಗೆ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ದಿನವಿದು. ವಾಹನ ಚಾಲನೆ ಮಾಡುವಾಗ ಅತೀವ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಜೀವನ ಸಂಗಾತಿಯಿಂದ ಸಂಪೂರ್ಣ ಸಹಕಾರ ಸಿಗಲಿದೆ. ನಿಮ್ಮ ಕೋಪವನ್ನು ಬೇರೆಯವರ ಮೇಲೆ ತೋರಿಸುವುದು ಬೇಡ, ಅದು ನಿಮ್ಮ ಇಮೇಜ್ ಕೆಡಿಸಬಹುದು.